ಬೆಂಗಳೂರು: ಬಿಡಿಎ 6ನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಡಿಎ ನಿವೇಶನಗಳು ಹೆಚ್ಚಿನ ಬೆಲೆಗೆ ಮಾರಾಟವಾಗಿವೆ. ವಿಶೇಷವಾಗಿ ಈ ಬಾರಿ ಕೆಲವೊಂದು ನಿವೇಶನಗಳಿಗೆ ನಿರೀಕ್ಷೆಗೂ ಮೀರಿದ ಬೆಲೆ ಬಂದಿದೆ.
ಈ ಬಾರಿ ಒಂದರಿಂದ ಐದನೇ ಹಂತದ ಇ-ಹರಾಜಿನಲ್ಲಿ ಹರಾಜು ಆಗದೆ ಬಾಕಿ ಉಳಿದಿದ್ದ 365 ನಿವೇಶನಗಳನ್ನೂ ಮರು ಹರಾಜಿಗೆ ಅಳವಡಿಸಲಾಗಿತ್ತು. ಹರಾಜಿಗೆ ಹಾಕಿದ್ದ ಒಟ್ಟು 429 ನಿವೇಶನಗಳಲ್ಲಿ 271 ನಿವೇಶನಗಳು ಮಾರಾಟವಾಗಿವೆ. ಹರಾಜು ಪ್ರಕ್ರಿಯೆಯಲ್ಲಿ ಸುಮಾರು 1614 ಬಿಡ್ಡುದಾರರು ಭಾಗವಹಿಸಿದ್ದು, ಹರಾಜಿನಲ್ಲಿ ರೂ. 255.00 ಕೋಟಿ ಸಂದಾಯವಾಗಲಿದೆ.
ಆರನೇ ಹಂತದ ಹರಾಜು ಪ್ರಕ್ರಿಯೆ
ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ನಿವೇಶನಗಳು 429 ಇದ್ದು, ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು-271, ಹರಾಜಿನಿಂದ ಹಿಂಪಡೆದ ನಿವೇಶನಗಳ ಸಂಖ್ಯೆ-5, ಪ್ರತಿಕ್ರಿಯೆ ಬಾರದಿರುವ ನಿವೇಶನಗಳು -128, ಶೇಕಡಾ 5ಕ್ಕಿಂತ ಕಡಿಮೆ ಪ್ರತಿಕ್ರಿಯೆ ಬಂದಿರುವುದರಲ್ಲಿ 29 ನಿವೇಶನಗಳಿವೆ. ಒಟ್ಟು ನಿವೇಶನಗಳ ಮೂಲ ಬೆಲೆ ರೂ.166.32 ಕೋಟಿಯಾದರೆ, ಒಟ್ಟು ಹರಾಜು ಮೌಲ್ಯ ರೂ. 255.00 ಕೋಟಿ. ಇನ್ನು ಗಳಿಕೆ ರೂ. 88.28 ಕೋಟಿ.
ಇನ್ನು ಒಟ್ಟು ಬಿಡ್ಡುದಾರರು -1614 ಆದರೆ, ಒಟ್ಟು ನಿವೇಶನಗಳ ಸಂಖ್ಯೆ- 429 ಆಗಿದೆ. ಇದರಲ್ಲಿ ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು - 271. ಇನ್ನು ಹರಾಜಿನಿಂದ ಹಿಂಪಡೆದ ನಿವೇಶನಗಳ ಸಂಖ್ಯೆ-5. ಈ ಹಂತದ ಪ್ರಕ್ರಿಯೆ ಮುಗಿದ ಬಳಿಕ ಏಳನೇ ಹಂತದ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಡಿಎ ಪ್ರಕಟಣೆ ಹೊರಡಿಸಿದೆ.