ETV Bharat / city

ರಾಜ್ಯದಲ್ಲಿ ಸರ್ಕಾರದ ಯಾವುದೇ ಗೋಶಾಲೆಗಳಿಲ್ಲ: ಸಚಿವ ಪ್ರಭು ಚವ್ಹಾಣ್

author img

By

Published : Feb 5, 2021, 7:03 PM IST

ರಾಜ್ಯದಲ್ಲಿ ಸ್ವಯಂ ಸೇವಾ ಸಂಘಗಳು ಗೋಶಾಲೆ ನಡೆಸಿಕೊಂಡು ಬರುತ್ತಿವೆ. ವಯಸ್ಸಾದ ಮತ್ತು ಉಳುಮೆ ಮಾಡಲು ಸಾಧ್ಯವಾಗದ ರಾಸುಗಳನ್ನು ಈ ಗೋಶಾಲೆಗಳಿಗೆ ಬಿಡಲು ಅವಕಾಶ ಕಲ್ಪಿಸಲಾಗಿದೆ. ಗೋಹತ್ಯೆ ಕಾಯ್ದೆ ಜಾರಿಗೆ ಸರ್ಕಾರ ಈಗಾಗಲೇ ಅಗತ್ಯ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಕ್ರಿಯಾ ಯೋಜನೆ ರೂಪಿಸಿಕೊಂಡಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

Animal Husbandry Minister Prabhu Chauhan   statement about goshala
ರಾಜ್ಯದಲ್ಲಿ ಸರ್ಕಾರದ ಯಾವುದೇ ಗೋಶಾಲೆಗಳಿಲ್ಲ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದಿಂದ ಯಾವುದೇ ಗೋಶಾಲೆ ತೆರೆದಿಲ್ಲ, ಆದರೆ ಸ್ವಯಂ ಸೇವಾ ಸಂಸ್ಥೆ, ಸಂಘ ಸಂಸ್ಥೆಗಳಿಂದ 188 ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸ್ವಯಂ ಸೇವಾ ಸಂಘಗಳು ಗೋಶಾಲೆ ನಡೆಸಿಕೊಂಡು ಬರುತ್ತಿವೆ. ವಯಸ್ಸಾದ ಮತ್ತು ಉಳುಮೆ ಮಾಡಲು ಸಾಧ್ಯವಾಗದ ರಾಸುಗಳನ್ನು ಈ ಗೋಶಾಲೆಗಳಿಗೆ ಬಿಡಲು ಅವಕಾಶ ಕಲ್ಪಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ, ವೃತ್ತಿ ನಿರತರಿಗೆ, ಖಾದ್ಯ ಸೇವನೆ ಮಾಡುವವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಗೋಹತ್ಯೆ ಕಾಯ್ದೆ ಜಾರಿಗೆ ಸರ್ಕಾರ ಈಗಾಗಲೇ ಅಗತ್ಯ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಕ್ರಿಯಾ ಯೋಜನೆ ರೂಪಿಸಿಕೊಂಡಿದೆ. ಖಾಸಗಿ ಸಂಘ ಸಂಸ್ಥೆಗಳ ಗೋ ಶಾಲೆಗಳಿಗೆ ಗೋವುಗಳನ್ನು ನೀಡಬಹುದಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಎಂ.ಇಬ್ರಾಹಿಂ, ಗೋಹತ್ಯೆ ನಿಷೇಧ ಬಿಲ್ ತಂದಮೇಲೆ ಸಿದ್ದತೆ ಮಾಡಿಕೊಳ್ಳಲು ಹೊರಟಿದ್ದಾರೆ‌. ಬಿಲ್ ತರುವ ಮೊದಲೇ ಸಿದ್ದಪಡಿಸಿಕೊಳ್ಳಬೇಕಿತ್ತಲ್ಲ ಎಂದು ಪ್ರಶ್ನಿಸಿದರು.

ಪಶುಸಂಗೋಪನಾ ಸಚಿವರ ನೆರವಿಗೆ ಧಾವಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಂದಿನ ಬಜೆಟ್​ನಲ್ಲಿ ಅಗತ್ಯ ಹಣ ಮೀಸಲು ಇರಿಸಲಾಗುತ್ತದೆ. ಎಲ್ಲ ಸಮಸ್ಯೆಗಳ ದೃಷ್ಟಿಯಲ್ಲಿ ಅನುದಾನ ನೀಡಲಾಗುತ್ತದೆ ಎನ್ನುವ ವಿವರಣೆ ನೀಡುತ್ತಾ, ಬಿಲ್ ಮಂಡನೆಗೂ ಮುನ್ನವೇ ಕೆಳಮನೆಯಲ್ಲಿ ಪಾಸ್ ಆಗಿದೆ. ಮೇಲ್ಮನೆಯಲ್ಲಿ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.

