ETV Bharat / city

ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್​ನ ಪಾತ್ರ ಮಹತ್ತರ: ಕೇಂದ್ರ ಸಚಿವ ರಾಜನಾಥ್ ಸಿಂಗ್ ಶ್ಲಾಘನೆ

author img

By

Published : Dec 13, 2021, 8:32 PM IST

Updated : Dec 13, 2021, 8:39 PM IST

ಭಾರತ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಘಟಕದಲ್ಲಿ ಇಂದಿನಿಂದ 19 ರವರೆಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

bel
ಬಿಇಎಲ್

ಬೆಂಗಳೂರು: ಭಾರತ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಘಟಕದಲ್ಲಿ ಇಂದಿನಿಂದ 19 ರವರೆಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್​ ಮೂಲಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್​ನ ಪಾತ್ರವನ್ನು ಪ್ರಶಂಸಿದರು. ರಕ್ಷಣಾ ಉತ್ಪಾದನೆಯ ಪ್ರಮುಖ 20 ಕಂಪನಿಗಳಲ್ಲಿ ಬಿಇಎಲ್ ಸ್ಥಾನವನ್ನು ಶ್ಲಾಘಿಸಿದರು. ಸಂಸ್ಥೆಯ ಉತ್ಪಾದನೆ ಹಾಗೂ ನಿರ್ಮಾಣಗಳಲ್ಲಿ ರಕ್ಷಣಾ ಮಂತ್ರಾಲಯದ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಬಿಇಎಲ್​ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ ಸೇರಿದಂತೆ ಎಲ್ಲ ನಿರ್ದೇಶಕ ವರ್ಗದವರು, ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಕ್ಷಣಾ ಸಲಕರಣೆಗಳ ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ನಿರ್ಮಿಸುವ ರಕ್ಷಣೆ ಹಾಗೂ ರಕ್ಷಣೇತರ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ.

ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ರಾಡರ್ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಹಾಗೂ ಇತರ ವಿಶಿಷ್ಟ ಉಪಕರಣಗಳ ಪ್ರದರ್ಶನ ಇದೆ. ಯುದ್ಧದಲ್ಲಿ ಬಳಸುವ ತೇಜಸ್ ಯುದ್ಧ ವಿಮಾನಕ್ಕೆ ಬೇಕಾದ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ರುಸ್ತಮ್, ಮಾಡೆಲ್, ಆಕಾಶ್ ಮಿಸೇಲ್ ಸಿಸ್ಟಮ್, ಮಿಸೈಲ್ ಲಾಂಚರ್, ರೇಡಾರ್, ಚುನಾವಣೆಯಲ್ಲಿ ಬಳಸುವ ವಿವಿಪ್ಯಾಡ್ ಮಿಶನ್, ಮಾನವ ರಹಿತ ಟ್ರ್ಯಾಕರ್, ವಿವಿಧ ಬಗೆಯ ಡ್ರೋನ್​ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಇದನ್ನೂ ಓದಿ: ಸೂಪರ್‌ಸಾನಿಕ್ ಕ್ಷಿಪಣಿ ನೆರವಿನ ಟಾರ್ಪಿಡೊ ಸಿಸ್ಟಂ ಯಶಸ್ವಿ ಉಡ್ಡಯನ!

Last Updated : Dec 13, 2021, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.