ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಿದ ಕೊರೊನಾ ಕರ್ಫ್ಯೂ.. ಏಪ್ರಿಲ್ ನಲ್ಲಿ ದಾಖಲಾಗಿದ್ದ ಪ್ರಕರಣಗಳೆಷ್ಟು ?
ಬೆಂಗಳೂರು: ಕೊರೊನಾ ಕರ್ಫ್ಯೂನಿಂದಾಗಿ ಮಹಾನಗರ ಸ್ತಬ್ಧವಾಗಿದೆ. ಆರ್ಥಿಕ ಚಟುವಟಿಕೆ ಸಂಪೂರ್ಣ ಕುಸಿದಿದೆ. ಜೀವನಕ್ಕಾಗಿ ಲಕ್ಷಾಂತರ ಜನರು ಮನೆ ಬಿಟ್ಟು ಊರು ಸೇರಿದ್ದಾರೆ. ಇದರಿಂದಾಗಿ ನಗರದಲ್ಲಿ ಖದೀಮರಿಗೆ ಕೈಕಟ್ಟಿ ಹಾಕಿದಂತಾಗಿದೆ.
ಕೊರೊನಾ ಎರಡನೇ ಅಲೆ ಊಹೆಗೂ ಮೀರಿ ಹರಡಿದೆ. ಲಕ್ಷಾಂತರ ಜನ ನಗರ ತೊರೆದಿರುವುದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗಿವೆ. ಕಳೆದ ಏಪ್ರಿಲ್ನಲ್ಲಿ ನಗರದ ವಿವಿಧ ಕಡೆಗಳಲ್ಲಿ 63 ಮನೆಗಳ್ಳತನ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿವೆ. ಆದ್ರೆ ಮಾರ್ಚ್ನಲ್ಲಿ 96ಕ್ಕೂ ಹೆಚ್ಚು ಕೇಸ್ ವರದಿಯಾಗಿತ್ತು.
ಕೊರೊನಾದಿಂದ ಇಳಿಕೆಯಾದ ಅಪರಾಧ:
ಮಿತಿ ಮೀರಿದ ಕೊರೊನಾದಿಂದಾಗಿ ಕಳೆದ ತಿಂಗಳು ಏಪ್ರಿಲ್ 10 ರಿಂದ ರಾತ್ರಿ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಯಾಗಿತ್ತು. ಈ ಅವಧಿಯಲ್ಲಿ ನಗರದಲ್ಲಿ ಕ್ರೈಂ ಕಡಿಮೆಯಾಗಿದೆ. ಮಾರ್ಚ್ನಲ್ಲಿ ನಗರದಲ್ಲಿ 3,358 ಪ್ರಕರಣಗಳು ದಾಖಲಾದರೆ, ಏಪ್ರಿಲ್ನಲ್ಲಿ 2520ಕ್ಕೆ ಇಳಿಕೆಯಾಗಿದೆ.
ಈ ಪೈಕಿ 43 ರಾಬರಿ ಪ್ರಕರಣ ಯಥಾಸ್ಥಿತಿ ಕಾಯ್ದುಕೊಂಡಿದೆ. ಸರಗಳ್ಳತನ 6, ಮನೆಗಳ್ಳತನ 61, ಬೈಕ್ ಕಳವು 277 ಹಾಗೂ ಕಿಡ್ನ್ಯಾಪ್ 52 ಕೇಸ್ಗಳು ದಾಖಲಾಗಿವೆ. ಕರ್ಫ್ಯೂ ಮುಗಿಯುವರೆಗೂ ನಗರದಲ್ಲಿ ಅಪರಾಧಗಳು ಇನ್ನಷ್ಟು ಕಡಿಮೆಯಾಗಲಿವೆ. ಇದೇ ಅವಧಿಯಲ್ಲಿ ಮನೆ ಗಲಾಟೆ, ಕಿರುಕುಳ ಹಾಗೂ ಮತ್ತಿತರ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ನಡೆದ ಅಪರಾಧಗಳ ವಿವರ:
ಮಾರ್ಚ್ | ಏಪ್ರಿಲ್ | |
ರಾಬರಿ | 36 | 43 |
ಸರಗಳ್ಳತನ | 13 | 06 |
ಮನೆಗಳ್ಳತನ | 81 | 57 |
ಬೈಕ್ ಕಳ್ಳತನ | 408 | 277 |
ಅಪಹರಣ | 106 | 52 |
ಎನ್ಡಿಪಿಎಸ್ | 413 | 128 |