ETV Bharat / city

ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಅನುದಾನ ರದ್ದು ಕ್ರಮ ಪ್ರಶ್ನಿಸಿ ಅರ್ಜಿ:10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್ - Bangalore news

ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯಕ್ಕೆ ಶಾಶ್ವತ ಅನುದಾನ ರದ್ದುಪಡಿಸಿ ರಾಜ್ಯ ಸರ್ಕಾರ 2008ರ ಡಿ. 3ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ವಿವಿಯ ಉಪನ್ಯಾಸಕ ಬಿ.ಮುರಳೀಧರ ಸೇರಿ ಇತರೆ ಹುದ್ದೆಗಳಲ್ಲಿದ್ದವರು ಹೈಕೋರ್ಟ್‌ಗೆ 2009ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

High Court
ಹೈಕೋರ್ಟ್
author img

By

Published : Jan 26, 2021, 4:47 PM IST

ಬೆಂಗಳೂರು: ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯಕ್ಕೆ ಶಾಶ್ವತವಾಗಿ ಅನುದಾನ ರದ್ದುಪಡಿಸಿ 2008ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿದೆ.

ಈ ಕುರಿತು ಬಿ.ಮುರಳೀಧರ ಹಾಗೂ ಇತರೆ 9 ಮಂದಿ 2012ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ವಿಚಾರಣೆ ನಡೆಸಿ ವಜಾಗೊಳಿಸಿದೆ. ಒಂದೇ ಕೋರಿಕೆಗೆ ಎರಡು ಬಾರಿ ಅರ್ಜಿಗಳನ್ನು ದಾಖಲಿಸಿ ಮತ್ತು 2012ರಿಂದ ಪ್ರಕರಣವನ್ನು ಮುಂದುವರೆಸಿಕೊಂಡು ಬಂದು ಕೋರ್ಟ್ ಸಮಯ ಹಾಳು ಮಾಡಿದ್ದಾರೆ ಎಂಬ ಕಾರಣಕ್ಕೆ ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ:

ಡಾ. ಟಿಎಂಎ ಪೈ ಪ್ರತಿಷ್ಠಾನದ ವತಿಯಿಂದ ಉಡುಪಿಯಲ್ಲಿ ನಡೆಸಲಾಗುತ್ತಿರುವ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ 1977ರಿಂದ ಸರ್ಕಾರದ ಅನುದಾನ ಸಂಹಿತೆಗೆ ಒಳಪಟ್ಟಿತ್ತು. ಆದರೆ ಸರ್ಕಾರಕ್ಕೆ ಭಾರವಾಗಬಾರದು ಎಂಬ ನಿರ್ಧಾರಕ್ಕೆ ಬಂದ ಸಂಸ್ಥೆಯು ಸರ್ಕಾರದ ಅನುದಾನ ಸಂಹಿತೆಯಿಂದ ಹೊರಬರಲು ತೀರ್ಮಾನಿಸಿ ‘ನೀತಿ ನಿರ್ಣಯ’ ಕೈಗೊಂಡಿತು. ಅದರಂತೆ ಮಹಾವಿದ್ಯಾಲಯಕ್ಕೆ ಶಾಶ್ವತ ಅನುದಾನ ರದ್ದುಪಡಿಸಿ ರಾಜ್ಯ ಸರ್ಕಾರ 2008ರ ಡಿ. 3ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ವಿವಿಯ ಉಪನ್ಯಾಸಕ ಬಿ.ಮುರಳೀಧರ ಸೇರಿ ಇತರೆ ಹುದ್ದೆಗಳಲ್ಲಿದ್ದವರು ಹೈಕೋರ್ಟ್‌ಗೆ 2009ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಇದನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. 2011ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ಹೈಕೋರ್ಟ್ ವಿಭಾಗೀಯ ಪೀಠ 2012ರಲ್ಲಿ ರದ್ದುಪಡಿಸಿತ್ತು. ಹಾಗಿದ್ದೂ ಅರ್ಜಿದಾರರು ಅದೇ ವರ್ಷ ಪುನಃ ಏಕಸದಸ್ಯ ಪೀಠದಲ್ಲಿ ಹೊಸದಾಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿ ವಜಾ ಮಾಡಿ, ದಂಡ ವಿಧಿಸಿದೆ.

ಇದನ್ನೂ ಓದಿ: ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಠೇವಣಿ ಹಣ ಹಿಂದಿರುಗಿಸದ ಆರೋಪ: ಹೈಕೋರ್ಟ್ ನೋಟಿಸ್

ಪದೇ ಪದೆ ಅರ್ಜಿ ಸಲ್ಲಿಸಲು ಕಾರಣ:

ಅನುದಾನ ಸಂಹಿತೆಯಿಂದ ಹೊರಬರುವುದು ಸಂಸ್ಥೆಯ ‘ನೀತಿ ನಿರ್ಣಯ’ ವಿಷಯವಾಗಿತ್ತು. ಅದನ್ನು ಒಪ್ಪಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಈ ಆದೇಶದಿಂದ ಸರ್ಕಾರಿ ನೌಕರರಿಗೆ ಸಮಾನವಾಗಿ ಸಿಗಬೇಕಾದ ವೇತನ, ಭತ್ಯೆ ಹಾಗೂ ಸೌಲಭ್ಯಗಳಿಗೆ ತೊಂದರೆ ಆಗಲಿದೆ ಎಂದು ಅರ್ಜಿದಾರ ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ಆಂತಕಗೊಂಡಿದ್ದರು. ಸಂಸ್ಥೆಯ ಇತಿಮಿತಿಯೊಳಗೆ ಸೇವೆ ಮತ್ತು ಸ್ಥಾನಮಾನಕ್ಕೆ ತಕ್ಕ ವೇತನ-ಸೌಲಭ್ಯಗಳನ್ನು ನೀಡಲಾಗುತ್ತದೆ. ಅದಕ್ಕೆ ಸಮಾಧಾನವಿಲ್ಲ ಎಂದಾದರೆ ಸರ್ಕಾರಿ ಕಾಲೇಜುಗಳಿಗೆ ಹೋಗಬಹುದು ಎಂದು ಸಂಸ್ಥೆ ಹೇಳಿತ್ತು. ಬೇರೆ ಸರ್ಕಾರಿ ಕಾಲೇಜುಗಳಿಗೆ ಇವರನ್ನು ನಿಯೋಜಿಸಲು ಸರ್ಕಾರ ಸಹ ಒಪ್ಪಿತ್ತು. ಹಾಗಿದ್ದೂ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ರೈತರ ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ : ಹೆಚ್ ಕೆ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.