ETV Bharat / city

ಕೆ. ಹೆಚ್. ಮುನಿಯಪ್ಪಗೆ ಮುಳ್ಳಾದ ಸಿದ್ದರಾಮಯ್ಯ ವಿರೋಧಿ ನಿಲುವು...

ತಮ್ಮ ಸೋಲಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರಣವೆಂದು ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ರಮೇಶ್ ಕುಮಾರ್ ಅವರ ಅಮಾನತಿಗೆ ಒತ್ತಾಯಿಸಿದ್ದರು. ಆದರೆ ಈ ಆರೋಪವೇ ಈಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ. ಕೋಲಾರದಲ್ಲಿ ಪಕ್ಷ ವಿರೋಧಿ ಕೆಲಸ ಹುಟ್ಟುಹಾಕಿದ್ದೇ ಕೆ ಹೆಚ್ ಮುನಿಯಪ್ಪ ಎಂಬ ಆರೋಪದಡಿ ಮುನಿಯಪ್ಪ ವಿರುದ್ಧ ದೂರು ಸಲ್ಲಿಕೆಯಾಗಿದೆ.

ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ
author img

By

Published : Sep 30, 2019, 10:38 AM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪಗೆ ಈಗ ಸಂಕಷ್ಟ ಶುರುವಾಗಿದೆ.

ತಮ್ಮ ಸೋಲಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರಣವೆಂದು ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ರಮೇಶ್ ಕುಮಾರ್ ಅವರ ಅಮಾನತಿಗೆ ಒತ್ತಾಯಿಸಿದ್ದರು. ಆದ್ರೆ ಈ ಆರೋಪವೇ ಈಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರನ್ನ ಸೋಲಿಸುವ ವಿಚಾರದಲ್ಲಿ ಕೆ ಹೆಚ್ ಮುನಿಯಪ್ಪ ವಿರುದ್ಧ ಕೂಡ ಕೆಪಿಸಿಸಿ ಸತ್ಯಶೋಧನಾ ಸಮಿತಿಗೆ ದೂರು ಸಲ್ಲಿಕೆಯಾಗಿದೆ.

KOLAR CONGRESS COMPLAINT
ದೂರು ಪ್ರತಿ

ಹೌದು.., ಕೋಲಾರದಲ್ಲಿ ಪಕ್ಷ ವಿರೋಧಿ ಕೆಲಸ ಹುಟ್ಟುಹಾಕಿದ್ದೇ ಕೆ ಹೆಚ್ ಮುನಿಯಪ್ಪ ಎಂಬ ಗಂಭೀರ ಆರೋಪವನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯೂಂ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಎದುರಾದ ಸೋಲಿನ ಸಂಬಂಧ ಪರಾಮರ್ಶೆಗೆ ರಚಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಖಯೂಂ ಹಾಗೂ ಬಂಗಾರಪೇಟೆ ಜಿಲ್ಲಾ ಪಂಚಾಯತ್ ಸದಸ್ಯ ಶಾಹಿದ್ ಶಹಜಾದ್ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಸೈಯದ್ ಅಪ್ಸರ್ ಅವರು ದೂರು ನೀಡಿದ್ದಾರೆ.

ಕೋಲಾರ ಲೋಕಸಭೆ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವುದಕ್ಕೆ ಮುನಿಯಪ್ಪನವರೇ ನೇರ ಕಾರಣ. ಚಿಂತಾಮಣಿ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಗೆಲುವಿಗೆ ಮುನಿಯಪ್ಪ ಪಕ್ಷ ವಿರೋಧಿ ಚಟುವಟಿಕೆಗಳೇ ಕಾರಣ. ಅಲ್ಲದೇ ಶಿಡ್ಲಘಟ್ಟ ಕ್ಷೇತ್ರದ ಕೈ ಶಾಸಕ ವಿ. ಮುನಿಯಪ್ಪ ವಿರುದ್ಧವೂ ಮುನಿಯಪ್ಪ ಕೆಲಸ ಮಾಡಿದ್ದಾರೆ. ಅಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿದ್ದಾರೆ. 2008 ರಿಂದಲೂ ಕೆ.ಹೆಚ್. ಮುನಿಯಪ್ಪ, ಪಕ್ಷ ವಿರೋಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಗೆಲುವಿಗೂ ನೇರವಾಗಿ ಮುನಿಯಪ್ಪ ಕಾರಣ. ಮುಸ್ಲಿಂ ಮುಖಂಡ ನಸೀರ್ ಅಹಮದ್​ಗೆ ಕೇವಲ 11 ಮತಗಳನ್ನು ಹಾಕಿಸಿದವರು ಮುನಿಯಪ್ಪ. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಶಂಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 28 ರಂದೇ ಮುನಿಯಪ್ಪ ವಿರುದ್ಧ ಈ ದೂರು ಸಲ್ಲಿಕೆ ಆಗಿದೆ ಎನ್ನಲಾಗ್ತಿದೆ. ಆದರೆ ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಗುಡುಗಿದ ನಂತರವೇ ಈ ದೂರಿನ ಮಾಹಿತಿ ಹೊರಬಿದ್ದಿದ್ದು, ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಆಂತರಿಕ ಕಲಹ, ರಾಜ್ಯಮಟ್ಟದಲ್ಲಿ ಸುದ್ದಿ ಆಗುವುದಕ್ಕೂ ಕಾರಣವಾಗಿದೆ.

