ಬೆಂಗಳೂರು: ಕತ್ತಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಯುವಕರ ವ್ಹೀಲಿಂಗ್ ಹಾವಳಿ ಅತಿಯಾಗಿದೆ. ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆಗಳಿಂದ ನಗರದ ಹೊರವಲಯಗಳ ರಸ್ತೆಗಳತ್ತ ಮುಖ ಮಾಡಿದ್ದ, ವ್ಹೀಲಿಂಗ್ ಪುಂಡರು ಮತ್ತೆ ಜನನಿಬಿಡ ರಸ್ತೆಗಳಲ್ಲೇ ತಮ್ಮ ದುಸ್ಸಾಹಸ ಮುಂದುವರೆಸಿದ್ದಾರೆ.
ಲಗ್ಗೆರೆಯ ಔಟರ್ ರಿಂಗ್ ರೋಡ್ನಲ್ಲಿ ಪ್ರತಿನಿತ್ಯ ವ್ಹೀಲಿಂಗ್, ಕಿ.ಮೀ ಗಟ್ಟಲೇ ಅಪಾಯಕಾರಿ ಸ್ಟಂಟ್ನಲ್ಲಿ ಯುವಕರು ತೊಡಗುತ್ತಿದ್ದಾರೆ. ಇದರಿಂದ ಇತರೆ ವಾಹನ ಸವಾರರು ಸಂಚರಿಸುವುದೇ ಕಷ್ಟವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಪುಂಡರ ಹುಚ್ಚಾಟ.. ನಿಲ್ಲದ ಯುವಕರ ಬೈಕ್ ವ್ಹೀಲಿಂಗ್ ಶೋಕಿ