ಬೆಂಗಳೂರು: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ನಟ ರಮೇಶ್ ಅರವಿಂದ್, ಸುಧಾರಾಣಿ, ಅನು ಪ್ರಭಾಕರ್ ಸೇರದಂತೆ ಕೆಲ ಗಣ್ಯರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಅನುರಾಗ್ ಠಾಕೂರ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಿನಿಮಾ ಕುರಿತು ಹೆಚ್ಚಿನ ಒಲವು ಹೊಂದಿರುವ ಠಾಕೂರ್, ಈ ಹಿಂದೆ ಗೋವಾದಲ್ಲಿ ನಡೆದ 52ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, 'ನಮ್ಮ ನುರಿತ ಯುವಕರ ತಾಂತ್ರಿಕ ಕೌಶಲ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತವನ್ನು ವಿಶ್ವಕ್ಕೆ ಪೋಸ್ಟ್ ಪ್ರೊಡಕ್ಷನ್ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಜೊತೆಗೆ ದೇಶದ ಪ್ರಾದೇಶಿಕ ಹಬ್ಬಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು' ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ; ಪಿಂಕ್ ಮಿನಿ ಡ್ರೆಸ್ನಲ್ಲಿ ಪಡ್ಡೆ ಹುಡುಗರ ಮನಗೆದ್ದ ಬ್ಯೂಟಿ ಕ್ವೀನ್ ಸಮಂತಾ