ETV Bharat / city

ವಿಜೃಂಭಣೆಯಿಂದ ಜರುಗಿದ ಆನೇಕಲ್ ದಸರಾ ಉತ್ಸವ.. ಚೌಡೇಶ್ವರಿಯನ್ನು ಹೊತ್ತು ಸಾಗಿದ 'ಧ್ರುವ'

ಕೋವಿಡ್​ ಹಿನ್ನೆಲೆ, ಕಳೆದ ವರ್ಷ ಆನೇಕಲ್ ದಸರಾ ಆಚರಣೆ ಸಾಧ್ಯವಾಗಿರಲಿಲ್ಲ. ಈ ಬಾರಿ ಆನೇಕಲ್ ದಸರಾ ಉತ್ಸವ ವಿಜೃಂಭಣೆಯಿಂದ ನೆರವೇರಿತು.

Anekal Dussehra Festival
ಆನೇಕಲ್ ದಸರಾ ಉತ್ಸವ
author img

By

Published : Oct 16, 2021, 9:14 AM IST

Updated : Oct 16, 2021, 2:55 PM IST

ಆನೇಕಲ್: ಆನೇಕಲ್ ದಸರಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಕೋವಿಡ್​ ಹಿನ್ನೆಲೆ, ಕಳೆದ ವರ್ಷ ಆಚರಣೆ ಸಾಧ್ಯವಾಗಿರಲಿಲ್ಲ. ಈ ಬಾರಿಯ ಆನೇಕಲ್ ದಸರಾ ಆಚರಣೆಗೆ ಕಾತರದಿಂದ ಕಾಯುತ್ತಿದ್ದ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಆನೇಕಲ್ ಪಟ್ಟಣಕ್ಕೆ ಬಂದು ಉತ್ಸವದಲ್ಲಿ ಪಾಲ್ಗೊಂಡರು.

ಆನೇಕಲ್ ದಸರಾ ಉತ್ಸವ

ವಿಭಿನ್ನ ಜಾನಪದ ಕಲಾ ತಂಡಗಳ ನೃತ್ಯ ವೈಭವ, ಆನೇಕಲ್​ನ ಆರಾಧ್ಯ ದೈವ ಚೌಡೇಶ್ವರಿ ದೇವಿಯನ್ನು ಹೊತ್ತ ಕರಿ ಬಸವ ಮಠದ ಧ್ರುವ ಆನೆ ಕಂಡು ಜನರು ಸಂಭ್ರಮಪಟ್ಟರು.

ಸಂಪ್ರದಾಯದಂತೆ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಆನೇಕಲ್ ದಸರಾದ ನೇತೃತ್ವವನ್ನು ತೊಗಟವೀರ ಸಮುದಾಯ ವಹಿಸಿಕೊಂಡಿತ್ತು. ಇದರೊಂದಿಗೆ ಈ ಬಾರಿಯ ದಸರಾ ಸಂಭ್ರಮದ ತೆರೆ ಎಳೆಯಲಾಯಿತು.

ಇದನ್ನೂ ಓದಿ: ಕೋವಿಡ್​ ಲಸಿಕೆ ಅಭಿಯಾನ ಯಶಸ್ವಿ: ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಹಂಪಿ ಸ್ಮಾರಕಗಳಿಗೆ ಮೆರುಗು

Last Updated : Oct 16, 2021, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.