ETV Bharat / city

ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆಯೇ ಇಲ್ಲ: ಎನ್.ರವಿಕುಮಾರ್ - ಕಾಂಗ್ರೆಸ್​ ಬಗ್ಗೆ ರವಿಕುಮಾರ್ ಟೀಕೆ

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಭಾರತರತ್ನ ಅಂಬೇಡ್ಕರ್​ ಜಯಂತಿಯನ್ನು ಆಚರಿಸಲಾಯಿತು.

ambedkar-jayanti
ರವಿಕುