ಬೆಂಗಳೂರು: ಆಭರಣಗಳು ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಅಂತಹವರಿಗೊಂದು ಇಲ್ಲೊಂದು ಸಿಹಿ ಸುದ್ದಿ. ಇಂದಿನಿಂದ ಮೂರು ದಿನಗಳ ಕಾಲ ನಗರದ ರಿಟ್ಜ್ ಕಾರ್ಲ್ಟನ್ ಹೊಟೆಲ್ನಲ್ಲಿ ಏಷ್ಯಾ ಜ್ಯುವೆಲರ್ಸ್ ಮೇಳ ಆರಂಭವಾಗಿದೆ. ನಟಿ ಹರಿಪ್ರಿಯಾ ಈ ಮೇಳಕ್ಕೆ ಚಾಲನೆ ನೀಡಿದರು.
ದೇಶದ ವಿವಿಧೆಡೆಯಿಂದ ಮಾರಾಟಗಾರರು ಇಲ್ಲಿಗೆ ಆಗಮಿಸಿ ಬಗೆಬಗೆಯ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಚಿನ್ನದಬೆಲೆ ನಡುವೆಯೂ ಮೇಳಕ್ಕೆ ಗ್ರಾಹಕರ ದಂಡೇ ಹರಿದು ಬರುತ್ತಿದೆ.
ಆ್ಯಂಟಿಕ್ ಜ್ಯುವೆಲ್ಲರಿ, ಜೈಪುರ್, ಸೂರತ್ ಶೈಲಿಯ ಆಭರಣಗಳು, ಟ್ರೆಂಡಿ ಜ್ಯುವೆಲ್ಸ್, ವಜ್ರಾಭರಣ, ಸಾಂಪ್ರದಾಯಿಕ ಆಭರಣ, ಪ್ಲಾಟಿನಮ್, ವಿವಾಹ ಆಭರಣ, ಕುಂದನ್, ಅಮೂಲ್ಯ ಹರಳುಗಳು ಸೇರಿದಂತೆ ಕಣ್ಮನ ಸೆಳೆಯುವ ವಿವಿಧ ಬಗೆಯ ಆಭರಣಗಳು ಚಿನ್ನದ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.