ಬೆಂಗಳೂರು: ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ವಿರುದ್ಧ ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ...ರಾಜ್ಯದಲ್ಲಿಂದು 428 ಮಂದಿಗೆ ಕೊರೊನಾ ದೃಢ: 3 ಸೋಂಕಿತರು ಬಲಿ
ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ಮಾನಸಿಕ ಒತ್ತಡ ಮತ್ತು ವೈಯಕ್ತಿಕ ತೇಜೋವಧೆ ಮಾಡಿರುವ ಆರೋಪದ ಮೇಲೆ ಎನ್.ಆರ್.ರಮೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಆಯುಕ್ತರ ಅನುಮತಿ ಕೋರಿದ್ದರು. ಅದಕ್ಕೆ ಷರತ್ತುಗಳೊಂದಿಗೆ ಆಯುಕ್ತರು ಅನುಮತಿ ನೀಡಿದ್ದಾರೆ.
ಷರತ್ತುಗಳು: ದೂರಿಗೆ ಸಂಬಂಧಿಸಿದ ವಿಷಯ ಅಭಿಯಂತರರ ವೈಯಕ್ತಿಕ ವಿಚಾರವಾಗಿದ್ದು, ಪಾಲಿಕೆಯ ಹಸ್ತಕ್ಷೇಪ ಇರುವುದಿಲ್ಲ. ದೂರಿನ ನಿರ್ವಹಣೆಗೆ ಉಂಟಾಗುವ ಖರ್ಚು-ವೆಚ್ಚ ದೂರುದಾರರೇ ನೋಡಿಕೊಳ್ಳಬೇಕು. ಈ ಪ್ರಕರಣಕ್ಕೆ ಪಾಲಿಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗಿರುವುದಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ.