ETV Bharat / city

ತುಮಕೂರು ಪಾಲಿಕೆ ಮೇಯರ್ ಮೀಸಲು ಅಧಿಸೂಚನೆ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

author img

By

Published : Feb 23, 2021, 9:06 PM IST

ಮೀಸಲು ಅಧಿಸೂಚನೆ ಪ್ರಶ್ನಿಸಿ ಲಕ್ಷ್ಮಿನರಸಿಂಹರಾಜು ಹಾಗೂ ಇತರೆ 17 ಮಂದಿ ತುಮಕೂರು ನಗರ ಪಾಲಿಕೆ ಸದಸ್ಯರು ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾ. ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ತುಮಕೂರು ಪಾಲಿಕೆ ಮೇಯರ್ ಮೀಸಲು ಪ್ರಶ್ನಿಸಿ ಅರ್ಜಿ

ಬೆಂಗಳೂರು: ತುಮಕೂರು ನಗರ ಪಾಲಿಕೆ ಮೇಯರ್ ಸ್ಥಾನದ ಚುನಾವಣೆಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮೀಸಲು ಅಧಿಸೂಚನೆ ಪ್ರಶ್ನಿಸಿ ಲಕ್ಷ್ಮಿನರಸಿಂಹರಾಜು ಹಾಗೂ ಇತರೆ 17 ಮಂದಿ ತುಮಕೂರು ನಗರ ಪಾಲಿಕೆ ಸದಸ್ಯರು ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾ. ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ ಮತ್ತು ತುಮಕೂರು ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಫೆ. 25ಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಮೀಸಲು ನಿಗದಿಪಡಿಸುವ ಕುರಿತು ರೊಟೇಷನ್ ಪದ್ಧತಿ ಮಾರ್ಗಸೂಚಿ ಹೊರಡಿಸಲಾಗಿದೆ. ಈ ಪ್ರಕಾರ ಆವರ್ತನೆಯು ಒಂದು ಸುತ್ತು ಪೂರ್ಣಗೊಳ್ಳುವವರೆಗೆ ಹಿಂದೆ ಮೀಸಲು ನೀಡಿದ ವರ್ಗಕ್ಕೆ ಮತ್ತೆ ಮೀಸಲು ನೀಡುವಂತಿಲ್ಲ. ಇದು ಸಂವಿಧಾನದ ವಿಧಿ 243(ಟಿ) ಅಡಿ ಕಡ್ಡಾಯ. ಆದರೆ, 2016ರಲ್ಲಿ ಮೇಯರ್ ಹುದ್ದೆಯನ್ನು ಎಸ್‌ಟಿಗೆ ಮೀಸಲಿಡಲಾಗಿತ್ತು. ಇದೀಗ 2021ನೇ ಸಾಲಿನಲ್ಲಿಯೂ ಎಸ್‌ಟಿಗೆ ಮೀಸಲು ನೀಡಿ ಸರ್ಕಾರ ಫೆ. 11ರಂದು ಅಧಿಸೂಚನೆ ಹೊರಡಿಸಿದೆ. 2014ರಿಂದಲೂ ಸಾಮಾನ್ಯ ವರ್ಗಕ್ಕೆ ಮೀಸಲು ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಫೆ. 15ರಂದು ಮೇಯರ್ ಆಯ್ಕೆ ಚುನಾವಣೆ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅದರಂತೆ ಫೆ. 26ರಂದು ಚುನಾವಣೆ ನಡೆಯಲಿದೆ. ಎಸ್‌ಟಿಗೆ ಪದೇ ಪದೆ ಮೀಸಲು ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಎಸ್‌ಟಿಗೆ ಮೀಸಲು ನೀಡಲಾಗಿದೆ. ಆದ್ದರಿಂದ ಸರ್ಕಾರದ ಮೀಸಲು ಅಧಿಸೂಚನೆ ಮತ್ತು ಚುನಾವಣಾ ವೇಳಾಪಟ್ಟಿ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.