ETV Bharat / city

ಎಟಿಎಮ್ ದರೋಡೆಗೆ ಯತ್ನ: ಸ್ಥಳೀಯರನ್ನ ನೋಡಿ ಕಾಲ್ಕಿತ್ತ ದುಷ್ಕರ್ಮಿಗಳು

ನಗರದ ಬಿಟಿಎಮ್ ಲೇಔಟ್​ನಲ್ಲಿ ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನು ಗಮನಿದ ನಾಲ್ಕು ಜನ ಕಳ್ಳರು ಗ್ಯಾಸ್ ಕಟರ್ ಮೂಲಕ ಎಟಿಎಂ ದರೋಡೆಗೆ ಮುಂದಾಗಿದ್ದರು. ಅಲ್ಲದೆ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗದಂತೆ ಕಪ್ಪು ಬಣ್ಣವನ್ನು ಕ್ಯಾಮೆರಾಗೆ ಬಳಿದು ದರೋಡೆ ಯತ್ನ ನಡೆಸಿದ್ದಾರೆ.

bangalore-btm-layout-atm-robbery
ಎಟಿಎಮ್ ದರೋಡೆಗೆ ಯತ್ನ
author img

By

Published : Dec 28, 2019, 7:42 AM IST

ಬೆಂಗಳೂರು : ಎಟಿಎಂ ದರೋಡೆಗೆ ಯತ್ನಿಸಿ ಸ್ಥಳೀಯರನ್ನು ಕಂಡು ದುಷ್ಕರ್ಮಿಗಳು ಪರಾರಿಯಾದ ಘಟನೆ ನಗರದ ಬಿಟಿಎಮ್​ ಲೇಔಟ್​ನಲ್ಲಿ ತಡರಾತ್ರಿ ನಡೆದಿದೆ.

ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನು ಗಮನಿಸಿದ ನಾಲ್ಕು ಜನ ಕಳ್ಳರು ಗ್ಯಾಸ್ ಕಟರ್ ಮೂಲಕ ಎಟಿಎಂ ದರೋಡೆಗೆ ಮುಂದಾಗಿದ್ದರು. ಅಲ್ಲದೇ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗದಂತೆ ಕಪ್ಪು ಬಣ್ಣವನ್ನು ಕ್ಯಾಮೆರಾಗೆ ಬಳಿದು ಕೃತ್ಯಕ್ಕೆ ಯತ್ನಿಸಿದ್ದಾರೆ.

ಎಟಿಎಮ್ ದರೋಡೆಗೆ ಯತ್ನ

ಈ ವೇಳೆ ರಾತ್ರಿ ಕೆಲಸ ಮುಗಿಸಿ‌ ಮನೆಗೆ ತೆರಳುತ್ತಿದ್ದ ಸ್ಥಳೀಯರು ಅದೇ ದಾರಿಯಲ್ಲಿ ಹೋಗುತ್ತಿದ್ದನ್ನು ಕಂಡು ಗಾಬರಿಯಾಗಿ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾರೆ. ಘಟನೆ ಕುರಿತು ಮೈಕೋ ಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ತಂಡ ಈ ಕೃತ್ಯ ವೆಸಗಿರುವ ಅನುಮಾನವಿದ್ದು ತನಿಖೆ ಮುಂದುವರೆಸಿದ್ದಾರೆ.

Intro:ಎಟಿಎಮ್ ದರೋಡೆಗೆ ಯತ್ನ
ಸ್ಥಳೀಯರನ್ನ ನೋಡಿ ಕಾಲ್ಕಿತ್ತ ದುಷ್ಕರ್ಮಿಗಳು

ಎಟಿಎಮ್ ದರೋಡೆಗೆ ಯತ್ನ ಮಾಡಿರುವ ಘಟನೆ ಬಿಎಟಿ ಎಮ್ ಲೇ ಔಟ್ ನಲ್ಲಿ ತಡ ರಾತ್ರಿ ನಡೆದಿದೆ. ತಡ ರಾತ್ರಿ ಸೆಕ್ಯುರಿಟಿ ಗಾರ್ಡ್ ಇಲ್ಲದೇ ಇರುವುದನ್ನು ಗಮನಿಸಿದ ನಾಲ್ಕು ಜನ ದುಷ್ಕರ್ಮಿಗಳ ತಂಡ ಎಂಟ್ರಿ ಕೊಟ್ಟು ಗ್ಯಾಸ್ ಕಟರ್ ಮೂಲಕ ಎಟಿಎಮ್ ದರೋಡೆ ಯತ್ನ ಪಟ್ಟಿದ್ದಾರೆ.

ಹಾಗೆ ಕದಿಯುವ ದೃಶ್ಯ ವನ್ನ ಯಾರು ವೀಕ್ಷಣೆ ಮಾಡಬಾರದೆಂದು ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ರಾತ್ರಿ ಕೆಲಸ ಮುಗಿಸಿ‌ ಮನೆಗೆ ತೆರಳುತ್ತಿದ್ದ ಅಲ್ಲಿನ ಸ್ಥಳೀಯರು ಅದೇ ದಾರಿಯಲ್ಲಿ ಹೋಗುತ್ತಿದ್ದ ನ್ನ ಕಂಡು ಗಾಬರಿಯಾಗಿ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾರೆ.
ಇನ್ನು ಈ ಘಟನೆ ಕುರಿತು ಮೈಕೋ ಲೇಔಟ್ ಪೊಲೀಸರಿಗೆ‌‌ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಇತ್ತಿಚ್ಚೆಗೆ ಸಿಲಿಕಾನ್ ಸಿಟಿಯಲ್ಲಿ ಎಟಿಂಎ ಕಳ್ಳತನ ಪ್ರಕರಣ ಹೆಚ್ಚಾಗ್ತಿದ್ದು ಒಂದೇ ತಂಡ ಈ ಕೃತ್ಯ ವೆಸಗಿರುವ ಗುಮಾನಿ ಪೊಲೀಸರಿಗೆ ಇದ್ದು ತನೀಕೆ ಮುಂದುವರೆಸಿದ್ದಾರೆBody:KN_BNG_07_ATM_7204498Conclusion:KN_BNG_07_ATM_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.