ETV Bharat / city

ಕೊರೊನಾ ತಂದಿಟ್ಟ ಸಂಕಷ್ಟ: ಸಾರ್ವಜನಿಕರಿಂದ ವಸೂಲಿಗಿಳಿದ ಆಟೋ ಚಾಲಕರು - Auto rickshaw

ಲಾಕ್​ಡೌನ್​ ಅನ್​ಲಾಕ್​ ನಂತರ ಸಾರ್ವಜನಿಕ ಬಸ್​​ಗಳನ್ನು ಹೊರತು ಪಡಿಸಿದರೆ ಪ್ರಯಾಣಿಕರು ಆಟೋಗಳನ್ನೇ ನೆಚ್ಚಿಕೊಂಡರು. ಆದರೆ, ಕೆಲ ಆಟೋ‌ ಚಾಲಕರು ಅದನ್ನೇ ದುರ್ಬಳಕೆ ಮಾಡಿಕೊಂಡು ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

auto-drivers
ವಸೂಲಿಗಿಳಿದ ಆಟೋ ಚಾಲಕರು
author img

By

Published : Sep 25, 2020, 4:32 PM IST

ಬೆಂಗಳೂರು: ಲಾಕ್​ಡೌನ್​ ಅನ್​ಲಾಕ್​ ಆಗುತ್ತಿದ್ದಂತೆ ರಾಜ್ಯದಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸಾರಿಗೆ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕ ಕೋವಿಡ್ ಭೀತಿಯಿಂದ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿದ್ದು, ಅದನ್ನೇ ಲಾಭ ಮಾಡಿಕೊಂಡಿರುವ ಆಟೋ ಚಾಲಕರು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ.

ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದಲೂ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಅತೀ ಹೆಚ್ಚು ಸಮಸ್ಯೆಗೆ ಒಳಗಾದವರು ಅಂದರೆ ದಿನ ದುಡಿಮೆಯ ಕಾರ್ಮಿಕರು. ಇನ್ನು ಆಟೋ ಓಡಿಸಿಕೊಂಡೇ ಜೀವನ ಸಾಗಿಸಬೇಕಿದ್ದ ಚಾಲಕರ ಬದುಕು ಸಹ ಬರ್ಬಾದ್​ ಆಗಿದೆ.

ಲಾಕ್​ಡೌನ್​ ಅನ್​ಲಾಕ್​ ನಂತರ ಸಾರ್ವಜನಿಕ ಬಸ್​​ಗಳನ್ನು ಹೊರತುಪಡಿಸಿದರೆ ಪ್ರಯಾಣಿಕರು ಆಟೋಗಳನ್ನೇ ನೆಚ್ಚಿಕೊಂಡರು. ಆದರೆ, ಕೆಲ ಆಟೋ‌ ಚಾಲಕರು ಅದನ್ನೇ ದುರ್ಬಳಕೆ ಮಾಡಿಕೊಂಡು ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಕೆಲವೆಡೆ 10 ರಿಂದ 50 ರೂಪಾಯಿವರೆಗೆ ಚಾಲಕರು ಹಣ ಪಡೆಯುತ್ತಿದ್ದಾರೆ ಎಂಬುದು ನಿಜ. ಏಕೆಂದರೆ, ಕೊರೊನಾ ಭಯದಿಂದ ಜನ ಸರ್ಕಾರಿ ಬಸ್​​ಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋಗಳು ಈ‌ ರೀತಿ ಮಾಡುತ್ತಿವೆ ಎಂಬುದು ಮೈಸೂರು ಚಾಲಕರೊಬ್ಬರ ಮಾತು.

