ಬೆಂಗಳೂರು: ಕೇಂದ್ರ ಸರ್ಕಾರ ಕೋವಿಡ್ ಹೊಸ ತಳಿಗಳ ಬಗ್ಗೆ ಎಚ್ಚರಿಕೆ ಕೊಟ್ಟರೂ ಪಾಲಿಕೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಸಾರ್ವಜನಿಕರ ಕರೆಗೆ ಸ್ಪಂದಿಸಬೇಕಾದ, ಗೊದಲಗಳಿಗೆ ಉತ್ತರಿಸಬೇಕಾದ, ಹೊಸ ರೂಪಾಂತರಿ ತಳಿ ಒಮಿಕ್ರಾನ್ ಹರಡದಂತೆ ತಕ್ಷಣ ಕ್ರಮಕೈಗೊಳ್ಳಲು ಬಳಕೆಯಗುವ ಸಹಾಯವಾಣಿ ಕೇಂದ್ರ ಹಲವು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ.
ಪ್ರತಿ ದಿನ ಒಮಿಕ್ರಾನ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ರಾಜ್ಯದಲ್ಲಿ 31 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರಿನದ್ದೇ ಸಿಂಹಪಾಲು. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಕಣ್ಗಾವಲು ಒದಗಿಸುವ ಅಗತ್ಯತೆ ಇದೆ. ಇತ್ತೀಚೆಗಷ್ಟೇ ದೇಶದ ಎಲ್ಲ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಇಲಾಖೆ ಆಯುಕ್ತ ರಾಜೇಶ್ ಭೂಷಣ್ ಸುತ್ತೋಲೆ ಹೊರಡಿಸಿ ಒಮಿಕ್ರಾನ್ ನಿರ್ಬಂಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ, ಪಾಲಿಕೆ ಮುನ್ನೆಚ್ಚರಿಕೆ ವಹಿಸುತ್ತಿಲ್ಲ.
ಬಿಬಿಎಂಪಿಯ 1,533 ಹೆಲ್ಪ್ ಲೈನ್ ನಂಬರ್ ಕಾರ್ಯನಿರ್ವಹಿಸದೇ ತಿಂಗಳುಗಳೇ ಕಳೆದಿವೆ. ಇದಕ್ಕೆಂದೇ ಬಿಬಿಎಂಪಿ ಎರಡನೇ ಅಲೆ ಸಂದರ್ಭದಲ್ಲಿ ಲಕ್ಷ ಲಕ್ಷ ರೂಪಾಯಿ ಖರ್ಚು ಕೂಡ ಮಾಡಲಾಗಿತ್ತು. ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿದರೆ ತಾವು ಕರೆ ಮಾಡಿದ ಚಂದಾದದರು ಕಾರ್ಯನಿರತರಾಗಿದ್ದಾರೆ ಎಂದು ಕರೆ ಕಡಿತಗೊಳ್ಳುತ್ತಿದೆ.
ಇದನ್ನೂ ಓದಿ: ಪತಿ ತೀರಿಕೊಂಡ ಕಾರಣಕ್ಕೆ ಪತ್ನಿ ವಿರುದ್ಧದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಪ್ರಕರಣ ರದ್ದು ಮಾಡಲು ಆಗಲ್ಲ: ಹೈಕೋರ್ಟ್