ETV Bharat / city

ಹೆಸರಿಲ್ಲದೆ ಬ್ಯಾನರ್‌ ಹಾಕುವವರು ಹೇಡಿಗಳು, ಕ್ರೂರಿಗಳು ಎಂದ ಪ್ರತಿಪಕ್ಷದ ಉಪ ನಾಯಕಖಾದರ್‌.. ಸದನದಲ್ಲಿ ಕೋಲಾಹಲ! - u t khadar talk about religious place shop set up

ಧಾರ್ಮಿಕ ಸ್ಥಳದಲ್ಲಿ ಇತರೆ ಧರ್ಮದವರು ವ್ಯಾಪಾರಿ ಮಳಿಗೆಗಳನ್ನು ಹಾಕಬಾರದು ಎಂದು ಬ್ಯಾನರ್​ಗಳನ್ನು ಹಾಕುವುದು ಸರಿಯಲ್ಲ. ರೀತಿ ಬ್ಯಾನರ್​ ಹಾಕುವವರು ಹೇಡಿಗಳು, ಕ್ರೂರಿಗಳು ಎಂದ ಯು.ಟಿ. ಖಾದರ್​ ಹೇಳಿಕೆಗೆ ಸದನದಲ್ಲಿ ಗದ್ದಲ ಉಂಟಾಯಿತು..

Banner other religions should not set up shop in a religious place
ಪ್ರತಿಪಕ್ಷದ ನಾಯಕ ಯು.ಟಿ.ಖಾದರ್
author img

By

Published : Mar 23, 2022, 5:28 PM IST

ಬೆಂಗಳೂರು : ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಚಾರವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕ ಯು ಟಿ ಖಾದರ್ ಪ್ರಸ್ತಾಪಿಸಿದರು. ಕೆಲವೊಂದು ಕಡೆ ಇತರ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕುತ್ತಾರೆ. ಅವರ ಹೆಸರಿನಲ್ಲಿ ಹಾಕಲ್ಲ, ಅವರು ಹೇಡಿಗಳು ಹಾಗೂ ಕ್ರೂರ ಮನಸ್ಸಿನವರು ಎಂದಾಗ, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ‌ನಡವೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಪ್ರತಿಪಕ್ಷದ ನಾಯಕ ಯು.ಟಿ.ಖಾದರ್ ಬಳಸಿದ ಪದ : ವಿಧಾನಸಭೆಯಲ್ಲಿ ಕೋಲಾಹಲ

ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ಸಾಮರಸ್ಯ, ಸಹೋದರತ್ವ ಮೂಡಿಸಬೇಕೆ ಹೊರತು ಶಾಂತಿ ಕದಡುವಂತಹ ಕೆಲಸವಾಗಬಾರದು. ಬೀದಿಬದಿಯ ವ್ಯಾಪಾರಸ್ಥರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಅಂಥವರಿಗೆ ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರ ಮಾಡಬಾರದು ಎಂಬ ನಿರ್ಬಂಧದ ಫಲಕ ಹಾಕಲಾಗಿದೆ ಎಂದು ಹೇಳಿದರು.

ಆ ಸಂದರ್ಭದಲ್ಲಿ ಖಾದರ್ ಬಳಸಿದ ಹೇಡಿಗಳು, ಕ್ರೂರ ಮನಸ್ಸಿನವರು ಎಂಬ ಪದಕ್ಕೆ ಬಿಜೆಪಿ ಶಾಸಕ ಕೆ ಜಿ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮಾಧಾನಪಡಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ಆಡಳಿತ ಪಕ್ಷದ ರಘುಪತಿ ಭಟ್, ಹರೀಶ್ ಪೂಂಜ, ಸೋಮಶೇಖರ್, ಸಿದ್ದು ಸವದಿ, ರೇಣುಕಾಚಾರ್ಯ ಎದ್ದು ನಿಂತು ಮಾತನಾಡುತ್ತಿದ್ದರು. ಹಾಗೆಯೇ ಕಾಂಗ್ರೆಸ್‍ನ ಜಮೀರ್ ಅಹಮ್ಮದ್ ಖಾನ್, ಅಜಯ್ ಧರ್ಮಸಿಂಗ್, ರಿಜ್ವಾನ್ ಅರ್ಷದ್ ಮತ್ತಿತರರು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.

ನಂತರ ಕಾನೂನು ಸಚಿವ ಮಾಧುಸ್ವಾಮಿ ಅವರು, ಶಾಸಕ ರೇಣುಕಾಚಾರ್ಯ, ಇತರ ಸದಸ್ಯರ ಆಸನಗಳ ಬಳಿ ತೆರಳಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ನಂತರ ಯು.ಟಿ.ಖಾದರ್ ಮಾತನಾಡಿ, ಯಾವುದೇ ಜಾತಿ, ಧರ್ಮ ಹೆಸರು ಪ್ರಸ್ತಾಪಿಸಿಲ್ಲ. ಸಮಾಜದಲ್ಲಿ ಸಹೋದರತೆ ಅಗತ್ಯ. ಬೀದಿಬದಿಯ ವ್ಯಾಪಾರಸ್ಥರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ.

ದುಡಿಯುವ ವರ್ಗಕ್ಕೆ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ಎಲ್ಲ ಜಾತಿ ಧರ್ಮದವರು ಒಂದೇ ತಾಯಿ ಮಕ್ಕಳಂತಿದ್ದಾರೆ. ಭಿತ್ತಿಪತ್ರ, ಬ್ಯಾನರ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಾರೆ. ಇದರಿಂದ ಸಮಸ್ಯೆ ಸೃಷ್ಟಿಸುವ ಕೆಲಸವಾಗುತ್ತದೆ. ಪೊಲೀಸರು ಮಾಡುವ ಕೆಲಸವನ್ನು ಮಾಡಿ ಅಂಥದ್ದನ್ನು ತೆಗೆಸಿದ್ದಾರೆ.

ಸಮಾಜದಲ್ಲಿ ವೈಮನಸ್ಸು ಉಂಟು ಮಾಡಲು ಅವಕಾಶ ಕೊಡಬಾರದು. ಈ ರೀತಿ ಭಿತ್ತಿಪತ್ರ ಹಾಕಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, 2002ರ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಈ ಧಾರ್ಮಿಕ ಸಂಸ್ಥೆ ಆವರಣ, ಕಟ್ಟಡ ಸಮೀಪದಲ್ಲಿ ಹಿಂದೂಗಳು ಅಲ್ಲದವರಿಗೆ ಗುತ್ತಿಗೆ ಕೊಡಲು ಅವಕಾಶವಿಲ್ಲ.

ಹೀಗಾಗಿ, ಅಂತಹ ಫಲಕ ಹಾಕಿರಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ, ಧಾರ್ಮಿಕ ಸ್ಥಳದ ಆವರಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಫಲಕ ಹಾಕಿ ಸಮಸ್ಯೆಯಾಗಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಧಾರ್ಮಿಕ ಸೌಹಾರ್ದತೆ, ಶಾಂತಿಗೆ ಭಂಗ ತರುವ ಕೆಲಸಗಳಿಗೆ ಸರ್ಕಾರ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ : ಕಾಂಗ್ರೆಸ್ ಸದಸ್ಯರಿಂದ ಧರಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.