ಆನೇಕಲ್: ವೈದ್ಯಲೋಕವೇ ಹಾಗೆ, ಅಚ್ಚರಿಯ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲೊಂದು ವಿಶೇಷ ಅನ್ನಿಸುವ ಪ್ರಯೋಗ ನಡೆಯಿತು.
ವ್ಯಕ್ತಿಯ ಶವವನ್ನು ಕೆಲ ದಿನಗಳಿಟ್ಟರೆ ಕೊಳೆಯುತ್ತದೆ ಎಂಬುದು ಸಾಮಾನ್ಯವಾಗಿ ಗೊತ್ತಿರುವ ಸಂಗತಿ. ಆದರೆ, ರಾಸಾಯನಿಕಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿಡುವ ಸಂಶೋಧನೆಯೇ ಇದು. ಇಂಥದ್ದೊಂದು ಸಂಗತಿಗೆ ಬೆಳಕು ಹರಿಸಿದವರು ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್.
ವ್ಯಕ್ತಿ ಮರಣಿಸಿದ ನಂತರ ಕೆಲವು ರಾಸಾಯನಿಕಗಳನ್ನು ಬಳಸಿ ಜೀವಂತವಾಗಿ ಕಾಣುವ ರೀತಿಯಲ್ಲೇ ಮೃತದೇಹಗಳನ್ನು ಇಡಲಾಗಿದೆ. ಈ ಶವಗಳು ಕೊಳೆಯುವುದಿಲ್ಲ ಅಥವಾ ದುರ್ವಾಸನೆಯನ್ನೂ ಬೀರುವುದಿಲ್ಲ. ಹೀಗೆ ನಾಲ್ವರ ಶವಗಳನ್ನು ಒಂದೆಡೆ ಇಟ್ಟು ಪ್ರಾಯೋಗಿಕವಾಗಿ ಡಾ. ರಾವ್ ತೋರಿಸಿದ್ದಾರೆ. ಶವವನ್ನು ಕೊಳೆಯಲು ಬಿಡದೆ, ವಾಸನೆ ಬಾರದಂತೆಯೂ ಮಾಡುವ ವಿಶ್ವದ ಮೊಟ್ಟ ಮೊದಲ ಸಂಶೋಧನೆ ಇದಾಗಿದೆ!.
ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಪುಟ್ಟ ಮಗುವಿನ ಶವ ಹಾಗೂ ಇತರೆ ಮೂವರು ವ್ಯಕ್ತಿಗಳ ಶವಗಳನ್ನು ಪ್ರದರ್ಶಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸಾಧಿಸಿರುವುದನ್ನು ಡಾ. ದಿನೇಶ್ ರಾವ್ ಪ್ರಸ್ತುತಪಡಿಸಿದ್ದಾರೆ.
ಇದನ್ನೂ ಓದಿ: ಬಟ್ಟೆ ತೊಳೆಯಲು ಬಂದು ಅತ್ತೆ, ಸೊಸೆ, ಮೊಮ್ಮಕ್ಕಳು ಸೇರಿ ಒಂದೇ ಕುಟುಂಬದ ಐವರು ನೀರುಪಾಲು!