ETV Bharat / city

ಬಿಬಿಎಂಪಿ ಶಾಲೆಗಳ ರೋಶಿನಿ ಯೋಜನೆಯ ಕನಸು ಭಗ್ನ: ಅಸಲಿ ಬಣ್ಣ ಬಯಲು!

ರೋಶಿನಿ ಯೋಜನೆ. ಇದು ಬಿಬಿಎಂಪಿ ಶಾಲೆಗಳನ್ನು 500 ಕೋಟಿ ರೂಪಾಯಿ ಸಿಎಸ್​ಆರ್ ಅನುದಾನದಲ್ಲಿ ಅತ್ಯುನ್ನತ ಗುಣಮಟ್ಟಕ್ಕೇರಿಸಿ, ಹೈಟೆಕ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಮಕ್ಕಳ ಕೈಗೆ ಬ್ಯಾಗ್, ಪುಸ್ತಕದ ಬದಲು ಟ್ಯಾಬ್, ಪೆನ್ ಡ್ರೈವ್ ಕೊಟ್ಟು, ಡಿಜಿಟಲ್ ಬೋರ್ಡ್​ಗಳಲ್ಲಿ, ಅತ್ಯಾಧುನಿಕ ಕ್ಲಾಸ್ ರೂಂಗಳಲ್ಲಿ ಶಿಕ್ಷಣ ಕೊಡಲಾಗುತ್ತೆ ಎಂಬೆಲ್ಲ ಕಥೆ ಹೇಳಿದ್ದ ಯೋಜನೆಯ ಅಸಲಿ ಬಣ್ಣ ಸಂಪೂರ್ಣ ಬಯಲಾಗಿದೆ.

500 ಕೋಟಿ ರೂಪಾಯಿ ಸಿಎಸ್ ಆರ್ ಅನುದಾನ
author img

By

Published : Jun 21, 2019, 2:09 AM IST

ಬೆಂಗಳೂರು: ಮೈಕ್ರೋಸಾಫ್ಟ್ ಸಹಭಾಗಿತ್ವದ ರೋಶಿನಿ ಯೋಜನೆ ಪಾಲಿಕೆಯೊಂದಿಗೆ ಕೈಜೋಡಿಸಿ, ಖಾಸಗಿ ಶಾಲೆಗಳಿಗೆ ಸಮಾನವಾಗಿ ಬಿಬಿಎಂಪಿ ಶಾಲೆಗಳ ಗುಣಮಟ್ಟ ಏರಿಸುತ್ತೇವೆಂದು ಭಾಷಣದ ಮೂಲಕ ಉದ್ಘಾಟನೆ ಮಾಡಿದ್ದರು.ಆದರೆ ಒಂದು ವರ್ಷವಾದರೂ ಪ್ರಗತಿ ಕಾಣುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

