ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ.ಇ.ಎಲ್) ಸಂಸ್ಥೆಯು ಮೃತ ಉದ್ಯೋಗಿಗಳ ಕುಟುಂಬಗಳಿಗೆ ಹಣಕಾಸು, ವೈದ್ಯಕೀಯ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ನೀಡಲು ಯೋಜನೆಯನ್ನು ರೂಪಿಸಿದೆ.
ಮೃತ ಉದ್ಯೋಗಿಗಳ ಪತಿ ಅಥವಾ ಪತ್ನಿ / ಮಕ್ಕಳ ಜೀವನೋದ್ಧಾರಕ್ಕೆ ಬೇಕಾದ ತರಬೇತಿ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಬೆಂಬಲ ನೀಡುವುದಲ್ಲದೆ ಕುಟುಂಬ ನಿರ್ವಹಿಸಲು ಮಾಸಿಕ ಹಣಕಾಸು ಸಹಾಯ ಮಾಡುವ ಉದ್ದೇಶವನ್ನು ಕೂಡ ಹೊಂದಿದೆ. ಈ ಯೋಜನೆಯಡಿ 2021 ರ ಏಪ್ರಿಲ್ 1 ಅಥವಾ ತದನಂತರ ಕೋವಿಡ್ನಿಂದ ಮತ್ತು ಕೋವಿಡೇತರ ಮೃತಪಟ್ಟ ಉದ್ಯೋಗಿಗಳ ಕುಟುಂಬಗಳಿಗೆ ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್ 19ರ ಎರಡನೇ ಅಲೆಯು ಮಾರಣಾಂತಿಕವಾಗಿದೆ. ಕೋವಿಡ್ ಪ್ರಕರಣಗಳು ಕಲ್ಪನೆಗೂ ಮೀರಿ ಉದ್ಭವಗೊಂಡು ಕಂಪನಿಯಲ್ಲಿ ಹೆಚ್ಚು ಸಾವು ನೋವನ್ನು ಉಂಟು ಮಾಡಿದೆ. ಆದ್ದರಿಂದ ಬಿಇಎಲ್ ಆಡಳಿತ ವರ್ಗವು ಈ ಮೃತ ಉದ್ಯೋಗಿಗಳ ಕುಟುಂಬಗಳು ಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಜೀವನದಲ್ಲಿ ಮತ್ತೊಂದು ಹೆಜ್ಜೆ ಮುಂದಿಡುವುದು ಅವಶ್ಯವಾಗಿದೆ ಎಂದು ಎಂದು ಬಿ.ಇ.ಎಲ್ ಮಾನವ ಸಂಪನ್ಮೂಲ ನಿರ್ದೇಶಕರಾದ ಕೆ.ಎಂ.ಶಿವಕುಮಾರನ್ ತಿಳಿಸಿದ್ದಾರೆ.
ಮೃತ ಉದ್ಯೋಗಿಗಳ ಕುಟುಂಬಗಳ ನೆರವಿಗೆ ನಿಂತ BEL
ಕೋವಿಡ್ ವೇಳೆ ಮೃತಪಟ್ಟ ಉದ್ಯೋಗಿಗಳ ಕುಟುಂಬಸ್ಥರ ಕಷ್ಟಕ್ಕೆ ಸಾಥ್ ಕೊಡಲು ಬಿಇಎಲ್ ನಿರ್ಧರಿಸಿದೆ,