ಬೆಂಗಳೂರು: ಎರಡು ಡೋಸ್ ವ್ಯಾಕ್ಸಿನೇಷನ್ನಿಂದ ಶುರುವಾಗಿ ಸದ್ಯ ಬೂಸ್ಟರ್ ಡೋಸ್ ನೀಡಲಾಗ್ತಿದೆ. ಕೋವಿಡ್ ಲಸಿಕೆ ಮೊದಲ ಹಾಗೂ ಎರಡನೇ ಡೋಸ್ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಬೂಸ್ಟರ್ ಡೋಸ್ಗೆ ಸಿಗ್ತಿಲ್ಲ. ಈ ಮಧ್ಯೆ ನಾಲ್ಕನೇ ಅಲೆ ಭೀತಿ ಶುರುವಾಗಿದ್ದು, ಬೂಸ್ಟರ್ ಡೋಸ್ಗೆ ಅಭಾವದ ಕೂಗು ಕೇಳಿ ಬರ್ತಿದೆ.
ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂಸ್ಟರ್ ಡೋಸ್ ಅಭಾವ ವಿಚಾರವಾಗಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದು, ಪಾಲಿಕೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೂಸ್ಟರ್ ಡೋಸ್ ಲಭ್ಯವಿದೆ. ಎಲ್ಲಿ ಅಲಭ್ಯವಿದೆಯೋ ಅಲ್ಲಿ ಸಮಸ್ಯೆ ಪರಿಹರಿಸುವ ಕೆಲಸ ಮಾಡ್ತೀವಿ. ಮೊದಲ ಡೋಸ್ ಮತ್ತೆ ಎರಡನೇ ಡೋಸ್ ಲಸಿಕೆ ಯಾರೆಲ್ಲಾ ಪಡೆದಿದ್ದಾರೋ ಅವರು ಬೂಸ್ಟರ್ ಡೋಸ್ ಪಡೆಯಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸದ್ಯ ಬೇಸಿಗೆ ರಜೆ ಇದೆ. ಅದಕ್ಕಾಗಿ ಮಕ್ಕಳು ಲಸಿಕೆ ಪಡೆಯುತ್ತಿಲ್ಲ. ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ತಿಳಿ ಹೇಳಲಾಗುವುದು ಎಂದರು.
ಮೊದಲ ಡೋಸ್:
- ಹೆಲ್ತ್ ಕೇರ್ ವರ್ಕ್ಸ್- 7,65,815
- ಫ್ರಂಟ್ ವರ್ಕ್ಸ್- 9,44,966
- 12-14 ವರ್ಷ - 15,66,822
- 15-17 ವರ್ಷ- 25,42,344
- 18-44 ವರ್ಷ- 2,92,34,079
- 44-59 ವರ್ಷ- 1,15,72,816
- 60 ವರ್ಷ ಮೇಲ್ಪಟ್ಟವರು- 73,01,298
- ಮೊದಲ ಡೋಸ್ ಪಡೆದವರ ಒಟ್ಟು ಸಂಖ್ಯೆ- 5,02,55,473
ಎರಡನೇ ಡೋಸ್:
- ಹೆಲ್ತ್ ಕೇರ್ ವರ್ಕ್ಸ್- 7,56,526
- ಫ್ರಂಟ್ ವರ್ಕ್ಸ್- 9,39,770
- 12-14 ವರ್ಷ - 65,399
- 15-17 ವರ್ಷ- 21,22,612
- 18-44 ವರ್ಷ- 2,78,241,54
- 44-59 ವರ್ಷ- 1,13,59,929
- 60 ವರ್ಷ ಮೇಲ್ಪಟ್ಟವರು- 71,87,083
- ಒಟ್ಟಾರೆ - 5,02,55,473
ಬೂಸ್ಟರ್ ಡೋಸ್:
- ಹೆಲ್ತ್ ಕೇರ್ ವರ್ಕ್ಸ್- 3,64,699
- ಫ್ರಂಟ್ ವರ್ಕ್ಸ್- 2,02,302
- 18 ವರ್ಷ ಮೇಲ್ಪಟ್ಟವರು- 46,296
- 60 ವರ್ಷ ಮೇಲ್ಪಟ್ಟವರು- 10,25,700
- ಒಟ್ಟು- 16,85,293
ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