156 ಶಾಲೆಗಳಲ್ಲಿ ಯೋಜನೆ ಜಾರಿಯಾಗುವುದಿರಲಿ, ಕೇವಲ ಪೈಲೆಟ್ ಪ್ರಾಜೆಕ್ಟ್​ಗಾಗಿ ಆಯ್ಕೆ ಮಾಡಿಕೊಂಡ ನಗರದ ಏಳು ಶಾಲೆಗಳಲ್ಲೂ ಕಿಂಚಿತ್ತೂ ಪ್ರಗತಿಯಾಗಿಲ್ಲ. ಇನ್ನು ಯೋಜನೆ ಯಾವಾಗ ಆರಂಭಿಸುತ್ತೀರಾ, ಕಟ್ಟಡ ನವೀಕರಣ ಯಾವಾಗ ಎಂದು ಕಾರ್ಪೋರೇಟರ್ ಏನಾದರೂ, ರೋಶಿನಿ ಯೋಜನೆಯ ಮುಖ್ಯಸ್ಥ ಅಲಿ ಸೇಠ್​ಗೆ ಫೋನ್ ಮಾಡಿದರೆ, ಆತ ಸಂಪರ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಇದಕ್ಕೆ ತಾಜಾ ಉದಾಹರಣೆಯೆಂದರೆ, ರೋಶಿನಿ ಯೋಜನೆಯ ಪೈಲೆಟ್ ಯೋಜನೆಗೆ ಆಯ್ಕೆಯಾಗಿದ್ದ ಗಾಂಧಿನಗರದ ಹೈಸ್ಕೂಲ್. ಕಳೆದ ಡಿಸೆಂಬರ್​ನಲ್ಲೇ ಕಟ್ಟಡ ನವೀಕರಣಗೊಂಡು, ಈ ವರ್ಷದ ಶಾಲಾ ಮಕ್ಕಳಿಗೆ ಹೊಸ ತಂತ್ರಜ್ಞಾನದೊಂದಿಗೆ ಶಿಕ್ಷಣ ಆರಂಭಿಸುವ ಕನಸು ಹೊತ್ತಿದ್ದ ಈ ಶಾಲೆಯ ಕತೆಯನ್ನು , ವಾರ್ಡ್ ಕಾರ್ಪೋರೇಟರ್ ಲತಾ ರಾಥೋಡ್ ಈ ಟಿವಿ ಭಾರತ್ ಜೊತೆ ಎಳೆಎಳೆಯಾಗಿ ಬಿಚ್ಚಿಟ್ಟರು. ರೋಶಿನಿ ಯೋಜನೆ ಬಹುದೊಡ್ಡ ಬೋಗಸ್ ಎಂದು ಗೊತ್ತಾದ ಬಳಿಕ ತಮ್ಮಲ್ಲಿದ್ದ ಅನುದಾನವನ್ನೇ ಬಳಸಿ ಕಟ್ಟಡದ ನವೀಕರಣಕ್ಕೆ ಮುಂದಾಗಿದ್ದೇವೆ. ಮುಂದಿನ ವಾರ ಶಂಕುಸ್ಥಾಪನೆ ಮಾಡಿ, ನವೀಕರಣ ಆರಂಭಿಸಲಾಗುವುದು ಎಂದರು.

ಖರ್ಚೆಲ್ಲಾ ಪಾಲಿಕೆಯದ್ದು, ಲಾಭ ಮಾತ್ರ ಯಾರದ್ದೋ

ಹೆಸರಿಗೆ ಮಾತ್ರ ರೋಶಿನಿ ಯೋಜನೆ, ಖರ್ಚೆಲ್ಲಾ ಪಾಲಿಕೆಯದ್ದು, ಲಾಭ ಮಾತ್ರ ಯಾರದ್ದೋ?

ಕೇವಲ ಒಂದೆರಡು ಮೀಟಿಂಗ್​ಗಳನ್ನು ನಡೆಸಿ, ಯೋಜನೆ ಬಗ್ಗೆ ಬಣ್ಣಬಣ್ಣದ ಮಾತುಗಳನ್ನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈಯಲ್ಲಿ ಉದ್ಘಾಟನೆಗೊಳಿಸಿದಾಗ ಪಾಲಿಕೆ ಶಿಕ್ಷಣ ಸಮಿತಿಯ ವಿಶೇಷ ಆಯುಕ್ತ ರವೀಂದ್ರ ಅವರ ಆಸಕ್ತಿ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಇಲ್ಲ. ಕೇವಲ ಹೆಸರಿಗೆ ರೋಶಿನಿ ಯೋಜನೆಯೆಂದು ಬೋರ್ಡ್ ಹಾಕಿಸಿ, ಖರ್ಚೆಲ್ಲ ಪಾಲಿಕೆ ವತಿಯಿಂದಲೇ ಮಾಡಿ, ಖಾಸಗಿ ವ್ಯಕ್ತಿಯಾದ ಅಲಿ ಸೇಠ್​ಗೆ ಲಾಭ ಮಾಡಿಕೊಡುವ ಹುನ್ನಾರ ಈ ಯೋಜನೆಯದ್ದು ಎಂಬ ಮಾತುಗಳು ಕೇಳಿ ಬರ್ತಿವೆ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿದ ಒಡಂಬಡಿಕೆ ಕಡತಗಳನ್ನ ಕೇಳಿದ್ರೂ ಅಧಿಕಾರಿಗಳು ಕೊಡದೆ ಹಿಂದೇಟು ಹಾಕುತ್ತಿದ್ದಾರೆ. ಅಲಿ ಸೇಠ್ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರ್ತಿವೆ. ಅಸಲಿಗೆ ಮೈಕ್ರೋಸಾಫ್ಟ್ ಸಂಸ್ಥೆಯಿಂದಲೂ ದುಡ್ಡು ಪಡೆದು, ಇತ್ತ ಪಾಲಿಕೆಯಿಂದಲೂ ಖರ್ಚು ಮಾಡಿಸಿ, ಯೋಜನೆಗೆ ಮಾತ್ರ 'ರೋಶಿನಿ' ಎಂದು ತನ್ನ ಮಗಳ ಹೆಸರಿಟ್ಟು ಲಾಭ ಮಾಡಿಕೊಳ್ಳುವ ಹುನ್ನಾರ ಅಡಗಿದೆ ಎಂಬ ಮಾತು ಕೇಳಿಬರುತ್ತಿದೆ.

