ETV Bharat / city

ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಗೆ ಇಂದು ಕೊನೆ ದಿನ: ಅವಧಿ ವಿಸ್ತರಣೆಗೆ ಪಾಲಿಕೆ ನಕಾರ - ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ

ಸರ್ಕಾರದ ನಿಯಮದಂತೆ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮೊದಲ ತಿಂಗಳಲ್ಲಿಯೇ ಪಾವತಿಸುವ ಮಾಲೀಕರಿಗೆ ತೆರಿಗೆ ಮೊತ್ತದ ಶೇ.5 ರಿಯಾಯಿತಿ ನೀಡಲಾಗಿತ್ತು. ಮೊದಲ ತಿಂಗಳ 29 ದಿನಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ ಈ ವರ್ಷದ ಗುರಿಯ ಶೇ.22 ತೆರಿಗೆ ಸಂಗ್ರಹಣೆಯನ್ನು ಬಿಬಿಎಂಪಿ ಪೂರ್ಣಗೊಳಿಸಿದೆ.

BBMP
ಬಿಬಿಎಂಪಿ
author img

By

Published : Apr 30, 2022, 12:08 PM IST

ಬೆಂಗಳೂರು: ಆರ್ಥಿಕ ಸಾಲಿನ ಮೊದಲ ತಿಂಗಳಲ್ಲಿಯೇ 1 ಸಾವಿರ ಕೋಟಿ ರೂ. ತೆರಿಗೆ ಪಾವತಿ ಆಗಿದ್ದು, ಇದರಲ್ಲಿ ಶೇ.5 ರಿಯಾಯಿತಿ ಆಧಾರದಲ್ಲಿ 50 ಕೋಟಿ ರೂ ಪಾಲಿಕೆಗೆ ನಷ್ಟವಾಗಿದೆ. ಕೆಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಸೋಸಿಯೇಷನ್​ಗಳು ಹಾಗೂ ಆಸ್ತಿ ಮಾಲೀಕರಿಂದ ರಿಯಾಯಿತಿ ಅವಧಿಯನ್ನು ಮೇ 30ರವರೆಗೆ ವಿಸ್ತರಣೆ ಮಾಡಲು ಕೋರಿಕೆ ಸಲ್ಲಿಕೆಯಾಗಿತ್ತು. ಆದರೆ, ಬಿಬಿಎಂಪಿ ಈ ಮನವಿಯನ್ನು ತಿರಸ್ಕರಿಸಿದೆ.

ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಯನ್ನು ವಿಸ್ತರಣೆ ಮಾಡುವುದಿಲ್ಲ. ಕೋವಿಡ್ ಕಾರಣ ನೀಡಿ ಹಲವು ಸಾರ್ವಜನಿಕರು ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ ತಿರಸ್ಕರಿಸಲಾಗಿದೆ. ಒಂದು ವೇಳೆ, ಸರ್ಕಾರದಿಂದ ಸೂಚನೆ ಬಂದಲ್ಲಿ ವಿಸ್ತರಣೆ ಮಾಡಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

2022-23ನೇ ಸಾಲಿನ ಆಸ್ತಿ ತೆರಿಗೆಯ ಪಾವತಿ ಮೇಲೆ ಶೇ.5 ರಿಯಾಯಿತಿ ಪಡೆಯುವುದಕ್ಕೆ ಶನಿವಾರ (ಏ.30) ಕೊನೆಯ ದಿನವಾಗಿದೆ. ಮೇ 30ರವರೆಗೆ ತೆರಿಗೆ ರಿಯಾಯಿತಿ ವಿಸ್ತರಣೆಗೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಬಿಬಿಎಂಪಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಮೊದಲ ತಿಂಗಳ ಪಾವತಿಗೆ ಶೇ.5 ರಿಯಾಯಿತಿ: ಸರ್ಕಾರದ ನಿಯಮದಂತೆ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮೊದಲ ತಿಂಗಳಲ್ಲಿಯೇ ಪಾವತಿಸುವ ಮಾಲೀಕರಿಗೆ ತೆರಿಗೆ ಮೊತ್ತದ ಶೇ.5 ರಿಯಾಯಿತಿ ನೀಡಲಾಗುತ್ತದೆ. 2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 4,500 ಕೋಟಿ ರೂ. ಆದಾಯ ಸಂಗ್ರಹ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಮೊದಲ ತಿಂಗಳ 29 ದಿನಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ ಈ ವರ್ಷದ ಗುರಿಯ ಶೇ.22 ತೆರಿಗೆ ಸಂಗ್ರಹಣೆ ಪೂರ್ಣಗೊಂಡಿದೆ. 2021-22ನೇ ಸಾಲಿನಲ್ಲಿ ಏಪ್ರಿಲ್ 29ರ ಅವಧಿಗೆ 860 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಅಸಲು ಮೊತ್ತ ಪಾವತಿ: ಮೇ ತಿಂಗಳಲ್ಲಿ ಆಸ್ತಿ ತೆರಿಗೆಯ ಅಸಲು ಮೊತ್ತ ಪಾವತಿಸಬೇಕಿದೆ. ಜೂನ್ 1 ರಿಂದ ಮಾರ್ಚ್ 31ರವರೆಗೆ ಆಸ್ತಿ ತೆರಿಗೆ ಪಾವತಿಸುವವರು ವಾರ್ಷಿಕ ಬಡ್ಡಿ ಶುಲ್ಕ ಶೇ.9 ಹಣವನ್ನು ತೆರಿಗೆಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 'ಬಿ' ಖಾತಾ ಸ್ವತ್ತುಗಳು 'ಎ' ಖಾತಾಗೆ ವರ್ಗಾವಣೆ : ಪಾಲಿಕೆಯ ಬೊಕ್ಕಸಕ್ಕೆ ಹರಿದು ಬರಲಿದೆ ಹೆಚ್ಚಿನ ಆದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.