ETV Bharat / city

ಬೆಂಗಳೂರಲ್ಲಿ ಮೇಲ್ಸೇತುವೆ ದುರಸ್ತಿ ಕಾರ್ಯಾರಂಭ: ವಾಹನ ಸವಾರರು ಈ ಮಾರ್ಗ ಅನುಸರಿಸಿ - Bangalore balagangadharanath swamy fly Over Work

ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಯಲ್ಲಿ ಇಂದಿನಿಂದ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಫ್ಲೈ ಒವರ್ ನ ಒಂದು ಭಾಗದ ರಸ್ತೆ ಒಂದು ತಿಂಗಳ ಕಾಲ ಸಂಚಾರ ಸ್ಥಗಿತವಾಗಿದೆ.

bangalore-balagangadharanath-swamy-fly-over-work-started
ಇಂದಿನಿಂದ ಸಿರ್ಸಿ ಮೇಲ್ಸೇತುವೆ ದುರಸ್ತಿ ಕಾರ್ಯಾರಂಭ
author img

By

Published : Dec 16, 2019, 7:11 PM IST

ಬೆಂಗಳೂರು: ಕೆ. ಆರ್. ಮಾರುಕಟ್ಟೆ ಬಳಿಯ, ಅತಿಯಾದ ಸಂಚಾರ ದಟ್ಟಣೆ ಇರುವ ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಯಲ್ಲಿ ಇಂದಿನಿಂದ ದುರಸ್ತಿ ಕಾಮಗಾರಿ ನಡೆಯಲಿದ್ದು, ಫ್ಲೈ ಒವರ್​​ನ ಒಂದು ಭಾಗದ ರಸ್ತೆಯಲ್ಲಿ ಒಂದು ತಿಂಗಳ ಕಾಲ ಸಂಚಾರ ಸ್ಥಗಿತವಾಗಲಿದೆ.

ಒಟ್ಟು 2. 65 ಉದ್ದದ ಮೇಲ್ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯಲಿದ್ದು, ಮೈಸೂರು ರಸ್ತೆ ಮೇಲ್ಸೇತುವೆ ಮಾರ್ಗವಾಗಿ ರಾಯನ್ ವೃತ್ತದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರೂ ಸಂಚಾರ ದಟ್ಟಣೆ ಹೆಚ್ಚು ಇರಲಿದೆ.

bangalore-balagangadharanath-swamy-fly-over-work-started
ಇಂದಿನಿಂದ ಸಿರ್ಸಿ ಮೇಲ್ಸೇತುವೆ ದುರಸ್ತಿ ಕಾರ್ಯಾರಂಭ

ಫ್ಲೈ ಓವರ್ ನ ಒಂದು ಭಾಗಕ್ಕೆ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಡಾಂಬರೀಕರಣ ಆಗಿದ್ದು, ಇನ್ನೊಂದು ಭಾಗದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಬೆಳಗ್ಗೆ 6 ರಿಂದ 4 ಗಂಟೆವರೆಗೆ ಮೇಲ್ಸೇತುವೆಯಲ್ಲಿ ಚಲಿಸುವ ವಾಹನಗಳು ಚಾಮರಾಜಪೇಟೆ, ಬಿಬಿ ಜಂಕ್ಷನ್, ಮೈಸೂರು ರಸ್ತೆ ಮಾರ್ಗವಾಗಿ ಕೆಂಗೇರಿ-ಮೈಸೂರು ರಸ್ತೆ ಕಡೆಗೆ ಸಂಚರಿಸಲು ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ಸುಮನಹಳ್ಳಿ ಮೇಲ್ಸೇತುವೆಯಲ್ಲೂ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಬದಲಾವಣೆ ಮಾಡಿಲ್ಲ.

Intro:ಇಂದಿನಿಂದ ಸಿರ್ಸಿ ಮೇಲ್ಸೇತುವೆ ದುರಸ್ತಿ- ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ

ಬೆಂಗಳೂರು: ಕೆ.ಆರ್ ಮಾರುಕಟ್ಟೆ ಬಳಿಯ, ಅತಿಯಾದ ಸಂಚಾರ ದಟ್ಟಣೆ ಇರುವ ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ)
ಯಲ್ಲಿ ಇಂದಿನಿಂದ ದುರಸ್ತಿ ಕಾಮಗಾರಿ ನಡೆಯಲಿದೆ. ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ಒಂದು ತಿಂಗಳು ರಸ್ತೆ ಸಂಚಾರ ಸ್ಥಗಿತವಾಗಿದೆ.
ಒಟ್ಟು 2.65 ಉದ್ದದ ಮೇಲ್ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯಲಿದ್ದು, ಮೈಸೂರು ರಸ್ತೆ ಮೇಲ್ಸೇತುವೆ ಮಾರ್ಗವಾಗಿ ರಾಯನ್ ವೃತ್ತದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರೂ ಸಂಚಾರ ದಟ್ಟಣೆ ಹೆಚ್ಚು ಇರಲಿದೆ.
ಈ ಫ್ಲೈ ಓವರ್ ನ ಒಂದು ಭಾಗಕ್ಕೆ ಐದು ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಡಾಂಬರೀಕರಣ ಆಗಿದ್ದು, ಇನ್ನೊಂದು ಭಾಗದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ.
ಬೆಳಗ್ಗೆ ಆರರಿಂದ ನಾಲ್ಕು ಗಂಟೆವರೆಗೆ ಈ ಮೇಲ್ಸೇತುವೆ ಮೇಲೆ ಚಲಿಸುವ ವಾಹನಗಳು ಚಾಮರಾಜಪೇಟೆ ಮಾರ್ಗವಾಗಿ, ಬಿಬಿ ಜಂಕ್ಷನ್ ಮೈಸೂರು ರಸ್ತೆ ಮಾರ್ಗವಾಗಿ ಕೆಂಗೇರಿ-ಮೈಸೂರು ರಸ್ತೆ ಕಡೆಗೆ ಸಂಚರಿಸಲು ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಸುಮನಹಳ್ಳಿ ಮೇಲ್ಸೇತುವೆಯಲ್ಲೂ ದುರಸ್ತಿ ಕಾಮಗಾರಿ ನಡೆತುತ್ತಿದ್ದು, ಮಾರ್ಗ ಬದಲಾವಣೆ ಮಾಡಿಲ್ಲ.

ಸೌಮ್ಯಶ್ರೀ
Kn_bng_02_sirsi_flyover_7202707
Visuals ಸ್ವಲ್ಪ ತಡವಾಗಲಿದೆ.Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.