ಬೆಂಗಳೂರು: ಬೆಡ್ ಹಂಚಿಕೆ ಕುರಿತು ಬೊಮ್ಮನಹಳ್ಳಿ ವಾರ್ ರೂಂನಲ್ಲಿ ಐಎಎಸ್ ಅಧಿಕಾರಿ ಮೇಲೆ ನಡೆದ ಹಲ್ಲೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ಅಧಿಕಾರಿ ನೀಡಿದ ದೂರಿನ ಮೇರೆಗೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಆರೋಪ ಹೊರಿಸಿ ಐಪಿಸಿ ಸೆಕ್ಷನ್ 353 ರ ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಕೋವಿಡ್ ಸೋಂಕಿತರಿಗೆ ಬೆಡ್ ಹಂಚಿಕೆ ವಿಷಯದಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಐಎಎಸ್ ಅಧಿಕಾರಿ ಯಶವಂತ್ ಅವರನ್ನು ಕೆಲವರು ತಳ್ಳಾಡಿದ್ದರು. ಆ ಬಳಿಕ ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಡಲಾಗಿತ್ತು. (ಬೆಡ್ ಬ್ಲಾಕಿಂಗ್ ತಡೆದಿದ್ದಕ್ಕೆ ಐಎಎಸ್ ಅಧಿಕಾರಿ ಮೇಲೆ ಸತೀಶ್ ರೆಡ್ಡಿ ಬೆಂಬಲಿಗರಿಂದ ಹಲ್ಲೆ: ಕಾಂಗ್ರೆಸ್ ಆರೋಪ)