ETV Bharat / city

ರಸ್ತೆಯಲ್ಲಿ ಅನುಮತಿ ಇಲ್ಲದೆ ಗುಂಡಿ ಅಗೆದರೆ ಕಠಿಣ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

ಬೆಂಗಳೂರಿನ ರಸ್ತೆಗಳಲ್ಲಿ ವಿನಾಕಾರಣ ರಸ್ತೆ ಗುಂಡಿ ತೆಗೆಯುವಂತಿಲ್ಲ. ಅನುಮತಿ ಇಲ್ಲದೆ ರಸ್ತೆ ಗುಂಡಿ ಅಗೆದರೆ ಪ್ರಕರಣ ದಾಖಲು ಮಾಡುವಂತೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ಎಚ್ಚರಿಕೆ ರವಾನಿಸಿದ್ದಾರೆ.

bengaluru-commissioner-warns-road-diggers
ರಸ್ತೆಯಲ್ಲಿ ಅನುಮತಿ ಇಲ್ಲದೆ ಗುಂಡಿ ಅಗೆದರೆ ಕಠಿಣ ಕ್ರಮ: ಬಿಬಿಎಂಪಿ ಪಾಲಿಕೆ ಆಯುಕ್ತ ಗೌರವ್ ಗುಪ್ತ
author img

By

Published : Feb 2, 2022, 8:05 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರಸ್ತೆಯಲ್ಲಿ ಅನುಮತಿ ಇಲ್ಲದೆ ಗುಂಡಿ ಅಗೆದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.

ನಗರದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುಮತಿ ಇಲ್ಲದೆ ರಸ್ತೆ ಗುಂಡಿ ಅಗೆಯುವಂತಿಲ್ಲ. ಈಗಾಗಲೇ ವಾರ್ಡ್ ಇಂಜಿನಿಯರ್​ಗಳಿಗೆ ಸ್ಪಷ್ಟ ಸೂಚನೆ ಕೊಡಲಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ವಿನಾಕಾರಣ ರಸ್ತೆ ಗುಂಡಿ ತೆಗೆಯುವಂತಿಲ್ಲ. ಅನುಮತಿ ಇಲ್ಲದೆ ರಸ್ತೆ ಗುಂಡಿ ಅಗೆದರೆ ಪ್ರಕರಣ ದಾಖಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಮನಸ್ಸಿಗೆ ಬಂದಂತೆ ರಸ್ತೆ ಗುಂಡಿ ಅಗೆದರೆ ಬೆಸ್ಕಾಂ, ಜಲಮಂಡಳಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡಾಂಬರ್ ಮಾಡಿದ ರಸ್ತೆಯನ್ನು ಅನುಮತಿ ಇಲ್ಲದೆ ಅಗೆಯುತ್ತಿದ್ದರೆ ಎಚ್ಚರವಹಿಸಿ ಎಂದು ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪಾಲಿಕೆ ಇಂಜಿನಿಯರ್‌ ಸಸ್ಪೆಂಡ್: ಆರ್‌.ಆರ್‌. ನಗರ ವಲಯದ ಮಾಗಡಿ ಮುಖ್ಯ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ಮಹಿಳೆ ತಲೆಯ ಮೇಲೆ ಬೊಲೆರೋ ವಾಹನ ಹರಿದು ಮೃತಪಟ್ಟ ಘಟನೆ ಸಂಬಂಧ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜೆ.ಆರ್‌. ನಂದೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಗೌರವ್ ಗುಪ್ತ ಮಾಹಿತಿ ನೀಡಿದರು.

ಈ ರಸ್ತೆಗೆ ವೆಟ್ ಮಿಕ್ಸ್ (ಜಲ್ಲಿಕಲ್ಲು ಮತ್ತು ಪುಡಿ ಮಿಶ್ರಣ) ಹಾಕಿ, ಡಾಂಬರೀಕರಣ ಮಾಡಬೇಕಿತ್ತು. ಆದರೆ, ಕತ್ತರಿಸಿದ ರಸ್ತೆ ಭಾಗವನ್ನು ಸಕಾಲದಲ್ಲಿ ಅಭಿವೃದ್ಧಿ ಮಾಡಿರಲಿಲ್ಲ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೌರವ್ ಗುಪ್ತ ಹೇಳಿದ್ದಾರೆ.

ಇದನ್ನೂ ಓದಿ: 'Kidney secrets revealed' ಪುಸ್ತಕಕ್ಕೆ ಗೋಲ್ಡನ್‌ ಬುಕ್ ಅವಾರ್ಡ್.. ಬೆಂಗಳೂರು ವೈದ್ಯನಿಗೆ ಸಲಾಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.