ಬೆಂಗಳೂರು: ಆಮ್ಲಜನಕದ ಕೊರತೆಯಿಂದ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ 21 ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸಿ ಎಂದು ಯಲಹಂಕ ಬಳಿಯ ಚೈತನ್ಯ ಮೆಡಿಕಲ್ ಸೆಂಟರ್ ಆಸ್ಪತ್ರೆ ತಿಳಿಸಿದೆ.
ಚಿಂತಾಜನಕ ಸ್ಥಿತಿಯಲ್ಲಿ ಅನೇಕರಿದ್ದು, ಅವರಲ್ಲಿ ಕೆಲ ಸೋಂಕಿತರು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಸದ್ಯದ ನಗರದ ಸ್ಥಿತಿಯಲ್ಲಿ 21 ಸೋಂಕಿತರಿಗೆ ಐಸಿಯು ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಆಸ್ಪತ್ರೆ ಹೇಳುವ ಪ್ರಕಾರ ಆಮ್ಲಜನಕ ಈಗ ಇವರಿಗೆ ಅತ್ಯಗತ್ಯ ಆದರೆ ಈವರೆಗೆ ನಮಗೆ ಆಕ್ಸಿಜನ್ ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ಆಕ್ಸಿಜನ್ ಪೂರೈಕೆಗೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. (ಚಾಮರಾಜನಗರ ಆಕ್ಸಿಜನ್ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ)