ಬೆಂಗಳೂರು: ಆರ್ಥಿಕ ಸಂಕಷ್ಟದಿಂದಾಗಿ ಶ್ರೀ ಗುರುರಾಘವೇಂದ್ರ ಬ್ಯಾಂಕ್ನ ಬಸವನಗುಡಿಯ ಬ್ರಾಂಚ್ ಮುಚ್ಚಿದಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಬ್ಯಾಂಕ್ ಮುಂಭಾಗ ಬೆಳ್ಳಂಬೆಳಗ್ಗೆಯೇ ಜನ ಜಾಮಾಯಿಸಿಸಿದ್ದು, ಹಣ ಹೂಡಿರುವ ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ.
ಒಂದೇ ಬ್ರಾಂಚ್‌ನಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಷೇರುದಾರರಿದ್ದು, ನಾಳೆ ಸಂಜೆ ಬ್ಯಾಂಕ್ ಆಡಳಿತ ಮಂಡಳಿಯಿಂದ ಗ್ರಾಹಕರ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ.
ಇನ್ನು ಬ್ಯಾಂಕ್ ಮುಚ್ಚಲಾಗಿಲ್ಲ, ಆದಷ್ಟು ಬೇಗ ಮತ್ತೆ ಕಾರ್ಯಾರಂಭಗೊಳ್ಳೋದಾಗಿ ಆಡಳಿತ ಮಂಡಳಿ ಸೂಚನೆ ನೀಡದೆ. ಆರ್ಬಿಐನಿಂದ ಬ್ಯಾಂಕ್ಗೆ ನೀಡಿರುವ ಪರವಾನಗಿ ರದ್ದಾಗಿಲ್ಲ, ಭಯ ಪಡೋ ಅಗತ್ಯ ಇಲ್ಲ. ಸುಮಾರು 600 ಕೋಟಿ ರೂ. ಲೋನ್ ರಿಕವರಿಯಾಗದ ಹಿನ್ನೆಲೆ ಈ ರೀತಿಯಾಗಿದೆ ಎಂದು ಬ್ಯಾಂಕ್ ಮ್ಯಾನೇಜ್ಮೆಂಟ್ನವರು ತಿಳಿಸಿದ್ದಾರೆ.
ಇನ್ನು ರಾಮಕೃಷ್ಣ ಎಂಬುವವರು ಹದಿನೈದು ವರ್ಷಗಳ ಹಿಂದೆ ಸ್ಥಾಪಿಸಿದ್ದ ಕೋ-ಆಪರೇಟಿವ್ ಬ್ಯಾಂಕ್ ಇದಾಗಿದ್ದು, ಒಟ್ಟು 12 ಬ್ರಾಂಚ್ಗಳನ್ನು ಹೊಂದಿತ್ತು. ಶೇಕಡಾ 90% ರಷ್ಟು ಹಣ ಹೂಡಿಕೆ ಮಾಡಿರುವವರೆಲ್ಲಾ ಬ್ರಾಹ್ಮಣ ಸಮುದಾಯದವರೇ ಆಗಿದ್ದಾರೆ. ಈ ಸಂಬಂಧ ನಾಳೆ ಸಂಜೆ 6 ಗಂಟೆಗೆ ಸಭೆ ಕರೆಯಲಾಗಿದೆ, ಗ್ರಾಹಕರು ಬ್ಯಾಂಕಿನ ಗುರುತಿನ ಚೀಟಿಯನ್ನ ತೆಗೆದುಕೊಂಡು ಬನ್ನಿ ಎಂದು ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಕಡೆಯಿಂದ ನೋಟಿಸ್ ಹೊರಡಿಸಲಾಗಿದೆ. ಅದರೂ ಕಷ್ಟ ಪಟ್ಟು ದುಡಿದ ಹಣ ನೀರು ಪಾಲಾಗುತ್ತಾ ಎಂದು ಗ್ರಾಹಕರು ಆತಂಕದಲ್ಲಿದ್ದಾರೆ.