ಬೆಂಗಳೂರು: ತನ್ನೊಂದಿಗೆ ಲಿವಿಂಗ್ ಟುಗೆದರ್(ಸಹಜೀವನ) ಸಂಬಂಧ ಹೊಂದಿದ್ದ ಯುವತಿಯನ್ನು ಬಿಟ್ಟು ಹೋದಾಗ ಆಕೆಗೆ ಜೀವನಾಂಶ ಕೊಡುವುದು ಆತನ ಕರ್ತವ್ಯವೆಂದು ಪ್ರಕರಣವೊಂದರ ಕುರಿತು ಹೈಕೋರ್ಟ್ ತೀರ್ಪು ನೀಡಿದೆ.
ನಗರದ ಸಂತ್ರಸ್ತೆವೋರ್ವಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೋಮವಾರ ನಡೆಯಿತು. ವ್ಯಕ್ತಿವೋರ್ವ 1996 ರಲ್ಲಿ ಲಿವಿಂಗ್ ಟುಗೆದರ್ ಸಂಬಂಧ ಹೊಂದಿ, ನಂತರ ಏಕಾಏಕಿ 2012 ರಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದ. ಇದನ್ನ ಆಕೆ ಪ್ರಶ್ನಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದಾಗ ಅಲ್ಲಿ ತಮ್ಮಿಬ್ಬರ ಸಂಬಂಧ ಸಾಬೀತು ಮಾಡುವಲ್ಲಿ ವಿಫಲವಾಗಿದ್ದಳು.
ಇತ್ತ ಸಂಬಂಧ ಹೊಂದಿದ ವ್ಯಕ್ತಿ ತನಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಾಡಿದ್ದ. ನಂತರ ಇದನ್ನ ಪ್ರಶ್ನಿಸಿ ಸಂತ್ರಸ್ತೆ ಸೆಷನ್ಸ್ ನ್ಯಾಯಾಲಯ ಮೊರೆ ಹೋದಾಗ ಅಲ್ಲು ನ್ಯಾಯ ಸಿಗದೆ 2019ರಲ್ಲಿ ಹೈಕೋರ್ಟ್ ಮೆಟ್ಡಿಲೇರಿದ್ದರು.
ಮಹಿಳೆಯ ನೋವಿಗೆ ಸ್ಪಂದಿಸಿರುವ ಹೈಕೋರ್ಟ್ ಸದ್ಯ ಸಂತ್ರಸ್ತೆಗೆ ಸಂರಕ್ಷಣೆ ಕಾಯ್ದೆ 2005ರ ಕಲಂ 18,19,20ರ ಪ್ರಕಾರ 5 ಸಾವಿರ ಹಾಗೂ ಮನೆಬಾಡಿಗೆ ಪ್ರತಿ ತಿಂಗಳು 3 ಸಾವಿರ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದೆ.