ETV Bharat / city

ಹೆಚ್.ವಿಶ್ವನಾಥ್ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿದೆ: ಅಶ್ವತ್ಥ ನಾರಾಯಣ ಗೌಡ

ಹೆಚ್‌.ವಿಶ್ವನಾಥ್ ಪಕ್ಷದ ರಾಜ್ಯಾಧ್ಯಕ್ಷರ ಬಳಿ ಚರ್ಚೆ ಮಾಡಬೇಕಿತ್ತು. ಯಾರ ಜೊತೆಗೂ ಚರ್ಚೆ ಮಾಡದೇ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಗೌಡ ಹೇಳಿದರು.

Ashwathanarayana Gowda
ಅಶ್ವತ್ಥ್ ನಾರಾಯಣ ಗೌಡ
author img

By

Published : Jun 18, 2021, 1:17 PM IST

Updated : Jun 18, 2021, 1:37 PM IST

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತಂದಿವೆ. ಈ ಕುರಿತು ಕೇಂದ್ರದ ಸಂಸತ್ ಸಮಿತಿ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯ ನಂತರ ಅವರು ಮಾತನಾಡಿದರು.

ಹೆಚ್.ವಿಶ್ವನಾಥ್ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿದೆ: ಅಶ್ವತ್ಥ ನಾರಾಯಣ ಗೌಡ

ವಿಶ್ವನಾಥ್ ಆರೋಪದ ಬಗ್ಗೆ ನಿನ್ನೆಯೂ ಚರ್ಚೆ ಆಗಿದೆ. ಅವರು ಎಂಎಲ್​ಸಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ವ್ಯಾಪ್ತಿ ಕೇಂದ್ರ ಶಿಸ್ತು ಸಮಿತಿಗೆ ಬರಲಿದೆ. ವಿಶ್ವನಾಥ್ ರಾಜ್ಯಾಧ್ಯಕ್ಷರ ಬಳಿ ಚರ್ಚೆ ಮಾಡಬೇಕಿತ್ತು. ಯಾರ ಜೊತೆಗೂ ಚರ್ಚಿಸದೆ ಮಾಧ್ಯಮಗಳಿಗೆ ಹೇಳಿಕೆ ನೀಡಿರೋದು ಸರಿಯಲ್ಲ. ಅವರು ಮಾಡಿರುವ ಆರೋಪದ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಗಮನಕ್ಕೆ ತರುವ ಕೆಲಸ ಮಾಡ್ತೇವೆ ಎಂದರು.

ಉಳಿದಂತೆ ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ವಿವರಿಸಿದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಜೂನ್ 21 ರಂದು ರಾಷ್ಟ್ರಾದ್ಯಂತ ಯೋಗ ದಿನಾಚರಣೆ. ಬಿಜೆಪಿಯ 311 ಮಂಡಲಗಳ 600ಕ್ಕೂ ಹೆಚ್ಚು ಕಡೆಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುವುದು. ರಾಜ್ಯಾದ್ಯಂತ 11 ಲಕ್ಷ ಸಸಿಗಳನ್ನು ನೆಡಲು ನಿರ್ಧಾರ ಮಾಡಿದ್ದು, ಒಂದು ಸಲ ಬಳಸಿದ ಪ್ಲಾಸ್ಟಿಕ್​ಗಳ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಬೂತ್​ಗಳಲ್ಲೂ ತಲಾ ಇಬ್ಬರು ಹೆಲ್ತ್ ವಾರಿಯರ್​​ಗಳ ನೇಮಕ ಮಾಡುತ್ತೇವೆ. ಜೊತೆಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಶ್ವನಾಥ್ ಆಡಿಯೋ, ವಿಡಿಯೋ ಇದೆ, ಅದರಲ್ಲೇ ಅವರ ಸಂಸ್ಕೃತಿ ಗೊತ್ತಾಗುತ್ತೆ: ರೇಣುಕಾಚಾರ್ಯ

Last Updated : Jun 18, 2021, 1:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.