ETV Bharat / city

ಸಿನಿಮಾ ರೀತಿಯಲ್ಲಿ ಕಾರ್​ ಚೇಸಿಂಗ್​: ಗುಂಡು ಹಾರಿಸಿ, ಖದೀಮರ ಬಂಧನ -

ದರೋಡೆ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ ಮೇಲೆ ದಾಳಿ ನಡೆಸಿದ ಪೊಲೀಸರು ಗುಂಡು ಹಾರಿಸಿ ಮೂವರನ್ನು ಬಂಧಿಸಿದ್ದಾರೆ.

ದರೋಡೆಕೋರರ ಬಂಧನ
author img

By

Published : Apr 21, 2019, 4:46 PM IST

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಚೇಸ್​ ಮಾಡಿದ ಪೊಲೀಸರು ಗುಂಡಿನ ದಾಳಿ ನಡೆಸಿ, ಮೂವರು ಖದೀಮರನ್ನು ಬಂಧಿಸಿರುವ ಘಟನೆ ಅನೇಕಲ್​ನಲ್ಲಿ ನಡೆದಿದೆ.

ದರೋಡೆ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್​ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಅನಿವಾರ್ಯವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ದರೋಡೆಕೋರನ ಕಾಲಿಗೆ ಗಾಯವಾಗಿದೆ. ಈ ವೇಳೆ ಮೂವರನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಆನೇಕಲ್ ಪಟ್ಟಣದ ವೆಂಕಟರಾಜು/ತುಕಡಿ (22) , ಗಿರಿಜಾ ಶಂಕರ್ ಬಡಾವಣೆಯ ಅಭಿಲಾಷ್/ಅಭಿ(19) , ಬಿಡದಿಯ ಸಂತೋಷ್(23) ಸಿಕ್ಕಿಬಿದ್ದಿದ್ದು, ಉಳಿದ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ದರೋಡೆಕೋರರ ಬಂಧನ

ಆಗಿದ್ದೇನು?

ಇದೇ ತಿಂಗಳ 13 ನೇ ತಾರೀಖಿನಂದು ಆನೇಕಲ್-ಹೊಸೂರು ರಸ್ತೆಯ ಹೊಂಪಲಘಟ್ಟ-ಮುತ್ತುಗಟ್ಟೆ ಕ್ರಾಸ್ ಬಳಿ ಏಳು ಮಂದಿಯ ಗ್ಯಾಂಗ್​ ದರೋಡೆ ಮಾಡಲು ಹೊಂಚು ಹಾಕಿದ್ದರು. ಈ ಬಗ್ಗೆಮಾಹಿತಿ ಪಡೆದ ಆನೇಕಲ್ ಪಿಎಸ್ಐ ಹೇಮಂತ್ ಕುಮಾರ್, ತಮ್ಮ ಸಿಬ್ಬಂದಿ ಶಿವಣ್ಣ, ಲೋಕೇಶ್, ನರೇಂದ್ರ ಮತ್ತು ಈಶ್ವರ್ ಜತೆ ದಾಳಿ ನಡೆಸಿದ್ದಾರೆ. ಕೂಡಲೇ ​ ಕಾರಿನಲ್ಲಿದ್ದ ಐದು ದರೋಡೆಕೋರರು ಬೈಕ್​​ನಲ್ಲಿ ಕುಳಿತಿದ್ದ ಇಬ್ಬರು ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಕಾರಿನ ಬಲ ಚಕ್ರಕ್ಕೆ ಎಸ್ಐ ಹೇಮಂತ್​ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳಿದ್ದ ಕಾರಿನ ಬಾಗಿಲಿಗೆ ಗುಂಡು ಹೊಡೆದಾಗ ಅದು ಚಾಲಕನ ಕಾಲಿಗೆ ತಾಗಿ ಕಾರು ನಿಂತಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಪರಾರಿಯಾಗಿದ್ದಾರೆ. ಮತ್ತೊಂದು ಕಡೆಯಿಂದ ದಾಳಿ ನಡೆಸಿದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

