ಬೆಂಗಳೂರು: ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್, ಅಧಿಕಾರವಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಾಮಾಜಿಕ ಕಳಕಳಿಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಇವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಸೈಬರ್ ಖದೀಮರು, ಹಣ ಕಳಿಸುವಂತೆ ಹಲವರಿಗೆ ಮನವಿ ಮಾಡಿದ್ದಾರೆ.
ತಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಅರಿತ ಭಾಸ್ಕರ್ ರಾವ್, ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ. ನನ್ನ ಹೆಸರಿನಲ್ಲಿ ಹಣ ಕೇಳುವ ಯಾವುದೇ ಸಂದೇಶ ಬಂದರೆ ದಯವಿಟ್ಟು ನಿರ್ಲಕ್ಷ್ಯಿಸಿ. ಬ್ಯಾಂಕ್ ಖಾತೆ ಹ್ಯಾಕ್ ಆದರೂ ಹಣ ಕೇಳುವುದಿಲ್ಲ ತಿಳಿಸಿದ್ದಾರೆ.
ಓದಿ: ಸುತ್ತಿಗೆಯಿಂದ ಪತ್ನಿ, ಮಕ್ಕಳನ್ನು ಹೊಡೆದು - ಹೊಡೆದು ಕೊಂದ ಕ್ರೂರಿ!
ಈ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಅಜಯ್ ಕುಮಾರ್ ಸಿಂಗ್ ಹಾಗೂ ಶಂಕರಿ ಬಿದರಿ ಅವರ ಬ್ಯಾಂಕ್ ಖಾತೆ ಹಾಗೂ ಇಮೇಲ್ ಖಾತೆಗಳನ್ನು ಕೂಡ ಹ್ಯಾಕ್ ಮಾಡಲಾಗಿತ್ತು.