Intro:newsBody:ಕೆ.ಎಚ್.ಮುನಿಯಪ್ಪಗೆ ಮುಳ್ಳಾದ ಸಿದ್ದರಾಮಯ್ಯ ವಿರೋಧಿ ನಿಲುವು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಮಾಜಿ ಸಂಸದ ಕೆಎಚ್ ಮುನಿಯಪ್ಪಗೆ ಈಗ ಸಂಕಷ್ಟ ಶುರುವಾಗಿದೆ.
ತಮ್ಮ ಸೋಲಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರಣ ಎಂದು ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ ಅವರು ರಮೇಶ್ ಕುಮಾರ್ ಅವರ ಅಮಾನತಿಗೆ ಒತ್ತಾಯಿಸಿದ್ದರು. ಆದರೆ ಈ ಆರೋಪವೇ ಈಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರನ್ನ ಸೋಲಿಸುವ ವಿಚಾರದಲ್ಲಿ ಕೆ ಎಚ್ ಮುನಿಯಪ್ಪ ವಿರುದ್ಧ ಕೂಡ ಕೆಪಿಸಿಸಿ ಸತ್ಯ ಶೊಧನಾ ಸಮಿತಿಗೆ ದೂರು ಸಲ್ಲಿಕೆಯಾಗಿದೆ.
ದೂರು ಸಲ್ಲಿಕೆ
ಕೋಲಾರದಲ್ಲಿ ಪಕ್ಷ ವಿರೋಧಿ ಕೆಲಸ ಹುಟ್ಟುಹಾಕಿದ್ದೇ ಮುನಿಯಪ್ಪ ಎಂಬ ಗಂಭೀರ ಆರೋಪವನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯೂಂ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಎದುರಾದ ಸೋಲಿನ ಸಂಬಂಧ ಪರಾಮರ್ಶೆಗೆ ರಚಿಸಲಾಗಿರುವ ಸತ್ಯಶೋಧನಾ ಸಮಿತಿ ಖಯೂಂ ಹಾಗೂ ಬಂಗಾರಪೇಟೆ ಜಿಲ್ಲಾ ಪಂಚಾಯತ್ ಸದಸ್ಯ ಶಾಹಿದ್ ಶಹಜಾದ್ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಸೈಯದ್ ಅಪ್ಸರ್ ಅವರು ದೂರು ನೀಡಿದ್ದಾರೆ.
ಕೋಲಾರ ಲೋಕಸಭೆ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಮುನಿಯಪ್ಪನೇ ನೇರ ಕಾರಣ. ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವುದಕ್ಕೆ ನೇರವಾಗಿ ಮುನಿಯಪ್ಪ ರೇ ಕಾರಣ. ಚಿಂತಾಮಣಿ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಗೆಲುವಿಗೆ ಮುನಿಯಪ್ಪ ಪಕ್ಷ ವಿರೋಧಿ ಚಟುವಟಿಕೆಗಳೇ ಕಾರಣ ಎಂದು ಸಹ ದೂರಿನಲ್ಲಿ ವಿವರಿಸಿದ್ದಾರೆ.
ಶಿಡ್ಲಘಟ್ಟ ಕ್ಷೇತ್ರದ ಕೈ ಶಾಸಕ ವಿ ಮುನಿಯಪ್ಪ ವಿರುದ್ಧವೂ ಕೆಎಚ್ ಮುನಿಯಪ್ಪ ಕೆಲಸ ಮಾಡಿದ್ದಾರೆ. ಶಿಡ್ಲಘಟ್ಟದಲ್ಲೂ ಜೆಡಿಎಸ್ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿದ್ದಾರೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯುಂ ಹಾಗೂ ಇತರೆ ಇಬ್ಬರು ಮುಖಂಡರು ಲಿಖಿತರೂಪದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.
2008 ರಿಂದಲೂ ಕೆ.ಎಚ್. ಮುನಿಯಪ್ಪ ಪಕ್ಷ ವಿರೋಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಗೆಲುವಿಗೂ ನೇರವಾಗಿ ಮುನಿಯಪ್ಪ ಕಾರಣ. ಮುಸ್ಲಿಂ ಮುಖಂಡ ನಸೀರ್ ಅಹಮದ್ ಗೆ ಸ್ವಂತ ಮನೆಯಿರುವ ಬೂತ್ ನಲ್ಲಿ ಕೇವಲ 11 ಮತಗಳನ್ನು ಹಾಕಿಸಿದವರು ಕೆ ಎಚ್ ಮುನಿಯಪ್ಪ. 2013 ರ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಶಂಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ಕೆಲಸ ಮಾಡಿದ್ದಾರೆ ಎಂದು ಸತ್ಯ ಶೋಧನಾ ಸಮಿತಿಗೆ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ವಿಶೇಷ ಅಂದರೆ ಆಗಸ್ಟ್ 28ರಂದೇ ಮುನಿಯಪ್ಪ ವಿರುದ್ಧ ಈ ದೂರು ಸಲ್ಲಿಕೆ ಆಗಿದೆ.
ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಅವರು ಗುಡುಗಿದ ನಂತರವೇ ಈ ಪತ್ರದ ಮಾಹಿತಿ ಹೊರಬಿದ್ದಿದೆ ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಆಂತರಿಕ ರಾಜ್ಯಮಟ್ಟದಲ್ಲಿ ಸುದ್ದಿ ಆಗುವುದಕ್ಕೂ ಕಾರಣವಾಗಿದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.