anekal
ಕೃತ್ಯಕ್ಕಾಗಿ ಬಳಸಿರುವ ಕಾರು

ದರೋಡೆಗೆ ಮುಂದಾದ ಈ ಗುಂಪಿನ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:ಇತ್ತೀಚೆಗೆ ಕೇಳಿಬಂದ ಕಳ್ಳತನ ಕೊಲೆ ದರೋಡೆ ಹಿನ್ನಲೆ ಬಹು ಬೇಗ ಎಚ್ಚೆತ್ತ ಆನೇಕಲ್ ಪೊಲೀಸರು ಓರ್ವ ದರೋಡೆಕೋರನ ಕಾಲಿಗೆ ಗುಂಡು ಹೊಡೆದಿದ್ದಾರೆ. ಶಿಫ್ಟ್ ಕಾರಿನಲ್ಲಿ ದರೋಡೆಕೋರರನ್ನು ಬೆನ್ನಟ್ಟಿದ್ದ ಎಸ್ಐ ಮೇಲೆ ದಾಳಿಗೆ ನಿಂತ ದರೋಡೆಕೋರರ ಮೇಲೆ ಎರೆಡು ಸುತ್ತು ಗುಂಡು ಹಾರಿಸುವ ಮೂಲಕ ಇತ್ತೀಚೆಗೆ ಚಿಗುರುತ್ತಿರುವ ಪಡ್ಡೆಗಳ ಎದೆಯಲ್ಲಿ ಭೀತಿಯನ್ನುಟ್ಟಿಸಿದ್ದಾರೆ.Body:
ಕಳೆದ 13ರಂದು ಆನೇಕಲ್-ಹೊಸೂರು ರಸ್ತೆಯ ಹೊಂಪಲಘಟ್ಟ-ಮುತ್ತುಗಟ್ಟೆ ಕ್ರಾಸ್ ಬಳಿ ದರೋಡೆಗೆ ಯತ್ನಿಸಲು ಸಜ್ಜಾಗಿದ್ದ ಶಿಫ್ಟ್ ಕಾರು-ಬೈಕ್ ಸಮೇತ ಏಳು ಪಡ್ಡೆ ಹುಡುಗರ ಗ್ಯಾಂಗ್ ಮಾಹಿತಿ ಪಡೆದ ಆನೇಕಲ್ ಪಿಎಸ್ಐ ಹೇಮಂತ್ ಕುಮಾರ್ ತಮ್ಮ ಸಿಬ್ಬಂದಿ ಶಿವಣ್ಣ, ಲೋಕೇಶ್, ನರೇಂದ್ರ ಮತ್ತು ಈಶ್ವರ್ ಜೊತೆ ಬೈಕ್ನಲ್ಲಿ ದರೋಡೆಕೋರರ ಎದುರಿಗೇ ಪ್ರತ್ಯಕ್ಷರಾಗುತ್ತಾರೆ. ಕೂಡಲೇ ಕಾರಿನಲ್ಲಿದ್ದ ಐದು ಜನ ಬೈಕ್ನಲ್ಲಿದ್ದ ಇಬ್ಬರು ಪೊಲೀಸರ ಮೇಲೆರಗಲು ಸಜ್ಜಾಗುತ್ತಿದ್ದು ಅಡ್ಡಾದಿಡ್ಡಿ ಕಾರಿನಿಂದಲೇ ದಾಳಿ ನಡೆಸುತ್ತಾರೆ. ಆಗ ಅನಿವಾರ್ಯವಾಗಿ ಆತ್ಮರಕ್ಷಣೆಗೆ ಶಿಫ್ಟ್ ಕಾರಿನ ಮುಂದಿನ ಬಲ ಚಕ್ರಕ್ಕೆ ಎಸ್ಐ ಮೊದಲ ಗುಂಡು ಹೊಡೆಯುತ್ತಾರೆ. ಅನಂತರ ಚಾಲಕನ ಬೆನ್ನತ್ತಿದ ಎಸ್ಐ ಕಾರಿನ ಬಲ ಮುಂದಿನ ಬಾಗಿಲಿಗೆ ಗುಂಡು ಹೊಡೆದಾಗ ಚಾಲಕನ ಕಾಲಿಗೆ ಗುಂಡು ತಾಕಿದ್ದರೂ ಕ್ಷಣಾರ್ದದಲ್ಲಿ ನಾಲ್ವರು ಪರಾರಿಯಾಗುತ್ತಾರೆ. ಇದೇ ವೇಳೆ ಮತ್ತೊಂದು ಪೊಲೀಸ್ ತಂಡ ಮೂವರನ್ನು ಅಟ್ಟಾಡಿಸಿ ಹಿಡಿಯುತ್ತಾರೆ. ಆನೇಕಲ್ ಪಟ್ಟಣದ ಕೋರ್ಟ್ ಹಿಂಭಾಗದ ವಾಸಿ ವೆಂಕಟರಾಜು/ತುಕಡಿ(22) ಮತ್ತು ಗುರಿಜಾ ಶಂಕರ್ ಬಡಾವಣೆಯ ಅಭಿಲಾಷ್/ಅಭಿ(19) ಮತ್ತು ಬಿಡದಿಯ ಸಂತೋಷ್(23) ಸಿಕ್ಕಿಬಿದ್ದವರು ಉಳಿದ ನಾಲ್ವರ ಪತ್ತೆಗೆ ಪೊಲೀಸರು ಬಕೆ ಬೀಸಿದ್ದು ಇದರ ಹಿಂದೆ ಪಡ್ಡೆಗಳ ದೊಡ್ಡ ಜಾಲವೇ ಇದೆ ಎಂದು ತನಿಖೆ ವೇಳೆ ಶಂಕೆ ವ್ಯಕ್ತವಾಗಿದೆ. ಬಳಸುತ್ತಿದ್ದ ಬಿಳಿ ಬಣ್ಣದ ಶಿಪ್ಟ್ ಕಾರು ಕಳ್ಳತನದ್ದಾಗಿದ್ದು ಬೇರೆ ಬೇರೆ ಸಂಖ್ಯೆಯ ನಂಬರ್ ಫಲಕಗಳನ್ನು ಬಳಸಲಾಗುತ್ತಿತ್ತೆಂದು ತಿಳಿದುಬಂದಿದೆ.