ಅನುದಾನದ ಹಣ ಸಿದ್ದವಾಗಿಟ್ಟಿದ್ದ ಗಾಂಧಿನಗರ ಶಾಲೆಯೇ ಅಭಿವೃದ್ಧಿಯಾಗಿಲ್ಲ:

ಬಸವನಗುಡಿಯ ಪಾಲಿಕೆ ಶಾಲೆಯದ್ದೂ ಇದೇ ಕಥೆ. ರೋಶಿನಿ ಯೋಜನೆಯಿಂದ ಪಾಲಿಕೆ ಶಾಲೆ ಅಭಿವೃದ್ಧಿ ಹೊಂದುತ್ತೆ ಎಂದು ಕಾದಿದ್ದೆವು. ಹೀಗಾಗಿ ರಿಪೇರಿ ಮಾಡಿಸಿರಲಿಲ್ಲ. ಈಗ ನಮ್ಮ ಅನುದಾನವೂ ಬೇರೆ ಕಡೆ ಖರ್ಚಾಗಿದೆ. ರೋಶಿನಿ ಯೋಜನೆಯದ್ದೂ ಪತ್ತೆ ಇಲ್ಲ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಪ್ರಶ್ನೆ ಮಾಡ್ತೇನೆ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಪ್ರತಿಕ್ರಿಯಿಸಿದ್ರು.

ಯೋಜನೆ ಕುರಿತು ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ವಿಶೇಷ ಆಯುಕ್ತ ರವೀಂದ್ರ ಅವರಿಗೆ ಕೇಳಿದ್ರೆ, ರೋಶಿನಿ ಯೋಜನೆ ಪ್ರಗತಿಯಲ್ಲಿದೆ. ಎಲ್ಲವೂ ಟೆಂಡರ್ ಹಂತದಲ್ಲಿದೆ. ಎಲ್ಲಾ ಶಾಲೆಗಳಿಗೂ ಸುಣ್ಣ, ಬಣ್ಣ,ಪೈಂಟ್ ಹೊಡಿಸಲಾಗ್ತಿದೆ ಅಂತ ಸುಳ್ಳಿನ ಕಂತೆಯನ್ನೇ ಹೇಳ್ತಾರೆ. ಅಲ್ಲದೆ ಕಾರ್ಪೋರೇಟರ್ಸ್​ಗಳೇ ಆಸಕ್ತಿ ತೋರುತ್ತಿಲ್ಲ ಎಂದು ರೋಶಿನಿ ಮುಖ್ಯಸ್ಥನ ಪರ ವಹಿಸಿ ಮಾತಾಡ್ತಾರೆ. ಅಸಲಿಗೆ ಟೋಟಲ್ ಸ್ಟೇಷನ್ ಸರ್ವೇ ಮಾಡಿ, ನವೀಕರಣಕ್ಕೆ ಅನುದಾನದ ಹಣ ಸಿದ್ದವಾಗಿಟ್ಟಿದ್ದ ಗಾಂಧಿನಗರ ಶಾಲೆಯೇ ಅಭಿವೃದ್ಧಿಯಾಗಿಲ್ಲ. ಇನ್ನು ಫ್ರೇಜರ್ ಟೌನ್​​ನ ಪಾಲಿಕೆ ಶಾಲೆಗಳಲ್ಲಿ ಇದ್ದ ಬೋರ್ಡ್ ತೆಗೆದುಹಾಕಲಾಗಿದೆ. ಅಲ್ಲದೇ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಇದನ್ನು ಕೇಳುವ ಅಧಿಕಾರವನ್ನೂ ಪಾಲಿಕೆ ಶಾಲಾ ಶಿಕ್ಷಕರು ಕಳೆದುಕೊಂಡಿದ್ದಾರೆ.

