ETV Bharat / city

ಕಡಿಮೆ ಬೆಲೆಯಲ್ಲಿ ವಿದೇಶಿ ಪ್ರವಾಸ ಎಂದು ಗ್ರಾಹಕರಿಗೆ ಕಾಗೆ ಹಾರಿಸಿದ ಆರೋಪಿ ಅರೆಸ್ಟ್​

ರಿಯಾಯಿತಿ ದರದಲ್ಲಿ ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ, ಗ್ರಾಹಕರಿಂದ ಲಕ್ಷಾಂತರ ರೂ.ಹಣ ಪಡೆದು ವಂಚಿಸಿದ್ದ ವ್ಯಕ್ತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ
author img

By

Published : Sep 20, 2019, 10:52 PM IST

ಬೆಂಗಳೂರು: ರಿಯಾಯಿತಿ ದರದಲ್ಲಿ ವಿದೇಶಿ ಪ್ರವಾಸಕ್ಕೆ ಕರೆದೊಯ್ಯುದಾಗಿ ಭರವಸೆ ನೀಡಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ವಂಚಿಸಿದ್ದ ವ್ಯಕ್ತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಘನಶ್ಯಾಮ್​ ಬಂಧಿತ ಆರೋಪಿ. ಹಲವು ವರ್ಷಗಳಿಂದ ಡಿವಿಜಿ ರಸ್ತೆಯಲ್ಲಿ ಟ್ರಾವೆಲ್ಸ್ ಇಟ್ಟಕೊಂಡಿದ್ದ. ಇದೇ ವರ್ಷ ಫೆಬ್ರುವರಿಯಲ್ಲಿ ಪರಿಚಿತ ಗ್ರಾಹಕರಿಗೆ ಕರೆ ಮಾಡಿ, ಕಡಿಮೆ ಬೆಲೆಯಲ್ಲಿ ಯುರೋಪ್ ಪ್ರವಾಸದ ಪ್ಯಾಕೇಜ್ ಇದೆ. ಮೇ 12 ರಂದು ಪ್ರವಾಸಕ್ಕೆ ಹೋಗಬೇಕಾಗಿದೆ. ಮುಂಗಡವಾಗಿ ಹಣ ನೀಡಬೇಕೆಂದು‌ ನಂಬಿಸಿ 10 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದ. ಇದಕ್ಕೆ ರಶೀದಿಯನ್ನೂ ಸಹ ನೀಡಿದ್ದ ಎನ್ನಲಾಗ್ತಿದೆ.

ಆದ್ರೆ ಪ್ರವಾಸದ ದಿನ ಹತ್ತಿರವಾದರೂ ಟೂರ್ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲವಂತೆ.‌ ಜೊತೆಗೆ ಪ್ರವಾಸ‌ ಮುಂದೂಡಿಕೆಯಾಗಿರುವುದಾಗಿ ಹಲವು ಬಾರಿ ಗ್ರಾಹಕರಿಗೆ ಸತಾಯಿಸಿದ್ದಾನೆ. ಆಗ ಈತನ ಮೇಲೆ ಅನುಮಾನಗೊಂಡ ಗ್ರಾಹಕ ಕೆಂಪರಾಜು ಎಂಬುವರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Intro:Body:ಕಡಿಮೆ ಬೆಲೆಯಲ್ಲಿ ಫಾರಿನ್ ಕರೆದುಕೊಂಡು ಹೋಗುವುದಾಗಿ ನಂಬಿಸಿ ಗ್ರಾಹಕರಿಂದ ಲಕ್ಷಾಂತರ ರೂ.ಪಡೆದು ಟೋಪಿ ಹಾಕಿದ್ದ ಟ್ರಾವೆಲ್ಸ್ ಮಾಲೀಕ ಅರೆಸ್ಟ್

ಬೆಂಗಳೂರು: ರಿಯಾಯಿತಿ ದರದಲ್ಲಿ ಫಾರಿನ್ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ ಗ್ರಾಹಕರಿಂದ ಲಕ್ಷಾಂತರ ರೂ.ಹಣ ಪಡೆದು ವಂಚಿಸಿದ್ದ ಟೂರ್ ಅಂಡ್ ಟ್ರಾವೆಲ್ಸ್ ವೊಂದರ ಮಾಲೀಕನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಡಿವಿಜಿ ರಸ್ತೆಯಲ್ಲಿ ಸಾಯಿರಾಮ್ ಟೂರ್ ಅಂಡ್ ಟ್ರಾವೆಲ್ಸ್ ಮಾಲೀಕ ಘನಶ್ಯಾಮ್ ಬಂಧಿತ ಆರೋಪಿ. ಹಲವು ವರ್ಷಗಳಿಂದ ಡಿವಿಜಿ ರಸ್ತೆಯಲ್ಲಿ ಟ್ರಾವೆಲ್ಸ್ ಇಟ್ಟಕೊಂಡಿದ್ದು ಇದೇ ವರ್ಷ ಫೆಬ್ರುವರಿಯಲ್ಲಿ ಪರಿಚಿತರಿದ್ದ ಗ್ರಾಹಕರಿಗೆ ಕರೆ ಮಾಡಿ ಕಡಿಮೆ ಬೆಲೆಯಲ್ಲಿ
ಯುರೋಪ್ ಪ್ರವಾಸದ ಪ್ಯಾಕೇಜ್ ಇದೆ. ಮೇ 12 ರಂದು ಪ್ರವಾಸಕ್ಕೆ ಹೋಗಬೇಕಾಗಿದೆ. ಮುಂಗಡವಾಗಿ ಹಣ ನೀಡಬೇಕೆಂದು‌ ನಂಬಿಸಿ ಫೆಬ್ರುವರಿಯಲ್ಲಿ ಗ್ರಾಹಕರಿಂದ 10 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡಿದ್ದ. ಇದಕ್ಕೆ ರಶೀದಿ ಸಹ ನೀಡಿದ್ದ. ಪ್ರವಾಸ ದಿನ ಹತ್ತಿರವಾದರೂ ಟೂರ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.‌ ಪ್ರವಾಸ‌ ಮುಂದೂಡಿಕೆಯಾಗಿರುವುದಾಗಿ ಹಲವು ಬಾರಿ ಗ್ರಾಹಕರಿಗೆ ಸತಾಯಿಸಿದ್ದಾನೆ. ಆರೋಪಿ ಮೇಲೆ ಅನುಮಾನಗೊಂಡು ಬಸವನಗುಡಿ ಪೊಲೀಸ್ ಠಾಣೆಗೆ ಗ್ರಾಹಕ ಕೆಂಪರಾಜು ಎಂಬುವರು ದೂರು ನೀಡಿದನ್ವಯ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.