ಬೆಂಗಳೂರು : ಬೇಸಿಗೆ ಎರಡು ದಿನದ ಮಳೆಗೆ ಬೆಂಗಳೂರು ನಗರ ಅಕ್ಷರಶಃ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ 169ಕ್ಕೂ ಹೆಚ್ಚು ಅಪಾಯದ ಸ್ಥಳಗಳನ್ನು ಗುರುತಿಸಿದೆ. ಕಳೆದ ಮೂರು ದಿನಗಳಲ್ಲಿ ಬಂದ ಮಳೆಗೆ ಹಾನಿ ಆದ ಪ್ರದೇಶಗಳ ಆಧಾರಲ್ಲಿ ಪಟ್ಟಿ ಸಿದ್ದಪಡಿಸಿದೆ. ನಗರದಲ್ಲಿರುವ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನೀರು ನಿಲ್ಲುವ ರಸ್ತೆಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ.
ಬಾಣಸವಾಡಿ ರಸ್ತೆಗಳ ಪರಿಸ್ಥಿತಿ ಅಧೋಗತಿದೆ ಇಳಿದಿದೆ. ಅಶೋಕನಗರ, ಹೆಬ್ಬಾಳ ಹಾಗೂ ಜೀವನ್ ಭೀಮಾನಗರ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಕೆಆರ್‌ಪುರಂ, ಕೆಂಗೇರಿ, ಹಲಸೂರು ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಪಾಲಿಕೆ ಗುರುತಿಸಿದೆ.
ನೀರು ನುಗ್ಗಿರುವ ಒಂದೊಂದು ಮನೆಯೂ 30 ಸಾವಿರ ರೂ.ಗಳಿಗೂ ಹೆಚ್ಚು ನಷ್ಟು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೇಸಿಗೆಯಲ್ಲಿ ಸುರಿದ ಮಳೆಯಿಂದ ಅನಾಹುತದಿಂದ ಪಾಠ ಕಲಿತಿರುವ ಬಿಬಿಎಂಪಿ ಮಳೆಗಾಲ ಆರಂಭಕ್ಕೂ ಮುನ್ನ ಮಳೆ ಹಾವಳಿ ತಪ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ.
ಮಳೆ ಹಾವಳಿಯಿಂದ ಮುಂಗಾರಿಗೂ ಮುನ್ನ ನರಕವಾದ ಕಾಮಾಕ್ಯ ಬಡಾವಣೆ : ಮೊನ್ನೆ ಬಿದ್ದ ಮಳೆಯಿಂದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿನ್ನೆ ಸುರಿದ ಮಳೆಗೆ ಎಸ್.ಕೆ ಎಂಟರ್‌ಪ್ರೈಸಸ್‌ಗೆ ನೀರು ನುಗ್ಗಿದೆ. ಪರಿಣಾಮ ಸಂಗ್ರಹಿಸಿಡಲಾಗಿದ್ದ ಮೆಡಿಕಲ್ ಕಿಟ್‌ಗಳು ನೀರುಪಾಲಾಗಿದ್ದು, ಮಾಲೀಕರಿಗೆ ಸುಮಾರು 20 ಲಕ್ಷದಷ್ಟು ನಷ್ಟವಾಗಿದೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟದಿಂದ ಹಳಿಯ ಮೇಲೆ ನಮ್ಮ ಮೆಟ್ರೋ.. ವರ್ಷದಿಂದ ವರ್ಷಕ್ಕೆ ನಷ್ಟದ ಹಾದಿಯತ್ತ..