ಇವಿಷ್ಟೇ ಅಲ್ಲ, ರೋಶಿನಿ ಯೋಜನೆಯ ಪೈಲೆಟ್ ಶಾಲೆಗಳಾಗಿ ಆಯ್ಕೆಯಾದ ಗಾಂಧಿನಗರ, ಕ್ಲೀವ್ ಲೆಂಡ್ ಟೌನ್, ಬಸವನಗುಡಿ, ಬೈರಸಂದ್ರ, ಗಂಗಾನಗರ, ಬೈರವೇಶ್ವರ ನಗರದ ಯಾವುದೇ ಪಾಲಿಕೆ ಶಾಲೆಯಲ್ಲಿ ಕಿಂಚಿತ್ತೂ ಅಭಿವೃದ್ಧಿಯಾಗಿಲ್ಲ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು, ಮೇಯರ್ ಎಚ್ಚೆತ್ತುಕೊಳ್ಳದಿದ್ರೆ ಯೋಜನೆ ಹಳ್ಳಹಿಡಿಯುವುದರ ಜೊತೆಗೆ ಪಾಲಿಕೆ ಶಾಲೆಗಳ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ದುಡ್ಡು ಮಾಡೋದಂತೂ ಗ್ಯಾರಂಟಿ ಎನ್ನಲಾಗುತ್ತಿದೆ.

Intro:ಬಿಬಿಎಂಪಿ ಶಾಲೆಗಳ ರೋಶಿನಿ ಯೋಜನೆ ಕನಸು ಭಗ್ನ- ಪೈಲೆಟ್ ಪ್ರಾಜೆಕ್ಟ್ ಶಾಲೆಗಳ ಕಥೆಯೇನಾಯ್ತು ಗೊತ್ತಾ?

ಬೆಂಗಳೂರು- ರೋಶಿನಿ ಯೋಜನೆ... ಇದು ಬಿಬಿಎಂಪಿ ಶಾಲೆಗಳನ್ನು 500 ಕೋಟಿ ರೂಪಾಯಿ ಸಿಎಸ್ ಆರ್ ಅನುದಾನದಲ್ಲಿ ಅತ್ಯುನ್ನತ ಗುಣಮಟ್ಟಕ್ಕೇರಿಸಿ, ಹೈಟೆಕ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಮಕ್ಕಳ ಕೈಗೆ ಬ್ಯಾಗ್, ಪುಸ್ತಕದ ಬದಲು ಟ್ಯಾಬ್, ಪೆನ್ ಡ್ರೈವ್ ಕೊಟ್ಟು, ಡಿಜಿಟಲ್ ಬೋರ್ಡ್ಗಳಲ್ಲಿ, ಅತ್ಯಾಧುನಿಕ ಕ್ಲಾಸ್ ರೂಂ ಗಳಲ್ಲಿ ಶಿಕ್ಷಣ ಕೊಡಲಾಗುತ್ತೆ ಎಂಬೆಲ್ಲಾ ಬಣ್ಣಬಣ್ಣದ ಕಥೆ ಹೇಳಿದ್ದ ಯೋಜನೆಯ ಅಸಲಿ ಬಣ್ಣ ಸಂಪೂರ್ಣ ಬಯಲಾಗಿದೆ.

