ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ. ಕೇವಲ 10 ದಿನದಲ್ಲೇ ಸಕ್ರಿಯ ಕೇಸ್ಗಳು 40 ಸಾವಿರ ದಾಟಿದೆ. ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದೆ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಬಹಳ ವೇಗವಾಗಿ ಹರಡುತ್ತಿದೆ. ಸೋಂಕಿನ ಪ್ರಮಾಣ ಕಡಿಮೆ ಮಾಡಬೇಕು, ನಿಯಂತ್ರಣ ಮಾಡಬೇಕು ಅಂದರೆ ಮಾಸ್ಕ್ ಧರಿಸುವುದು ಒಂದೇ ದಾರಿ. ಮಾಸ್ಕ್ ಹಾಕಿದರೆ ಯಾವುದೇ ತೊಂದರೆಯಾಗಲ್ಲ. ಜೊತೆಗೆ ಲಸಿಕೆ ಪಡೆಯುವುದರಿಂದ ಕೊರೊನಾ ನಿಯಂತ್ರಣ ಮಾಡಬಹುದು.
ವೈರಸ್ನಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಎರಡನೇ ಅಲೆಗಿಂತ ತೀವ್ರತೆ ಕಡಿಮೆ ಇರುತ್ತೆ. ಸೋಂಕು ಬಂದರೂ ಕೂಡ ಆತಂಕಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಈಗಾಗಲೇ ಮೊಬೈಲ್ ಟ್ರಯಾಜಿಂಗ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಅಂತ ತಿಳಿಸಿದರು.
ಚಾಲನೆಗೂ ಮುನ್ನ ಬೂಸ್ಟರ್ ಡೋಸ್ ಪಡೆದುಕೊಂಡ್ರಾ ಸಿದ್ದರಾಮಯ್ಯ?
ಸಿದ್ದರಾಮಯ್ಯ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರಾ ಎಂಬ ಮಾಹಿತಿ ಇಲ್ಲ. ಬೂಸ್ಟರ್ ಡೋಸ್ ಅನ್ನ ಪ್ರಧಾನಿ ಮೋದಿಯವರ ನಿರ್ದೇಶನದಂತೆ ಇಂದಿನಿಂದ ನೀಡಲಾಗುತ್ತಿದೆ. ನಾವಂತೂ ಯಾರಿಗೂ ಕೊಟ್ಟಿಲ್ಲ, ಯಾರು ಪಡೆದಿರುವ ಮಾಹಿತಿ ಇದೆ ಕೊಡಿ ಅಂತ ಆಯುಕ್ತರು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಇದ್ದಾಗ ಊರು ಬಿಟ್ಟು ಹೋದ ಜನರು:
ವೀಕೆಂಡ್ ಕರ್ಫ್ಯೂ ಜಾರಿಯಾಗ್ತಿದ್ದ ಹಾಗೇ ಬೆಂಗಳೂರು ವಾಸಿಗಳು ತಮ್ಮತಮ್ಮ ಊರುಗಳಿಗೆ ತೆರಳಿದ್ದರು. ಇದೀಗ ಎಲ್ಲರೂ ಮತ್ತೆ ರಾಜಧಾನಿಗೆ ಮರಳಿದ್ದು, ಇಲ್ಲಿಂದ ಅಲ್ಲಿಗೆ ಸೋಂಕು ಹರಡುವಿಕೆಗೆ ಕಾರಣರಾಗ್ತಿದ್ದಾರೆ. ಹೀಗಾಗಿ, ಇದಕ್ಕೆ ಪಾಲಿಕೆಯ ಏನಾದರೂ ಕ್ರಮವಹಿಸುತ್ತಾ ಎಂಬುದಕ್ಕೆ ಉತ್ತರಿಸಿದ ಆಯುಕ್ತರು, ಜನರ ಮೇಲೆ ಯಾವಾಗಲೂ ನಿಗಾ ಇಡುವ ಕೆಲಸ ಆಗಬಾರದು. ಜನರೇ ಸ್ವಯಂಪ್ರೇರಿತರಾಗಿ ಸಾರ್ವಜನಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.
ಕೊರೊನಾ ಹೆಚ್ಚದ್ರೆ ಅವ್ರಿಗೆ ಸಮಸ್ಯೆ ಆಗುವುದು. ಹೀಗಾಗಿ ಕೋವಿಡ್ ಟೆಸ್ಟ್ ಅನ್ನ 30 ಸಾವಿರದಿಂದ 70 ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಅವಶ್ಯಕತೆ ಇದ್ದರೆ ಇನ್ನಷ್ಟು ಹೆಚ್ಚು ಟೆಸ್ಟ್ ಮಾಡಲಾಗುವುದು ಎಂದರು.
ಓದಿ: ರಾಜ್ಯಾದ್ಯಂತ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ಸಿಎಂ ಚಾಲನೆ: ಸ್ಪುಟ್ನಿಕ್ ಲಸಿಕೆ ಪಡೆದವರಿಗಿಲ್ಲ ಬೂಸ್ಟರ್ ಡೋಸ್