ETV Bharat / city

ಎಎಸ್ಐಗೆ ಕೊರೊನಾ; ಮೂರು ದಿನ ಬೆಂಗಳೂರು ನಗರ ಆಯುಕ್ತರ ಕಚೇರಿ ಸೀಲ್​​ಡೌನ್​​​

ಬೆಂಗಳೂರು ನಗರ ಪೊಲೀಸರ ಪ್ರಧಾನ ಕಚೇರಿಯ ಎಎಸ್​​​​​ಐಗೆ ಕೊರೊನಾ ಪತ್ತೆಯಾಗಿದೆ. ಹೀಗಾಗಿ, ಮೂರು ದಿನ ಕಮಿಷನರ್ ಕಚೇರಿಯನ್ನು ಬಿಬಿಎಂಪಿ ಸೀಲ್​​​ಡೌನ್ ಮಾಡಿದೆ.

commissioner
ಬೆಂಗಳೂರು ನಗರ ಆಯುಕ್ತರ ಕಚೇರಿ ಸೀಲ್​​ಡೌನ್​​​
author img

By

Published : Jun 26, 2020, 8:15 PM IST

ಬೆಂಗಳೂರು: ನಗರ ಪೊಲೀಸರ ಪ್ರಧಾನ ಕಚೇರಿಯ 3ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್​​​​​ಐಗೆ ಕೊರೊನಾ ಪತ್ತೆಯಾಗಿದ್ದು, ಮೂರು ದಿನಗಳ ಕಾಲ ಕಮಿಷನರ್ ಕಚೇರಿಯನ್ನು ಬಿಬಿಎಂಪಿ ಸೀಲ್​​​ಡೌನ್ ಮಾಡಿದೆ.

commissioner
ಮೂರು ದಿನ ಬೆಂಗಳೂರು ನಗರ ಆಯುಕ್ತರ ಕಚೇರಿ ಸೀಲ್​​ಡೌನ್​​​

ಕಚೇರಿಗೆ ಆರೋಗ್ಯ ಅಧಿಕಾರಿಗಳು ಸ್ಯಾನಿಟೈಸರ್​​​ ಸಿಂಪಡಿಸಲಾಗಿದ್ದು, ಸಾರ್ವಜನಿಕರು, ಇತರೆ ಸಿಬ್ಬಂದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೆಯೇ ಎಎಸ್ಐ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್​​​ನಲ್ಲಿ ಇರುವಂತೆ ಸೂಚಿಸಲಾಗಿದೆ.

ನಂದಿನಿ ಲೇಔಟ್ ಠಾಣಾ ಪೊಲೀಸರು ದರೋಡೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಆ ಆರೋಪಿಗಳಲ್ಲಿ ಕೊರೊನಾ ಪತ್ತೆಯಾಗಿದೆ. ಜೂನ್ 23ರಂದು ಆರೋಪಿಗಳಿಗೆ ಸ್ವಾಬ್ ಟೆಸ್ಟ್ ಮಾಡಿಸಲಾಗಿತ್ತು. ಇಂದು ಪರೀಕ್ಷಾ ವರದಿಯಲ್ಲಿ ಇಬ್ಬರಿಗೂ ಸೋಂಕು ದೃಢಪಟ್ಟಿದೆ.

ಆರೋಪಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಮಲ್ಲೇಶ್ವರಂ ಸಂಚಾರಿ ಠಾಣೆಯ ಹೆಡ್ ಕಾನ್ಸ್​​​ಟೇಬಲ್​​ಗೆ ಕೊರೊನಾ ತಗುಲಿದ್ದು, ಠಾಣೆಗೆ ಸ್ಯಾನಿಟೈಸ್​​​​‌ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.