ಟೆಕ್ ಅವಾಂತ ಗಾರ್ಡ್ ಹಾಗೂ ಮೈಕ್ರೋಸಾಫ್ಟ್ ಸಹಭಾಗಿತ್ವದ ರೋಶಿನಿ ಯೋಜನೆ, ಪಾಲಿಕೆಯೊಂದಿಗೆ ಕೈಜೋಡಿಸಿ, ಖಾಸಗಿ ಶಾಲೆಗಳಿಗೆ ಸರಿಸಮಾನವಾಗುವಂತೆ ಗುಣಮಟ್ಟ ಏರಿಸುತ್ತೇವೆ ಎಂದೆಲ್ಲ ಬರೀ ಭಾಷಣದ ಮೂಲಕ ಉದ್ಘಾಟನೆಗೊಂಡ ಬಳಿಕ, ಒಂದು ವರ್ಷವಾದರೂ ಪ್ರಗತಿ ಕಾಣುತ್ತಿಲ್ಲ. 150 ಶಾಲೆಗಳಲ್ಲಿ ಯೋಜನೆ ಜಾರಿಯಾಗುವುದಿರಲಿ, ಕೇವಲ ಪೈಲೆಟ್ ಪ್ರಾಜೆಕ್ಟ್ ಗಾಗಿ ಆಯ್ಕೆ ಮಾಡಿಕೊಂಡ ನಗರದ ಏಳು ಶಾಲೆಗಳಲ್ಲೂ ಕಿಂಚಿತ್ತೂ ಪ್ರಗತಿಯಾಗಿಲ್ಲ. ಇನ್ನು ಯೋಜನೆ ಯಾವಾಗ ಆರಂಭಿಸುತ್ತೀರಾ, ಕಟ್ಟಡ ನವೀಕರಣ ಯಾವಾಗ ಎಂದು ಕಾರ್ಪೋರೇಟರ್ ಏನಾದರೂ, ರೋಶಿನಿ ಯೋಜನೆಯ ಮುಖ್ಯಸ್ಥ ಅಲಿ ಸೇಠ್ ಗೆ ಫೋನ್ ಮಾಡಿದರೆ, ಆತ ಸಂಪರ್ಕಕ್ಕೇ ಸಿಗುತ್ತಿಲ್ಲ.

ಇದಕ್ಕೆ ತಾಜಾ ಉದಾಹರಣೆಯೆಂದರೆ, ರೋಶಿನಿ ಯೋಜನೆಯ ಪೈಲೆಟ್ ಯೋಜನೆಗೆ ಆಯ್ಕೆಯಾಗಿದ್ದ ಗಾಂಧಿನಗರದ ಹೈಸ್ಕೂಲ್.
ಕಳೆದ ಡಿಸೆಂಬರ್ ನಲ್ಲೇ ಕಟ್ಟಡ ನವೀಕರಣಗೊಂಡು, ಈ ವರ್ಷದ ಶಾಲಾ ಮಕ್ಕಳಿಗೆ ಹೊಸ ತಂತ್ರಜ್ಞಾನದೊಂದಿಗೆ ಶಿಕ್ಷಣ ಆರಂಭಿಸುವ ಕನಸು ಹೊತ್ತಿದ್ದ ಈ ಶಾಲೆಯ ಕತೆಯನ್ನು , ವಾರ್ಡ್ ಕಾರ್ಪೋರೇಟರ್ ಲತಾ ರಾಥೋಡ್ ಈ ಟಿವಿ ಭಾರತ್ ಜೊತೆ ಎಳೆಎಳೆಯಾಗಿ ಬಿಚ್ಚಿಟ್ಟರು. ರೋಶಿನಿ ಯೋಜನೆ ಬಹುದೊಡ್ಡ ಬೋಗಸ್ ಯೋಜನೆ ಎಂದು ಗೊತ್ತಾದ ಬಳಿಕ ತಮ್ಮಲ್ಲಿದ್ದ ಅನುದಾನವನ್ನೇ ಬಳಸಿ ಕಟ್ಟಡದ ನವೀಕರಣಕ್ಕೆ ಮುಂದಾಗಿದ್ದಾರೆ. ಮುಂದಿನ ವಾರ ಶಂಕುಸ್ಥಾಪನೆ ಮಾಡಿ, ನವೀಕರಣ ಆರಂಭಿಸಲಾಗುವುದು ಎಂದರು.

