ETV Bharat / city

ಶಾಸಕರ ಜೊತೆ ಬಿಎಸ್​ವೈ ಸಮಾಲೋಚನೆ: ಸಿಎಂ ಮುಂದಿಟ್ಟ ಬೇಡಿಕೆಗಳೇನು ಗೊತ್ತಾ?

ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್​ನಲ್ಲಿ ಕಲ್ಯಾಣ ಕರ್ನಾಟಕ ಭಾಗಗಳಾದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಇಂದು ಸಮಾಲೋಚನೆ ನಡೆಸಿದರು.

B S Yediyurappa
B S Yediyurappa
author img

By

Published : Jan 4, 2021, 2:17 PM IST

ಬೆಂಗಳೂರು: ಶಾಸಕರನ್ನು ಸಚಿವರು ಕಡೆಗಣಿಸಬಾರದು, ಕ್ಷೇತ್ರಕ್ಕೆ ಅನುದಾನ ನೀಡಬೇಕು, ಮಂಜೂರಾದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿಟ್ಟಿದ್ದಾರೆ.

ನಗರದ ಕ್ಯಾಪಿಟಲ್ ಹೋಟೆಲ್​ನಲ್ಲಿ ಕಲ್ಯಾಣ ಕರ್ನಾಟಕ ಭಾಗಗಳಾದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಇಂದು ಸಮಾಲೋಚನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ, ಸಂಪುಟ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿ ಶಾಸಕರ ಜೊತೆ ಸಿಎಂ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಶಾಸಕರು ಯಾವುದೇ ಗುರುತರ ಆರೋಪಗಳನ್ನು ಮಾಡಿಲ್ಲ ಎನ್ನಲಾಗಿದ್ದು, ನೀರಾವರಿ ಯೋಜನೆಗಳ ಕಾಮಗಾರಿ ಅನುಷ್ಠಾನ, ಏತ ನೀರಾವರಿ, ರಸ್ತೆ ಕಾಮಗಾರಿ, ಕುಡಿಯುವ ನೀರಿನ ಯೋಜನೆ, ಕ್ಷೇತ್ರಕ್ಕೆ ಅನುದಾನ, ನಮ್ಮ ಭಾಗಕ್ಕೆ ಸಚಿವ ಸ್ಥಾನ ನೀಡಿ ಎನ್ನುವ ಬೇಡಿಕೆಗಳನ್ನು ಸಿಎಂ ಮುಂದಿಟ್ಟಿದ್ದಾರೆ. ಜೊತೆಗೆ ಶಾಸಕರ ಕೆಲಸಗಳನ್ನು ಸಚಿವರು ನಿರ್ಲಕ್ಷ್ಯ ಮಾಡದಂತೆ ಸೂಚನೆ ನೀಡಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಮತ್ತು ಶಾಸಕರ ಸಭೆ ಕರೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಮೂರು ತಿಂಗಳಿಗೊಮ್ಮೆ ಈ ರೀತಿಯ ಸಭೆ ಕರೆಯಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.