ETV Bharat / bharat

ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್: ಮಹಾರಾಷ್ಟ್ರದ ದಾಳಿಂಬೆ ಉಡುಗೊರೆ - SHARAD PAWAR MEETS PM MODI

ರಾಜ್ಯಸಭಾ ಸಂಸದ ಶರದ್ ಪವಾರ್ ಬುಧವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್
ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್ (ANI)
author img

By ANI

Published : Dec 18, 2024, 5:34 PM IST

ನವದೆಹಲಿ: ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಸಾತಾರಾ ಮತ್ತು ಫಲ್ಟನ್‌ನ ದಾಳಿಂಬೆ ರೈತರೊಂದಿಗೆ ಮೋದಿಯನ್ನು ಭೇಟಿಯಾದ ಅವರು, ದಾಳಿಂಬೆ ಪೆಟ್ಟಿಗೆಯನ್ನು ಉಡುಗೊರೆಯಾಗಿ ಕೊಟ್ಟರು. ಈ ಕುರಿತು ಮಾಹಿತಿ ನೀಡಿದ ಪವಾರ್, ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ ಎಂದರು.

ಫೆಬ್ರವರಿಯಲ್ಲಿ ದೆಹಲಿಯ ತಾಲ್ ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ 98ನೇ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಆಹ್ವಾನಿಸಿ ಪವಾರ್ ಇತ್ತೀಚೆಗೆ ಪ್ರಧಾನಿಗೆ ಪತ್ರ ಬರೆದಿದ್ದರು. ಪ್ರಸಕ್ತ ಭೇಟಿಯ ಸಂದರ್ಭದಲ್ಲಿ ಮೋದಿಯವರ ಮುಂದೆ ಸಾಹಿತ್ಯ ಸಮ್ಮೇಳನದ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ಪವಾರ್ ಪ್ರಧಾನಿಯೊಂದಿಗಿನ ಸಭೆಯ ನಂತರ ಹೇಳಿದರು.

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಭೇಟಿಯಾದ ಪವಾರ್
ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಭೇಟಿಯಾದ ಶರದ್ ಪವಾರ್ (ANI)

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಕೂಡ ಭೇಟಿಯಾದ ಪವಾರ್, ಅವರಿಗೂ ಮಹಾರಾಷ್ಟ್ರದಲ್ಲಿ ಬೆಳೆಯಲಾದ ದಾಳಿಂಬೆಗಳನ್ನು ಉಡುಗೊರೆಯಾಗಿ ನೀಡಿದರು.

ಭೇಟಿಯ ಬಗ್ಗೆ ಉಪರಾಷ್ಟ್ರಪತಿಯವರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, "ಗೌರವಾನ್ವಿತ ಸಂಸತ್ ಸದಸ್ಯ (ರಾಜ್ಯಸಭಾ) ಶರದ್ ಪವಾರ್ ಅವರು ಇಂದು ಗೌರವಾನ್ವಿತ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಸಂಸತ್ ಭವನದಲ್ಲಿ ಭೇಟಿಯಾದರು" ಎಂದು ಬರೆಯಲಾಗಿದೆ.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್-ಎನ್​ಸಿಪಿ (ಎಸ್​ಪಿ) -ಶಿವಸೇನೆ (ಯುಬಿಟಿ) ಎಂವಿಎ ಮೈತ್ರಿಕೂಟವು ಬಿಜೆಪಿ-ಶಿವಸೇನೆ-ಎನ್​ಸಿಪಿಯ ಮಹಾಯುತಿ ಮೈತ್ರಿಕೂಟದ ಎದುರು ಅವಮಾನಕರ ಸೋಲು ಕಂಡಿತ್ತು. 288 ಸದಸ್ಯರ ವಿಧಾನಸಭೆಯಲ್ಲಿ ಮಹಾಯುತಿ 235 ಸ್ಥಾನಗಳನ್ನು ಗೆದ್ದರೆ, ಎಂವಿಎ 46 ಸ್ಥಾನಗಳಿಗೆ ಸೀಮಿತವಾಯಿತು.

ಇದನ್ನೂ ಓದಿ: ಜನನಿಬಿಡ ರಸ್ತೆಯಲ್ಲೇ ಯುವತಿಗೆ 10 ಬಾರಿ ಚಾಕುವಿನಿಂದ ಇರಿದು ಕಾಲ್ಕಿತ್ತ ಕಿಡಿಗೇಡಿ - WOMAN STABBED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.