ಹೌದು ಕೇವಲ ಒಂದೆರಡು ಮೀಟಿಂಗ್ ಗಳನ್ನು ನಡೆಸಿ, ಯೋಜನೆ ಬಗ್ಗೆ ಬಣ್ಣಬಣ್ಣದ ಮಾತುಗಳನ್ನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಕೈಯಲ್ಲಿ ಉದ್ಘಾಟನೆಗೊಳಿಸಿದ್ದಾಗ ಪಾಲಿಕೆ ಶಿಕ್ಷಣ ಸಮಿತಿಯ ವಿಶೇಷ ಆಯುಕ್ತ ರವೀಂದ್ರ ಅವರ ಆಸಕ್ತಿ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಇಲ್ಲ.
ಕೇವಲ ಹೆಸರಿಗೆ ರೋಶಿನಿ ಯೋಜನೆಯೆಂದು ಬೋರ್ಡ್ ಹಾಕಿಸಿ, ಖರ್ಚೆಲ್ಲಾ ಪಾಲಿಕೆ ವತಿಯಿಂದಲೇ ಮಾಡಿ, ಖಾಸಗಿ ವ್ಯಕ್ತಿಯಾದ ಅಲಿ ಸೇಠ್ ಗೆ ಲಾಭ ಮಾಡಿಕೊಡುವ ಹುನ್ನಾರ ಈ ಯೋಜನೆಯದ್ದು ಎಂಬ ಮಾತುಗಳು ಕೇಳಿ ಬರ್ತಿವೆ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿದ ಒಡಂಬಡಿಕೆ ಕಡತಗಳನ್ನ ಕೇಳಿದ್ರೂ ಅಧಿಕಾರಿಗಳು ಕೊಡುತ್ತಿಲ್ಲ, ಹಿಂದೇಟು ಹಾಕುತ್ತಿದ್ದಾರೆ, ಅಲಿಸೇಠ್ ಜೊತೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರ್ತಿವೆ.. ಅಸಲಿಗೆ ಮೈಕ್ರೋಸಾಫ್ಟ್ ಸಂಸ್ಥೆಯಿಂದಲೂ ದುಡ್ಡು ಪಡೆದು, ಇತ್ತ ಪಾಲಿಕೆಯಿಂದಲೂ ಖರ್ಚು ಮಾಡಿಸಿ, ಯೋಜನೆಗೆ ಮಾತ್ರ 'ರೋಶಿನಿ' ಎಂದು ತನ್ನ ಮಗಳ ಹೆಸರಿಟ್ಟು ಲಾಭ ಮಾಡಿಕೊಳ್ಳುವ ಹುನ್ನಾರ ಅಡಗಿದೆ ಎಂಬ ಮಾತು ಕೇಳಿಬರುತ್ತಿದೆ.

ಇನ್ನು ಬಸವನಗುಡಿಯ ಪಾಲಿಕೆ ಶಾಲೆಯದ್ದೂ ಇದೇ ಕಥೆ! ರೋಶಿನಿ ಯೋಜನೆಯಿಂದ ಪಾಲಿಕೆ ಶಾಲೆ ಅಭಿವೃದ್ಧಿ ಹೊಂದುತ್ತೆ ಎಂದು ಕಾದಿದ್ದೆವು. ಹೀಗಾಗಿ ರಿಪೇರಿ ಮಾಡಿಸಿರಲಿಲ್ಲ. ಈಗ ನಮ್ಮ ಅನುದಾನವೂ ಬೇರೆ ಕಡೆ ಖರ್ಚಾಗಿದೆ. ರೋಶಿನಿ ಯೋಜನೆಯದ್ದೂ ಪತ್ತೆ ಇಲ್ಲ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಪ್ರಶ್ನೆ ಮಾಡ್ತೇನೆ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಪ್ರತಿಕ್ರಿಯಿಸಿದ್ರು.

