ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಟ್ಟು 198 ವಾರ್ಡ್ಗಳಿದ್ದು ಒಂದೊಂದು ವಾರ್ಡ್ನಲ್ಲಿ ಪ್ರಮುಖವಾಗಿ ಕನಿಷ್ಠ ಎರಡಾದರೂ ಪಾರ್ಕ್ಗಳಿರುತ್ತವೆ. ಲಾಕ್ಡೌನ್ ಸಡಿಲಿಕೆಯಾದ ಕಾರಣದಿಂದ ಜನರು ಪಾರ್ಕ್ಗಳಿಗೆ ಬರುವುದಕ್ಕೆ ಅನುಮತಿ ನೀಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳಗ್ಗೆ ಹಾಗೂ ಸಂಜೆ ಪಾರ್ಕ್ಗಳನ್ನು ತೆರೆಯಲಾಗುತ್ತಿದೆ.
ಕೊರೊನಾ ಮಹಾಮಾರಿ ಇರುವ ಕಾರಣ ಎಲ್ಲಾ ಪಾರ್ಕ್ ಅಸೋಸಿಯೇಷನ್ವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಾರ್ಕ್ಗಳ ಪ್ರಮುಖ ಗೇಟ್ ಗಳ ಬಳಿ ಎಡ ಹಾಗೂ ಬಲ ಬದಿಗಳಲ್ಲಿ ಪಾರ್ಕ್ ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆ ಮಾಡಲಾಗಿದೆ. ಹಾಗೆ ಪಾರ್ಕ್ ಎಂಟ್ರಿ ಕೊಡುವ ಮೊದಲು ಮಾಸ್ಕ್ ಧರಿಸಿಯೇ ಬರಬೇಕು. ಹಾಗೆಯೇ ಥರ್ಮಲ್ ಸ್ಕ್ರೀನ್ ನಡೆಸಿ ಒಳಗಡೆ ಬಿಡಲಾಗುತ್ತದೆ. ಒಂದು ವೇಳೆ ಕೊರೊನಾ ಲಕ್ಷಣಗಳು ಕಂಡುಬಂದರೆ ಅಂತವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕ್, ಲಾಲ್ ಬಾಗ್, ಜೆ.ಪಿ.ಪಾರ್ಕ್ಗಳಿಗೆ ಜನರು ಹೆಚ್ಚಾಗಿ ವಿಹಾರಕ್ಕೆ ಬರುತ್ತಿದ್ದು, ಪಾರ್ಕ್ಗಳಲ್ಲಿ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡೋಣ..
ಕಬ್ಬನ್ ಪಾರ್ಕ್
ವಿಧಾನಸೌಧ ಹಾಗೂ ಹೈಕೋರ್ಟ್ ಪಕ್ಕ ಇರುವಂತಹ ಈ ಕಬ್ಬನ್ ಪಾರ್ಕ್ ಹಲವಾರು ಮಂದಿಯ ಆಕರ್ಷಣೆಗಳಲ್ಲಿ ಒಂದು. ಇಲ್ಲಿ ಮುಂಜಾನೆ ಆರು ಗಂಟೆಯಿಂದ ಜನ ಓಡಾಟ, ಸೈಕಲ್ ಸವಾರಿ ಮಾಡುತ್ತಿದ್ದಾರೆ. ದಿನಕ್ಕೆ ಮೂರು ಸಾವಿರ ಮಂದಿ ಈ ಪಾರ್ಕ್ಗೆ ಬರುತ್ತಾರೆ. ಭಾನುವಾರದಂದು ಕುಟುಂಬ ಸಮೇತ ಇಲ್ಲಿಗೆ ಬರುತ್ತಾರೆ. ಲಾಕ್ಡೌನ್ ಜಾರಿಯಾದ್ಮೇಲೆ ಇಲ್ಲಿಗೆ ಬರುವವರು ಕಡಿಮೆಯಾಗಿದ್ದು, ಸದ್ಯಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ಲಾಲ್ ಬಾಗ್
ಇಲ್ಲಿ ವಿವಿಧ ರೀತಿಯ ಹೂಗಳ ತೋಟವೇ ಇದೆ. ಹೂವಿನ ತೋಟದ ಮಧ್ಯೆ ಮುಂಜಾನೆ ವಾಕಿಂಗ್ ಮಾಡಲು ಜಯನಗರ, ಸೌತ್ ಎಂಡ್ ಸರ್ಕಲ್, ಶಾಂತಿನಗರ ಹೀಗೆ ಮುಂತಾದ ಕಡೆಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಕೂಡಾ ಕಡಿಮೆಯಾಗಿದೆ.
ಸ್ಯಾಂಕಿ ಟ್ಯಾಂಕ್
ಸ್ಯಾಂಕಿ ಟ್ಯಾಂಕ್ ನಡಿಗೆದಾರರಿಗೆ ಮತ್ತು ಜಾಗಿಂಗ್ ಮಾಡುವವರಿಗೆ ಇದು ಫೇವರಿಟ್ ಸ್ಪಾಟ್. ಈ ಕೆರೆಯ ಸುತ್ತ ಮುಂಜಾನೆ ವಾಕಿಂಗ್ ಮಾಡಲು ಅವಕಾಶವಿದ್ದು, ಮಲ್ಲೇಶ್ವರಂ ಮಂದಿ ಇಲ್ಲಿಗೆ ಹೆಚ್ಚು ಮಂದಿ ಬರುತ್ತಾರೆ. ಕೊರೊನಾ ವೈರಸ್ ಭೀತಿಯಿಂದ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ಜೆ.ಪಿ.ಪಾರ್ಕ್
ಕಬ್ಬನ್ಪಾರ್ಕ್ ಹಾಗೂ ಲಾಲ್ಬಾಗ್ನಷ್ಟೇ ಹೆಸರು ಪಡೆದಿರುವ ಜೆ.ಪಿ.ಪಾರ್ಕ್ಗೆ ದಿನಕ್ಕೆ ಸಾವಿರಕ್ಕೂ ಹೆಚ್ಚು ವಾಕಿಂಗ್ ಮಾಡೋರು ಬರ್ತಾರೆ. ಸದ್ಯ ಜೆ.ಪಿ.ಪಾರ್ಕ್ ಅಸೋಸಿಯೇಷನ್ನವರು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಸಾರ್ವಜನಿಕರನ್ನು ಒಳಗೆ ಬಿಡುತ್ತಿದ್ದಾರೆ.