ಬೆಂಗಳೂರು: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗು ರಾಜ್ಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಆಪ್ತರಾದ ಸಚಿನ್ ನಾರಾಯಣ, ಸುನೀಲ್ಕುಮಾರ್ ಶರ್ಮಾ, ಆಂಜನೇಯ, ಹನುಮಂತಯ್ಯ ಹಾಗು ರಾಜೇಂದ್ರ ಅವರನ್ನು ಬಂಧಿಸದಂತೆ ಇಡಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಬಗ್ಗೆ ಪ್ರಶ್ನಿಸಲು ಜಾರಿ ಅಧಿಕಾರಿಗಳು ಮುಂದಾಗಿದ್ದರು. ಈ ಕುರಿತಂತೆ ಸಚಿನ್ ನಾರಾಯಣ, ಸುನೀಲ್ಕುಮಾರ್ ಶರ್ಮಾ ಹಾಗೂ ಆಂಜನೇಯ, ಹನುಮಂತಯ್ಯ, ರಾಜೇಂದ್ರ ಅವರಿಗೆ ಸಮನ್ಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಡಿಕೆಶಿ ಆಪ್ತರು ಕೋರ್ಟ್ ಮೊರೆ ಹೋಗಿ, ಬಂಧನ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಡಿಕೆಶಿ ಆಪ್ತರನ್ನು ಬಂಧಿಸದಂತೆ ಇಡಿಗೆ ಆದೇಶ ನೀಡಿದೆ.
ಇಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಕಾರಣ ಡಿಕೆಶಿ ಆಪ್ತರಿಗೆ ಡಬಲ್ ರಿಲೀಫ್ ಸಿಕ್ಕಿದೆ. ಒಂದೆಡೆ ಸುಪ್ರೀಂಕೋರ್ಟ್ ಇಡಿಗೆ ಬಂಧನ ಮಾಡದಂತೆ ಸೂಚನೆ ನೀಡಿದ್ರೆ, ಮತ್ತೊಂದೆಡೆ ಹೈಕೋರ್ಟ್ ಕೂಡ ಒಂದು ವಾರ ಬಂಧಿಸದಂತೆ ರಕ್ಷಣೆ ನೀಡಿದೆ.