ಯೋಜನೆ ಕುರಿತು ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ವಿಶೇಷ ಆಯುಕ್ತ ರವೀಂದ್ರ ಅವರಿಗೆ ಕೇಳಿದ್ರೆ, ರೋಶಿನಿ ಯೋಜನೆ ಪ್ರಗತಿಯಲ್ಲಿದೆ. ಎಲ್ಲವೂ ಟೆಂಡರ್ ಹಂತದಲ್ಲಿದೆ. ಎಲ್ಲಾ ಶಾಲೆಗಳಿಗೂ ಸುಣ್ಣಬಣ್ಣ,ಪೈಂಟ್ ಹೊಡಿಸಲಾಗ್ತಿದೆ ಅಂತ ಸುಳ್ಳಿನ ಕಂತೆಯನ್ನೇ ಹೇಳ್ತಾರೆ.ಅಲ್ಲದೆ ಕಾರ್ಪೋರೇಟರ್ಸ್ ಗಳೇ ಆಸಕ್ತಿ ತೋರುತ್ತಿಲ್ಲ ಎಂದು ರೋಶಿನಿ ಮುಖ್ಯಸ್ಥನ ಪರ ವಹಿಸಿ ಮಾತಾಡ್ತಾರೆ. ಅಸಲಿಗೆ ಟೋಟಲ್ ಸ್ಟೇಷನ್ ಸರ್ವೇ ಮಾಡಿ, ನವೀಕರಣಕ್ಕೆ ಅನುದಾನದ ಹಣ ಸಿದ್ದವಾಗಿಟ್ಟಿದ್ದ ಗಾಂಧಿನಗರ ಶಾಲೆಯೇ ಅಭಿವೃದ್ಧಿಯಾಗಿಲ್ಲ. ಇನ್ನು ಫ್ರೇಜರ್ ಟೌನ್ ನ ಪಾಲಿಕೆ ಶಾಲೆಗಳಲ್ಲಿ ಇದ್ದ ಬೋರ್ಡ್ ಅನ್ನೂ ತೆಗೆದುಹಾಕಲಾಗಿದೆ. ಅಲ್ಲದೇ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಇದನ್ನು ಕೇಳುವ ಅಧಿಕಾರವನ್ನೂ ಪಾಲಿಕೆ ಶಾಲಾ ಶಿಕ್ಷಕರು ಕಳೆದುಕೊಂಡಿದ್ದಾರೆ.

ಇವಿಷ್ಟೇ ಅಲ್ಲ, ರೋಶಿನಿ ಯೋಜನೆಯ ಪೈಲೆಟ್ ಶಾಲೆಗಳಾಗಿ ಆಯ್ಕೆಯಾದ ಗಾಂಧಿನಗರ, ಕ್ಲೀವ್ ಲೆಂಡ್ ಟೌನ್, ಬಸವನಗುಡಿ, ಬೈರಸಂದ್ರ, ಗಂಗಾನಗರ, ಬೈರವೇಶ್ವರ ನಗರದ ಯಾವುದೇ ಪಾಲಿಕೆ ಶಾಲೆಯಲ್ಲಿ ಕಿಂಚಿತ್ತೂ ಅಭಿವೃದ್ಧಿಯಾಗಿಲ್ಲ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು, ಮೇಯರ್ ಎಚ್ಚೆತ್ತುಕೊಳ್ಳದಿದ್ರೆ ಯೋಜನೆ ಹಳ್ಳಹಿಡಿಯುವುದರ ಜೊತೆಗೆ ಪಾಲಿಕೆ ಶಾಲೆಗಳ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ದುಡ್ಡು ಮಾಡೋದಂತೂ ಗ್ಯಾರಂಟಿ.

ಸ್ಪೆಷಲ್ ಸ್ಟೋರಿ

ಸೋಮಶೇಖರ್ ಸರ್ ಪರಿಶೀಲಿಸಿದ್ದಾರೆ.

Visual sent through mojo
KN_BNG_03_20_Roshini_bbmp_project_script_sowmya_7202707
Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.