ಇದೇ ದರೋಡೆಕೋರರ ಕೈಚಳಕ ದರೋಡೆ ಪ್ರಕರಣ: ಅಲ್ಲದೆ ಆನೇಕಲ್ ಮತ್ತು ಸುತ್ತಲ 23-25ರ ನಡುವಿನ ಯುವಕರೇ ಈ ಗ್ಯಾಂಗ್ ನಲ್ಲಿರುವುದು ಪಟ್ಟಣದಲ್ಲಿ ಅಚ್ಚರಿ ಮೂಡಿಸಿದೆ. ಇದೇ ತಂಡ ಆನೇಕಲ್-ಅತ್ತಿಬೆಲೆ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗ ಡ್ರ್ಯಾಗರ್, ಲಾಂಗ್ ದೊಣ್ಣೆಗಳ ಮುಖಾಂತರ ಮೂವರನ್ನು ಬೆದರಿಸಿ ತಲೆಗೆ ಹೊಡೆದು ಮೊಬೈಲ್-ಹಣ ದೋಚಿ ಪರಾರಿಯಾಗಿದ್ದರು ಈ ಬಗ್ಗೆ ಆನೇಕಲ್ ಠಾಣೆಯಲ್ಲಿ ಒ್ರಕರಣ ದಾಖಲಾಗಿತ್ತು. ಇದರ ಹಿನ್ನಕೆಯಲ್ಲಿ ಎಚ್ಚೆತ್ತ ಪೊಲೀಸರು ದರೋಡೆಕೋರರ ತಂಡವನ್ನು ಎಡೆಮುರಿ ಕಟ್ಟಲು ಸಿದ್ದರಾಗಿದ್ದಾರೆ.
ಮತ್ತೊಂದು ಮನೆಯಲ್ಲಿ ಕಳ್ಳತನ: ಆನೇಕಲ್-ಚಂದಾಪುರ ರಸ್ತೆಯ ಕಾವಲಹೊಸಹಳ್ಳಿ ಎಸ್ ಆರ್ ಆರ್ ಎಕ್ಸುರ್ಬಿಯಾ ಬಡಾವಣೆಯ ಮನೆಯೊಂದರಲ್ಕಿ ಇದೇ ಗ್ಯಾಂಗ್ ಕಳ್ಳತನ ಮಾಡಿದ್ದು ಕಾರಿನ ಚಲನವಲನ ಆನೇಕ್ಲ ಭಾಗದಲ್ಲಿಯೇ ಓಡಾಟವಿರುವುದು ಹಾಗು ಪ್ರತಿಬಾರಿ ಬೇರೆಬೇರೆ ಸಂಖ್ಯೆಯಲ್ಲಿ ಒಟ್ಟಣದ ಸಿಸಿ ಕ್ಯಾಮೆರಾಗಳಲ್ಕಿ ಪತ್ತೆಯಾಗಿತ್ತು. ಇದೂ ದರೋಡೆಕೋರರ ಪತ್ತೆಗೆ ಕಾರಣವಾಗಿತ್ತೆಂದು ಪೊಲೀಸ್ ಮೂಲಗಖು ತಿಳಿದು ಬಂದಿವೆ.

ಬೈಟ್: ರಾಮ್ ನಿವಾಸ್ ಸೆಪಟ್, ಎಸ್ಪಿ ಬೆಂಗಳೂರು ರೂರಲ್.

Conclusion:ಒಟ್ಟಾರೆ ಒಠ್ಣದ ಸುತ್ತ ಪರಾರಿಯಾಗಿರುವ ಹತ್ತಾರು ಪಡ್ಡೆ ದರೋಡೆಕೋರರನ್ನು ಪತ್ತೆ ಮಾಡುವ ಭರವಸೆಯನ್ನು ಆನೇಕಲ್ ಪೊಲೀಸರು ವ್ಯಕ್ತಪಡಿಸಿದ್ದು ಶೀಘ್ರವೇ ಬಂಧಿಸಿ ಜೈಲಿಗಟ್ಟುವ ವಿಶ್ವಾಸ ಮೂಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.