ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಅಪೋಲೊ ಆಸ್ಪತ್ರೆಯಲ್ಲಿ ಅಮೆರಿಕಾ ರಾಷ್ಟ್ರ ಆವಿಷ್ಕರಿಸಿದ ರೋಬೋಟ್ನ ಕೃತಕ ಹೃದಯ ಶಸ್ತ್ರಚಿಕಿತ್ಸೆ ಸೌಲಭ್ಯ ಪ್ರಾರಂಭವಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಬೋಟ್ ಅನಾವರಣ ಮಾಡಲಾಯಿತು. ಸಮಾರಂಭದಲ್ಲಿ ಮಾತನಾಡಿದ ಅಪೋಲೊ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಸತ್ಯಾಕಿ ಪಿ. ನಂಬಾಳ, ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಶೇಕಡಾ 200 ರಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದರು. ವರ್ಷಗಳು ಕಳೆದಂತೆ ವೈದ್ಯಕೀಯ ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದು ಈಗ ಎಷ್ಟೋ ವೈದ್ಯರು ರೋಬೋ 99% ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಮೂಲೆಗಳನ್ನ ಮುರಿಯದೆ ಹೃದಯ ಚಿಕಿತ್ಸೆ ಮಾಡಿದರೆ ರೋಗಿಯು ಬೇಗ ಚೇತರಿಕೆ ಕಾಣಬಹುದು ಎಂದು ತಿಳಿಸಿದರು.
ಅಪೋಲೊ ಆಸ್ಪತ್ರೆಯ ಅಧ್ಯಕ್ಷ ಡಾ.ಹರಿಪ್ರಸಾದ್ ಮಾತನಾಡಿ, ಜಗತ್ತಿನಲ್ಲಿ ವೈದ್ಯಕೀಯ ಕ್ರಾಂತಿ ಹೊಂದುತ್ತಿದೆ. ಇಡೀ ದೇಶ ಈ ಆವಿಷ್ಕಾರದಿಂದ ಹೆಮ್ಮೆ ಪಡಬೇಕು. ಡಾ. ಸತ್ಯಾಕಿ ಈ ತಂತ್ರಜ್ಞಾನವನ್ನು ಭಾರತಕ್ಕೆ ತರಲು ಸಾಕಷ್ಟು ಸಮಯ ಅರ್ಪಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಮನುಷ್ಯನ ಕೈ ಎಲ್ಲಿಗೆ ತಲುಪಲು ಆಗುವುದಿಲ್ಲವೋ ಅಲ್ಲಿ ರೋಬೋಟ್ ಕೈ ಹೋಗುತ್ತದೆ ಹಾಗೂ ಇದರಿಂದ ನಿಖರತೆ ಹಾಗೂ ಸಮರ್ಪಕವಾಗಿ ಚಿಕಿತ್ಸೆ ಮಾಡಬಹುದು ಎಂದು ಹೇಳಿದರು.
ಸುಲಭ, ನೋವು ರಹಿತ ಚಿಕಿತ್ಸೆ
ರೋಗಿಯನ್ನು 1.5 ತಾಸಿನ ಶಸ್ತ್ರ ಚಿಕಿತ್ಸೆ ನಂತರ 3ನೇ ದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದರು. ಕಡಿಮೆ ನೋವು ಹಾಗೂ ರಕ್ತ ಸೋರಿಕೆ ಇಲ್ಲದೆ ಮಾಡುವ ಈ ಆಧುನಿಕ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ಅಪೋಲೊ ಆಸ್ಪತ್ರೆಯ ವೈದ್ಯರು ಹೇಳಿದರು.
25 ಯಶಸ್ವಿ ಆಪರೇಷನ್
ಆಗಸ್ಟ್ ತಿಂಗಳಿಂದ ರೋಬೋಟ್ ಬಳಸಿ ಶ್ವಾಸಕೋಶದ ಶಸ್ತ್ರಚಿಕಿತ್ಸೆ ಹಾಗೂ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇವೆ, ಆದರೆ ಇನ್ನೂ ಮುಂದೆ ಬೈ ಪಾಸ್ ಆಪರೇಷನ್ಗೆ ರೋಬೋಟ್ ಬಳಸಲಾಗುವುದು ಎಂದು ತಿಳಿಸಿದರು. ಇವರೆಗೆ 25 ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಹಾಗೂ ಚಿಕಿತ್ಸೆ ಪಡೆದ ರೋಗಿಗಳು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಬೆಲೆ ಏರಿಕೆ, ವಿಮೆ ಸೌಲಭ್ಯವಿಲ್ಲ
ರೋಬೋಟ್ ಶಸ್ತ್ರಚಿಕಿತ್ಸೆ ಮಾಡಿದ್ದ ಪಕ್ಷದಲ್ಲಿ ವಿಮೆ ಕವರೇಜ್ ಆಗುವುದಿಲ್ಲ, ಜೊತೆಗೆ 10 ರಿಂದ 15% ಶಸ್ತ್ರಚಿಕಿತ್ಸೆಯ ಬೆಲೆ ಏರಿಕೆ ಆಗಲಿದೆ ಎಂದು ಡಾ. ಸತ್ಯಾಕಿ ಸ್ಪಷ್ಟಪಡಿಸಿದರು. ಮುಂದೆ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಇದರ ಬಗ್ಗೆ ವಿವರಿಸಲಾಗುವುದು, ಇದರಿಂದ ವಿಮೆ ಪಡೆಯಬಹುದು ಎಂದು ತಿಳಿಸಿದರು.