ಸಾರ್ವಜನಿಕರಿಂದ ವಸೂಲಿಗಿಳಿದ ಆಟೋ ಚಾಲಕರು

ರಾಜ್ಯ ಸರ್ಕಾರದ ಅಂಕಿ - ಅಂಶದ ಪ್ರಕಾರ 1.35 ಲಕ್ಷ ಆಟೋ ಚಾಲಕರಿದ್ದಾರೆ. ಪರ್ಮಿಟ್ ಪಡೆದುಕೊಳ್ಳದೇ ಇರುವವರು ಸೇರಿದಂತೆ ಸುಮಾರು 2 ಲಕ್ಷ ಚಾಲಕರಿದ್ದಾರೆ. ಬಸ್, ರೈಲು‌‌ ನಿಲ್ದಾಣಗಳಲ್ಲಿ ಬರುವ‌ ಆಟೋ ಚಾಲಕರು ಮುಂಜಾನೆಯಿಂದ ತಡರಾತ್ರಿವರೆಗೂ ಆಟೋ ಓಡಿಸುವ ಚಾಲಕರೇ ಗ್ರಾಹಕರಿಂದ‌ ದುಪ್ಪಟ್ಟು ದರ ಕೇಳುತ್ತಾರೆ ಹೊರತು‌ ಎಲ್ಲ ಚಾಲಕರು ದುಬಾರಿ‌ ದರ ಕೇಳುವುದಿಲ್ಲ. ಅದನ್ನು ತಿಳಿಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಮಾಯಕ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ‌‌ ದಂಡ ಹಾಕುತ್ತಾರೆ ಎನ್ನಲಾಗಿದೆ. ‌ಅದೇನೆ ಇರಲಿ ಆಟೋ ಚಾಲಕರ ನಿಗದಿಗಿಂತ ಹೆಚ್ಚು ಬಾಡಿಗೆ ಕೇಳುವುದು ತಪ್ಪು. ಹೀಗೆ ಮಾಡುವುದರಿಂದ ಎಲ್ಲಾ ಆಟೊ ಚಾಲಕರಿಗೆ‌ ಮಸಿ ಬಳಿದಂತಾಗುತ್ತದೆ.

ಆಟೋವನ್ನು ನಂಬಿ ಸಾಕಷ್ಟು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಇದೇ ಆಟೋ ಚಾಲಕರು ಕೆಲವೊಂದು ವಿಶೇಷ ಸಂದರ್ಭಗಳನ್ನು ಬಳಸಿಕೊಂಡು ಪ್ರಯಾಣಿಕರ ಜೇಬರಿಗೆ ಕತ್ತರಿ ಹಾಕುತ್ತಿದ್ದಾರೆ. ಜನರ ಅನಿವಾರ್ಯ ಸಂದರ್ಭಗಳನ್ನೇ ಅವರು ಲಾಭ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ‌ಸುಮಾರು 2 ಸಾವಿರಕ್ಕೂ ಹೆಚ್ಚು ಆಟೋಗಳಿದ್ದು ಎಷ್ಟೋ ಆಟೋ ಚಾಲಕರ ‌ಪರವಾನಗಿ ನವೀಕರಣವಾಲ್ಲ. ಪೊಲೀಸ್ ಇಲಾಖೆ ವರ್ಷಕ್ಕೆ ‌ಒಮ್ಮೆ ಮಾತ್ರ ಆಟೋ‌ಮೀಟರ್ ಪರಿಶೀಲನೆ ಮಾಡುವುದು, ಆಟೋ ವಶಕ್ಕೆ ಪಡೆಯುವ ಕೆಲಸ ಮಾತ್ರ ಮಾಡುತ್ತಿದೆ. ಒಟ್ಟಿನಲ್ಲಿ ಒಂದು‌ ಕಡೆಯಿಂದ ಮತ್ತೊಂದು ಕಡೆ ಅನಿವಾರ್ಯ ಕಾರಣದಿಂದ ಸಂಚರಿಸುವ ಅಮಾಯಕ ಪ್ರಯಾಣಿಕರನ್ನು ಆಟೋ ಚಾಲಕರು ಹಿಂಡಿ ಹಿಪ್ಪೆ ಮಾಡುತ್ತಿರುವುದು ಸುಳ್ಳಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.