ಬೆಂಗಳೂರು : ನಗರದಲ್ಲಿ ಒಮಿಕ್ರಾನ್ ವೈರಸ್ ಪತ್ತೆ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ ಆಗಿದೆ. ಒಮಿಕ್ರಾನ್ ಸೋಂಕಿತ ವೈದ್ಯ ಕಾನ್ಫರೆನ್ಸ್ವೊಂದರಲ್ಲಿ ಭಾಗಿಯಾಗಿದ್ರು.
ಹೀಗಾಗಿ, ಆ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೂ ಬಿಬಿಎಂಪಿ ಟೆಸ್ಟಿಂಗ್ ಮಾಡಿದೆ. ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ನಲ್ಲಿ ಕಳೆದ ನ.19, 20 ಹಾಗೂ 21 ರಂದು ಕಾನ್ಫರೆನ್ಸ್ ನಡೆದಿತ್ತು. ಈ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ ಹೋಟೆಲ್ನ ಸುಮಾರು 35 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದೆ.
ಹೋಟೆಲ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಊಟ, ತಿಂಡಿ ನೀಡಿದ್ದರು ಹಾಗೂ ಕಾರ್ಯಕ್ರಮದ ಅತಿಥಿಗಳನ್ನ ಬರಮಾಡಿಕೊಂಡಿದ್ದರು.
ಹೀಗಾಗಿ, ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸೋಂಕಿತ ವೈದ್ಯರು ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಹೀಗಾಗಿ, ಇತರರಿಗೆ ಸೋಂಕು ತಗುಲಿರಬಹುದು ಎನ್ನುವ ಕಾರಣಕ್ಕೆ ಬಿಬಿಎಂಪಿ ಟೆಸ್ಟ್ ಮಾಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮೊದಲ ಒಮಿಕ್ರಾನ್ ಕೇಸ್ ಪತ್ತೆ: ಭಾರತದಲ್ಲಿ ಒಟ್ಟು 5 ಮಂದಿಗೆ ಹೊಸ ರೂಪಾಂತರಿ