ETV Bharat / city

ಅತಿಥಿ ಉಪನ್ಯಾಸಕರ ಕೊರೊನಾ ಸಮಯವನ್ನು ಸೇವಾವಧಿ ಎಂದು ಪರಿಗಣಿಸಲು ಹೊರಟ್ಟಿ ಮನವಿ - ಸಭಾಪತಿ ಬಸವರಾಜ ಹೊರಟ್ಟಿ

ಈ ಕೊರೊನಾ ರೋಗದ ಸಂಕಷ್ಟದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೊರೊನಾ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ಜನವರಿಯಿಂದ ಆಗಷ್ಟ್‌ವರೆಗೆ ಮುಂದುವರೆಸುವಂತೆ ಅವರಿಗೆ ಗೌರವಧನವನ್ನು ನೀಡಿದರೆ, ಈ ವರ್ಷ 7 ಅಥವಾ 8 ತಿಂಗಳು ಸೇವಾ ಅವಧಿ ಸಿಗುವುದರಿಂದ ಅವರಿಗೆ ನಿಗದಿಪಡಿಸಿದ 1 ವರ್ಷಕ್ಕೆ 3 ಅಂಕಗಳು ದೊರೆಯುತ್ತವೆ ಎಂದು ಹೇಳಿದ್ದಾರೆ..

  Basavaraj horatti appeal to CM for giving Relief Fund to guest lectures

author img

By

Published : Jun 8, 2021, 6:06 PM IST

ಬೆಂಗಳೂರು : ಕೊರೊನಾ ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನೆಲೆ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಇದರಿಂದ ತೊಂದರೆಗೊಳಗಾದ ಜನರಿಗೆ ವಿಶೇಷ ಪ್ಯಾಕೇಜ್ ಮೂಲಕ ದುಡಿಯವ ವರ್ಗದ ಜನಾಂಗಕ್ಕೆ ಪರಿಹಾರ ಧನವನ್ನು ಮಂಜೂರು ಮಾಡಿರುವುದು ಸಾಮಾನ್ಯ ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮನವಿ ಪತ್ರ
ಮನವಿ ಪತ್ರ

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಅತಿಥಿ ಉಪನ್ಯಾಸಕರಿಗೆ ಹಿಂದಿನ ವರ್ಷಗಳಲ್ಲಿ 9 ಅಥವಾ 10 ತಿಂಗಳನ್ನು ಸೇವಾ ಅವಧಿಯಾಗಿ ಪರಿಗಣಿಸಿ ಗೌರವಧನ ನೀಡುತ್ತಿದ್ದರು. ಆದರೆ, 2020-21ರ ಶೈಕ್ಷಣಿಕ ಅವಧಿಯಲ್ಲಿ 2021ರ ಜನವರಿ ಮತ್ತು ಫೆಬ್ರುವರಿಯಲ್ಲಿ ತೆಗೆದುಕೊಂಡು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತೆ ಮೇ ತಿಂಗಳಲ್ಲಿ ತೆಗೆದುಕೊಂಡು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇದರಿಂದ ಈ ವರ್ಷ ಕೇವಲ 4 ತಿಂಗಳು ಮಾತ್ರ ಸೇವೆ ಆಗಿರುತ್ತದೆ. ಈ ಕೊರೊನಾ ರೋಗದ ಸಂಕಷ್ಟದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೊರೊನಾ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ಜನವರಿಯಿಂದ ಆಗಷ್ಟ್‌ವರೆಗೆ ಮುಂದುವರೆಸುವಂತೆ ಅವರಿಗೆ ಗೌರವಧನವನ್ನು ನೀಡಿದರೆ, ಈ ವರ್ಷ 7 ಅಥವಾ 8 ತಿಂಗಳು ಸೇವಾ ಅವಧಿ ಸಿಗುವುದರಿಂದ ಅವರಿಗೆ ನಿಗದಿಪಡಿಸಿದ 1 ವರ್ಷಕ್ಕೆ 3 ಅಂಕಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.