ಬೆಂಗಳೂರು: ಬಸವನಗುಡಿ ಎಂದರೆ ತಟ್ಟನೆ ನೆನಪಾಗುವುದು ಕಡಲೆ ಕಾಯಿ ಪರಿಷೆ. ಈ ಐತಿಹಾಸಿಕ ಕಡಲೆ ಕಾಯಿ ಪರಿಷೆ (Kadalekai Parishe)ಗೆ ಮತ್ತೆ ಮುಹೂರ್ತ ಕೂಡಿ ಬಂದಿದೆ.
ನ.8ರಿಂದ ಕಾರ್ತಿಕ ಮಾಸ ಆರಂಭವಾಗಿದ್ದು, ನಗರದ ಬಹುತೇಕ ದೇವಸ್ಥಾನಗಳಲ್ಲಿ ಲಕ್ಷದೀಪೋತ್ಸವ ಆಚರಿಸುತ್ತಾರೆ. ನ. 29ರಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕಡಲೆಕಾಯಿ ಪರಿಷೆಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಮತ್ತೆ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ (BBMP) ಗ್ರೀನ್ ಸಿಗ್ನಲ್ ನೀಡಿದೆ. ಕೊನೆಯ ಕಾರ್ತಿಕ ಸೋಮವಾರ ಕಡಲೆಕಾಯಿ ಪರಿಷೆ ಮಾಡಲು ಸಮಿತಿ ನಿರ್ಧರಿಸಿದೆ.
ಪರಿಷೆ ನಡೆಸಲು ಮೌಖಿಕವಾಗಿ ಬಿಬಿಎಂಪಿ ಅನುಮತಿ ನೀಡಿದೆ. ನ. 29ರಿಂದ (ಕೊನೆಯ ಕಾರ್ತಿಕ ಸೋಮವಾರದಂದು) ಒಂದು ವಾರಗಳ ಕಾಲ ಪರಿಷೆ ನಡೆಯಲಿದ್ದು, 10 ಲಕ್ಷಕ್ಕು ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಜತೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಪೂಜೆ ಕೈಕರ್ಯ ಹಾಗು ಪರಿಷೆಯ ವ್ಯಾಪಾರ ನಡೆಯಲಿದೆ.
ಕಡಲೆಕಾಯಿ ಪರಿಷೆಗೆ ಮಾಲೂರು, ಕೋಲಾರ, ದೊಡ್ಡಬಳ್ಳಾಪುರ, ಮಾಗಡಿಯ ವಿವಿಧ ಭಾಗಗಳಿಂದ ವಿಶೇಷ ಕಡಲೆಕಾಯಿ ಬರಲಿವೆ. ಜತೆಗೆ ಸಂಸ್ಕ್ರತ ಕಾರ್ಯಕ್ರಮ, ಜನಪದ ಗೀತೆ, ನಾಟಕ, ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪರಿಷೆ ಸಮಿತಿ ಆಯೋಜನೆ ಮಾಡಲಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರಿದೆ: ಸಿಎಂ ತಿರುಗೇಟು