ETV Bharat / city

ಪಾರ್ಕಿಂಗ್ ಅವಾಂತರದಿಂದ ಕಾಲು ಕಳೆದುಕೊಂಡ ಬೈಕ್ ಸವಾರ - ಬೈಕ್​ ಲಾರಿ ಅಪಘಾತ

ಬೆಂಗಳೂರು ನಗರಕ್ಕೆ ಪ್ರವೇಶಿಸಲಾಗದೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಸರಕು ಸಾಗಾಣಿಕೆ ಲಾರಿಗೆ ಗುದ್ದಿ ಬೈಕ್ ಸವಾರನೊಬ್ಬ ತನ್ನ ಕಾಲು ಕಳೆದುಕೊಂಡ ಘಟನೆ ತಾಲೂಕಿನ ಎಡೇಹಳ್ಳಿ ಬಳಿ ನಡೆದಿದೆ. ಲಾರಿ ಚಾಲಕರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bike-lorry-accident-in-bangalore
ಬೈಕ್ ಸವಾರ
author img

By

Published : Jul 20, 2020, 5:54 PM IST

Updated : Jul 20, 2020, 6:18 PM IST

ನೆಲಮಂಗಲ : ಲಾಕ್ ಡೌನ್ ಹಿನ್ನೆಲೆ ಬೆಂಗಳೂರು ನಗರಕ್ಕೆ ಪ್ರವೇಶಿಸಲಾಗದೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಸರಕು ಸಾಗಾಣಿಕೆ ಲಾರಿಗೆ ಗುದ್ದಿ ಬೈಕ್ ಸವಾರ ತನ್ನ ಕಾಲು ಕಳೆದುಕೊಂಡ ಘಟನೆ ತಾಲೂಕಿನ ಎಡೇಹಳ್ಳಿ ಬಳಿ ನಡೆದಿದೆ.

ಹಾಸನ ಜಿಲ್ಲೆಯ ಜಾವಗಲ್ ನಿವಾಸಿ ಕಾಲು ಕಳೆದುಕೊಂಡ ಬೈಕ್ ಸವಾರ. ಸದ್ಯ ಗಾಯಾಳುವನ್ನು ಸ್ಥಳೀಯರು ಡಾಬಸ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪಾರ್ಕಿಂಗ್ ಅವಂತಾರದಿಂದ ಕಾಲು ಕಳೆದುಕೊಂಡ ಬೈಕ್ ಸವಾರ

ಘಟನೆಯ ವಿವರಣೆ

ಲಾಕ್​ಡೌನ್​ನಿಂದ ಬೆಂಗಳೂರು ನಗರಕ್ಕೆ ಪ್ರವೇಶಿಸಲಾಗದೆ ನೂರಾರು ಸರಕು ಸಾಗಾಣಿಕೆಯ ಲಾರಿಗಳನ್ನು ಬೆಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕಿಂಗ್​ ಮಾಡಲಾಗಿದೆ. ಹೆದ್ದಾರಿಯಲ್ಲಿ ಲಾರಿಗಳ ಪಾರ್ಕಿಂಗ್​​ಗಾಗಿ ನಿರ್ದಿಷ್ಟ ಜಾಗ ಗೊತ್ತು ಮಾಡಲಾಗಿದ್ದರೂ ಸಹ, ಲಾರಿ ಚಾಲಕರು ಬೇಜವಾಬ್ದಾರಿಯಿಂದ ಹೆದ್ದಾರಿಯಲ್ಲಿ ಬೇಕೆಂದಲ್ಲಿ ಪಾರ್ಕಿಂಗ್ ಮಾಡಿದ್ದಾರೆ.

ಸದ್ಯ, ಲಾರಿ ಚಾಲಕರ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಕಾಲು ಕಳೆದುಕೊಳ್ಳಬೇಕಾಯಿತು ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jul 20, 2020, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.