ETV Bharat / city

ಬಿಬಿಎಂಪಿ ಇಂದಿರಾ ಕ್ಯಾಂಟೀನ್​​ಗಳಿಗೆ ಜಲ ಮಂಡಳಿಯಿಂದ ನೀರು, ಒಳಚರಂಡಿ ಸೌಲಭ್ಯ ಕಟ್! - indira canteen problems

'188 ಇಂದಿರಾ ಕ್ಯಾಂಟೀನ್ ಹಾಗೂ ಕಿಚನ್​ಗಳಿಗೆ ನೀರು ಪೂರೈಕೆಯನ್ನು ಜಲ ಮಂಡಳಿ ಬಂದ್ ಮಾಡಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಹಾಕಿಸುತ್ತಿದ್ದೇವೆ. ಒಳಚರಂಡಿ ಸಂಪರ್ಕವನ್ನು ಕಡಿತ ಮಾಡಿದ್ದು, ಆಹಾರದ ಗುಣಮಟ್ಟ ಕೆಡುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಸಭೆಗಳಲ್ಲಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ'

Indira canteen
ಇಂದಿರಾ ಕ್ಯಾಂಟೀನ್
author img

By

Published : Nov 7, 2020, 3:37 AM IST

ಬೆಂಗಳೂರು: ಸರ್ಕಾರದ ಸ್ಥಳೀಯ ಸಂಸ್ಥೆಗಳ ನಡುವೆಯೇ ಸಮನ್ವಯ ಕೊರತೆ ಇರುವುದು ಮತ್ತೆ ದೃಢಪಟ್ಟಿದೆ. ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್​ಗಳಿಗೆ ನೀರು, ಒಳಚರಂಡಿ ವ್ಯವಸ್ಥೆಯನ್ನು ಜಲಮಂಡಳಿ ಸ್ಥಗಿತಗೊಳಿಸಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ಈ ಬಗ್ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ವಹಿಸಿರುವ ಸಂಸ್ಥೆಗಳಲ್ಲಿ ಒಂದಾದ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಯ ಮುಖ್ಯಸ್ಥ ಗೋವಿಂದ ಪೂಜಾರಿ ಮಾತನಾಡಿ ಬಹುತೇಕ 188 ಇಂದಿರಾ ಕ್ಯಾಂಟೀನ್ ಹಾಗೂ ಕಿಚನ್​ಗಳಿಗೆ ನೀರು ಪೂರೈಕೆಯನ್ನು ಜಲ ಮಂಡಳಿ ಬಂದ್ ಮಾಡಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಹಾಕಿಸುತ್ತಿದ್ದೇವೆ. ಒಳಚರಂಡಿ ಸಂಪರ್ಕವನ್ನು ಕಡಿತ ಮಾಡಿದ್ದು, ಆಹಾರದ ಗುಣಮಟ್ಟ ಕೆಡುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಸಭೆಗಳಲ್ಲಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.

ಬಿಬಿಎಂಪಿ ಇಂದಿರಾ ಕ್ಯಾಂಟೀನ್​ಗಳಿಗೆ ವಾಣಿಜ್ಯ ಉದ್ದೇಶದ ಬಿಲ್ ನೀಡುತ್ತಿರುವುದರಿಂದ ಹೊರೆಯಾಗುತ್ತಿದೆ. ಇದು ಸರ್ಕಾರದ, ಬಡವರ ಪರ ಯೋಜನೆಯಾಗಿರುವುದರಿಂದ ಡೊಮೆಸ್ಟಿಕ್ ಬಿಲ್ ನೀಡಲು ಆರಂಭದಿಂದಲೇ ಮನವಿ ಮಾಡಿಕೊಂಡು ಬರಲಾಗ್ತಿದೆ. ಈಗ ಬಿಲ್ ಬಾಕಿ ಇರುವುದರಿಂದ ಜಲಮಂಡಳಿ ಹಲವೆಡೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ.

ಇನ್ನು ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗೆ ಕಳೆದ ಆರು ತಿಂಗಳಿಂದ ಬಿಲ್ ಪಾವತಿ ಮಾಡದೇ ಇರುವುದರಿಂದು ಕ್ಯಾಂಟೀನ್ ನಿರ್ವಹಣೆ ಮುಂದುವರಿಸುವುದೇ ಸವಾಲಾಗಿದೆ ಎಂದು ಗೋವಿಂದ ಪೂಜಾರಿ ಹೇಳಿದರು.

ಒಟ್ಟಿನಲ್ಲಿ ಕ್ಯಾಂಟೀನ್ ಗುಣಮಟ್ಟ ಕಾಪಾಡಲು ನೀರು, ಒಳಚರಂಡಿ ಸೌಲಭ್ಯ ಮುಖ್ಯವಾಗಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡದೆ, ಸಮಸ್ಯೆ ತಕ್ಷಣ ಬಗೆಹರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.