ETV Bharat / city

Annual Krishi Mela: ಉತ್ತಮ ಇಳುವರಿಗಾಗಿ 'ನ್ಯಾನೋ ಯೂರಿಯಾ' ಬಳಕೆ

author img

By

Published : Nov 14, 2021, 7:00 AM IST

ಯಲಹಂಕದ ಜಿಕೆವಿಕೆ ಅವರಣದಲ್ಲಿ (Annual Krishi Mela at GKVK Campus in Yelahanka) ನಡೆಯುತ್ತಿರುವ ಕೃಷಿ ಮೇಳ-2021ರಲ್ಲಿ ನ್ಯಾನೋ ಯೂರಿಯಾ(Nano Urea) ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

Yelahanka
Yelahanka

ಯಲಹಂಕ(ಬೆಂಗಳೂರು): ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕಾದ್ರೆ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಕೃಷಿ ವೆಚ್ಚ ಕಡಿಮೆ ಮಾಡುವಲ್ಲಿ ನ್ಯಾನೋ ಯೂರಿಯಾ (Nano Urea) ರೈತರಿಗೆ ವರವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಹೌದು, ಬೆಳೆಗಳಿಗೆ ಮೂಟೆ ಮೂಟೆ ಯೂರಿಯಾ ಗೊಬ್ಬರ ಸುರಿಯುವ ಬದಲಿಗೆ ಒಂದು ಲೀಟರ್ ನ್ಯಾನೋ ಯೂರಿಯಾ ಬಳಕೆ ಮಾಡಿದ್ರೆ ಸಾಕು. ಜೊತೆಗೆ ಸಾಗಾಣಿಕಾ ವೆಚ್ಚ ಸಹ ಉಳಿತಾಯವಾಗಲಿದ್ದು, ಮೂಟೆ ಯೂರಿಯಾಕ್ಕಿಂತ ನ್ಯಾನೋ ಯೂರಿಯಾದ ಬೆಲೆ ಕಡಿಮೆ ಇರುವುದು ರೈತರಿಗೆ ಸಹಕಾರಿಯಾಗಿದೆ.

ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಮತ್ತು ಹೆಚ್ಚು ಆದಾಯ ಕೊಡುವ ಬೆಳೆ ಬೆಳೆಯಲಾಗುತ್ತಿದೆ. ಹೆಚ್ಚು ಇಳುವರಿ ಮತ್ತು ಹೆಚ್ಚು ಆದಾಯಕ್ಕಾಗಿ ಬೆಳೆಗಳಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರವನ್ನ ಹಾಕಲಾಗುತ್ತಿದೆ. ಅಧಿಕ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರವನ್ನ ಹೊಲಗಳಿಗೆ ಹಾಕುವುದರಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುವುದರ ಜೊತೆಗೆ ಕೃಷಿಗೆ ಹಾಕುವ ವೆಚ್ಚ ಸಹ ಹೆಚ್ಚಾಗುತ್ತಿದೆ.

'ನ್ಯಾನೋ ಯೂರಿಯಾ' ಬಳಕೆ ಕುರಿತು ಮಾಹಿತಿ ನೀಡಿದ ಬೇಸಾಯ ಶಾಸ್ತ್ರಜ್ಞ ಡಾ. ಹನುಮಂತಪ್ಪ

ಯಲಹಂಕದ ಜಿಕೆವಿಕೆ ಅವರಣದಲ್ಲಿ (Annual Krishi Mela at GKVK Campus in Yelahanka) ನಡೆಯುತ್ತಿರುವ ಕೃಷಿ ಮೇಳ-2021ರಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ (Drip Irrigation system) ಭತ್ತವನ್ನು ಬೆಳೆಯಲಾಗಿದ್ದು, ನ್ಯಾನೋ ಯೂರಿಯಾ ಬಳಕೆ ಮಾಡಲಾಗಿದೆ. ಪರಿಣಾಮ ಉತ್ತಮ ಇಳುವರಿ ಬಂದಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಸಾಮಾನ್ಯವಾಗಿ ಒಂದು ಎಕರೆಗೆ ಭತ್ತ ಬೆಳೆಯಲು ರೈತರು 120 ಕೆಜಿ ಸಾರಜನಕವನ್ನು ಹಾಗೂ ಯೂರಿಯಾ ರೂಪದಲ್ಲಿ 50 ಕೆ.ಜಿ ರಂಜಕ, ಪೊಟ್ಯಾಶಿಯಂ 50 ಕೆ.ಜಿ ಬಳಕೆ ಮಾಡಲಾಗುತ್ತದೆ. ಒಂದು ಮೂಟೆ ಯೂರಿಯಾವನ್ನು ಮಣ್ಣಿಗೆ ಹಾಕಿದ್ರೆ ಇದರಲ್ಲಿ ಕೇವಲ 30% ರಷ್ಟು ಮಾತ್ರ ಗೊಬ್ಬರ ಬೆಳೆಗಳಿಗೆ ಸಿಗುತ್ತದೆ. ಉಳಿದ 70% ವ್ಯರ್ಥವಾಗುತ್ತದೆ. ಆದ್ರೆ ನ್ಯಾನೋ ಯೂರಿಯಾ ಬಳಕೆ ಮಾಡಿದ್ರೆ ಶೇಕಡಾ 80 ರಷ್ಟು ಬೆಳೆಗಳಿಗೆ ಸಿಗಲಿದೆ.

2 ಮಿ. ಲೀಟರ್ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆ ನಾಟಿ ಮಾಡಿದ 30 ದಿನಗಳ ನಂತರ ಮತ್ತು ಹೂವು ಬಿಡುವ ಸಮಯದಲ್ಲಿ ಎರಡು ಬಾರಿ ಹಾಕಬೇಕು. ಪ್ರತಿ ಮೂಟೆ ಯೂರಿಯಕ್ಕೆ 400 ರೂಪಾಯಿ ಇದ್ದರೆ ನ್ಯಾನೋ ಯೂರಿಯಾದ ಬೆಲೆ 270 ರೂಪಾಯಿ ಮಾತ್ರ. ಹೀಗಾಗಿ ರೈತರಿಗೆ ಹಣ ಉಳಿತಾಯವಾಗಲಿದ್ದು, ಬಾಟಲ್ ಗಾತ್ರದಲ್ಲಿ ಇರುವುದರಿಂದ ಸಾಗಾಣಿಕೆ ವೆಚ್ಚ ಸಹ ಇರುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.