ETV Bharat / city

ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನ: ಆರೋಪಿಗಳ ಪತ್ತೆಗೆ ಐದು ತಂಡ ರಚನೆ - ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆ

ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನಿಸಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ನಾಲ್ಕು ತಂಡಗಳು ಘಟನಾ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳ ಮುಖ ಚಹರೆ ಕಲೆಹಾಕುತ್ತಿದ್ದಾರೆ.

attempt-murder-of-rowdy-sheeter-jcb-narayana
ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆ
author img

By

Published : Dec 9, 2021, 8:04 PM IST

ಬೆಂಗಳೂರು : ಕುಖ್ಯಾತ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನಿಸಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಒಂದೊಂದು ತಂಡ ಪ್ರತ್ಯೇಕವಾಗಿ ಹಲವು ಮಾಹಿತಿಗಳನ್ನು ಕಲೆ ಹಾಕಿವೆ ಎನ್ನುವ ಮಾಹಿತಿ ಹೊರಬಿದ್ದಿದೆ.

ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆ ಯತ್ನ ಆರೋಪಿಗಳಿಗೆ ಪೊಲೀಸ್ ಬಲೆ

ಘಟನೆ ನಡೆದ ನಗರದ ಬೇಗೂರು ಕ್ಲಾಸಿಕ್ ಲೇಔಟ್ 12ನೇ ಕ್ರಾಸ್‌ನ ಡಿಎಲ್ಎಫ್ ರಸ್ತೆಯಲ್ಲಿರುವ ಸಿಸಿಟಿವಿ ಹಾಗೂ ಅಕ್ಕಪಕ್ಕದ ರಸ್ತೆಯಲ್ಲಿನ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ, ಆರೋಪಿಗಳ ಮುಖಚಹರೆಯನ್ನು ತನಿಖಾ ತಂಡಗಳು ಪತ್ತೆಹಚ್ಚಿವೆ. ಆರೋಪಿಗಳು ಜೆಸಿಬಿ ನಾರಾಯಣನ ಎದುರಾಳಿ ಗುಂಪಿನವರೇ ಅಥವಾ ಹಳೆ ವೈಷಮ್ಯದಿಂದ ಪರಿಚಯಸ್ಥರೇ ಹತ್ಯೆಗೆ ಸಂಚು ರೂಪಿಸಿದ್ದಾರೆಯಾ ಎಂಬ ಬಗ್ಗೆಯೂ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿವೆ ಎನ್ನಲಾಗುತ್ತಿದೆ.

attempt murder of Rowdy Sheeter JCB Narayana
ರೌಡಿಶೀಟರ್ ಜೆಸಿಬಿ ನಾರಾಯಣ

ಪ್ರಕರಣದ ಹಿನ್ನೆಲೆ : ಡಿಸೆಂಬರ್ 1ರಂದು ಬೆಳಗ್ಗೆ ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹುಳಿಮಾವು ಡಿ.ಎಲ್‌.ಎಫ್ ರಸ್ತೆಯಲ್ಲಿ ಹೊಂಚು ಹಾಕಿದ್ದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಏಕಾಏಕಿ ನಾರಾಯಣನ ಕಾಲಿನ ಬಳಿ ದೌಡಾಯಿಸಿ ಹಲ್ಲೆ ನಡೆಸಲು ಯತ್ನಿಸಿದ್ದರು.

ಅಡ್ಡಗಟ್ಟಿ ನಡೆಸಿದ ದಾಳಿಯ ತೀವ್ರತಗೆ ನಾರಾಯಣ ತಕ್ಷಣ ಕಾರನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಸ್ವಲ್ಪ ದೂರ ಬೆನ್ನಟ್ಟಿದ್ದರು. ಆದರೆ ನಾರಾಯಣ ಕೂದಲೆಳ ಅಂತರದಲ್ಲಿ ಅತಿ ವೇಗವಾಗಿ ಕಾರನ್ನು ರಿವರ್ಸ್ ತೆಗೆದುಕೊಂಡು ಬೇರೆ ರಸ್ತೆಯಲ್ಲಿ ಕ್ಷಣಾರ್ಧದಲ್ಲಿ ಎಸ್ಟೇಪ್ ಆಗಿ ಪ್ರಾಣ ಉಳಿಸಿಕೊಂಡಿದ್ದನು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಘಟನೆಯ ಬಗ್ಗೆ ನಾರಾಯಣ ತಡವಾಗಿ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಆರೋಪಿಗಳ ಪತ್ತೆಗಾಗಿ ರಚಿಸಲಾಗಿರುವ ನಾಲ್ಕು ತಂಡಗಳು ಆರೋಪಿಗಳ ಬಂಧನಕ್ಕೆ ಬಲೆ ಬೀಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.