ಎರಡು ವರ್ಷದಲ್ಲಿ ಪಶು ಚಿಕಿತ್ಸಾಲಯಗಳಿಗೆ ಸ್ವಂತ ಕಟ್ಟಡ:

ಇನ್ನೆರಡು ವರ್ಷಗಳಲ್ಲಿ ರಾಜ್ಯದಲ್ಲಿರುವ ಸ್ವಂತ ಕಟ್ಟಡ ಇಲ್ಲದ ಎಲ್ಲಾ ಪಶು ಚಿಕಿತ್ಸಾಲಯಗಳಿಗೆ ಸ್ವಂತ ಕಟ್ಟಡ ಕಟ್ಟಿಸಿಕೊಡಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 4,212 ಪಶು ಆಸ್ಪತ್ರೆಗಳಿವೆ. ಅವುಗಳಲ್ಲಿ 200ಕ್ಕೆ ಮಾತ್ರ ಸ್ವಂತ ಕಟ್ಟಡ ಇಲ್ಲ. ನಬಾರ್ಡ್ ಯೋಜನೆಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ನಾನು ಬಂದ ನಂತರ 100 ಕಟ್ಟಡ ನಿರ್ಮಾಣವಾಗಿವೆ. ಎರಡು ವರ್ಷಗಳಲ್ಲಿ 200 ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಮಾಡುವುದಾಗಿ ಭರವಸೆ ನೀಡಿದರು.

ಇನ್ನು, ಪಶುಸಂಗೋಪನಾ ಇಲಾಖೆಯಲ್ಲಿ‌ ಹುದ್ದೆ ಖಾಲಿಯಿದೆ. ಕೊರೊನಾ ಬಂದ ನಂತರ ಸ್ವಲ್ಪ ಅಸ್ತವ್ಯಸ್ತ ಆಗಿರುವುದು ನಿಜ. ಸಿಎಂ ಜೊತೆ ಚರ್ಚೆ ಮಾಡಿ, ಹುದ್ದೆಗಳ ಭರ್ತಿಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಬಾಲ್ಯ ವಿವಾಹ ಕಡಿಮೆ ಮಾಡಲು ಸಮರ್ಪಕ ಕಾರ್ಯ:

ರಾಜ್ಯದಲ್ಲಿ ಕೊರೊನಾ ನಂತರ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, 2017-18ರಲ್ಲಿ 102, 2018-19ರಲ್ಲಿ 119 ಬಾಲ್ಯ ವಿವಾಹ ನಡೆದಿದ್ದು, 2019-20ರಲ್ಲಿ 156 ಬಾಲ್ಯ ವಿವಾಹ ಘಟನೆ ವರದಿಯಾಗಿವೆ. ಕೊರೊನಾ ನಂತರ ಬಾಲ್ಯ ವಿವಾಹ ಹೆಚ್ಚಾಗಿವೆ. ಬಾಲ್ಯ ವಿವಾಹಕ್ಕೆ ಕಾರಣ ಏನು ಎಂದು ಸಮೀಕ್ಷೆ ನಡೆಸಬೇಕಿದೆ. ಬಾಲ್ಯ ವಿವಾಹ ಕಡಿಮೆಯಾಗುವ ರೀತಿಯಲ್ಲಿ ಸಮರ್ಪಕ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಅವ್ಯವಹಾರ ತನಿಖೆ ಸದನ ಸಮಿತಿಗೆ:

ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಅವ್ಯವಹಾರ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ ರಾವ್ ಮಲ್ಕಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶುದ್ಧ ಕುಡಿಯುವ ನೀರು ಘಟಕಗಳ ಅವ್ಯವಹಾರ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ವಹಿಸುವುದಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಇಲ್ಲಿಯೂ ಅದನ್ನೇ ಘೋಷಣೆ ಮಾಡುತ್ತಿದ್ದು, ಆದಷ್ಟು ಬೇಗ ಜಂಟಿ ‌ಸದನ ಸಮಿತಿ ರಚನೆ ಮಾಡಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.