ETV Bharat / city

ಜೆ.ಸಿ.ರಸ್ತೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾದ ಪಾಲಿಕೆ: ಫ್ಲೈ ಓವರ್ ನಿರ್ಮಾಣಕ್ಕೆ ಪ್ರಸ್ತಾವನೆ - ನೂತನ ಫ್ಲೈ ಓವರ್

ಜೆ.ಸಿ. ರಸ್ತೆಯ ಟ್ರಾಫಿಕ್ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವ ಯೋಜನೆ ಕುರಿತು ಕಳೆದ ಬಾರಿಯಂತೆ ಮತ್ತೊಮ್ಮೆ ವಿಸ್ತೃತ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.

BBMP Proposal for Flyover Construction
ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾದ ಪಾಲಿಕೆ
author img

By

Published : Mar 29, 2022, 12:39 PM IST

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್​ ಕಿರಿಕಿರಿ ಹೆಚ್ಚುತ್ತಲೇ ಇದೆ. ನಗರದಲ್ಲಿ ಅತ್ಯಂತ ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆಗಳಲ್ಲಿ ಜೆ.ಸಿ ರಸ್ತೆಯೂ ಒಂದು. ಇಲ್ಲಿನ ಟ್ರಾಫಿಕ್ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವ ಯೋಜನೆಯ ಕುರಿತು ಕಳೆದ ಬಾರಿಯಂತೆ ಮತ್ತೊಮ್ಮೆ ವಿಸ್ತೃತ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ಕೇಂದ್ರ ಭಾಗದಲ್ಲಿರುವ ಪ್ರಮುಖ ರಸ್ತೆಯಾದ ಜೆ.ಸಿ. ರಸ್ತೆಯಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಬೆಳಗ್ಗೆ ಮತ್ತು ಸಂಜೆ ವಾಹನಗಳ ಪ್ರಮಾಣ ಅಧಿಕವಾಗಿರುತ್ತದೆ. ಕೇವಲ 1.5 ಕಿ.ಮೀ ರಸ್ತೆ ಕ್ರಮಿಸಲು ಕನಿಷ್ಠ 20 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಜೆ.ಸಿ.ರಸ್ತೆಯಿಂದ ಕಸ್ತೂರಬಾ ಗಾಂಧಿ ರಸ್ತೆವರೆಗೆ ಒಟ್ಟು 1.7 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಪ ಲೋಕಾಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಫಣೀಂದ್ರ

ಈ ಮೇಲ್ಸೇತುವೆ ನಿರ್ಮಾಣವಾದಲ್ಲಿ ವಾಹನ ಸವಾರರಿಗೆ ಮಿನರ್ವ ವೃತ್ತ, ರವೀಂದ್ರ ಕಲಾಕ್ಷೇತ್ರ, ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್), ಎಲ್‌ಐಸಿ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣಿ, ಹಡ್ಸನ್ ವೃತ್ತ ಹಾಗೂ ಕಾರ್ಪೋರೇಷನ್ ವೃತ್ತ ಸೇರಿ ಒಟ್ಟು 7 ಟ್ರಾಫಿಕ್ ಸಿಗ್ನಲ್‌ಗಳು ತಪ್ಪಲಿವೆ. ಕೇವಲ ಎರಡರಿಂದ ಐದು ನಿಮಿಷದಲ್ಲಿ ಮಿನರ್ವ ವೃತ್ತದಿಂದ ಕೆ.ಜಿ. ರಸ್ತೆ ಅಥವಾ ಕಸ್ತೂರಬಾ ಗಾಂಧಿ ರಸ್ತೆಗೆ ತಲುಪಬಹುದು ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.