ಬೆಂಗಳೂರು : ಪೋರ್ನ್ ವೆಬ್ಸೈಟ್ ನೋಡುವಾಗ ಗೆಳತಿ ಜೊತೆ ಕಳೆದಿದ್ದ ತನ್ನದೇ ಖಾಸಗಿ ವಿಡಿಯೋ ನೋಡಿದ ಯುವಕನೊಬ್ಬ ದಂಗಾಗಿದ್ದಾನೆ. ನಗ್ನ ವಿಡಿಯೋ ಪತ್ತೆ ಸಂಬಂಧ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಆಸ್ಟಿನ್ ಟೌನ್ ನಿವಾಸಿಯಾಗಿರುವ 24 ವರ್ಷದ ಯುವಕ ಇತ್ತೀಚೆಗೆ ಇಂಟರ್ನೆಟ್ನಲ್ಲಿ ಸರ್ಚ್ ಮಾಡುವಾಗ ಗೆಳತಿ ಜೊತೆ ಕಳೆದ ನಗ್ನ ವಿಡಿಯೋ ಪತ್ತೆಯಾಗಿದೆ. ಇದನ್ನು ನೋಡಿದ ಯುವಕ ಶಾಕ್ಗೆ ಒಳಗಾಗಿದ್ದಾನೆ.
ಓದಿ: ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳ ಸೇವೆ
ಸಂತ್ರಸ್ತ ಯುವಕ ಹಲವು ದಿನಗಳ ಹಿಂದೆ ಹೋಟೆಲ್ವೊಂದರಲ್ಲಿ ಸ್ನೇಹಿತೆ ಜೊತೆ ಖಾಸಗಿ ಸಮಯ ಕಳೆದಿದ್ದ. ಜನವರಿ 21ರಂದು ಇಂಟರ್ನೆಟ್ನಲ್ಲಿ ಪೋರ್ನ್ ವೆಬ್ಸೈಟ್ ನೋಡುವಾಗ ತನ್ನದೇ ನಗ್ನ ವಿಡಿಯೋ ನೋಡಿ ಒಂದು ಕ್ಷಣ ಸಿಡಿಲು ಬಡಿದಂತಾಗಿದೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ ವಿಡಿಯೋ ಡಿಲೀಟ್ ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ. ಈ ಘಟನೆ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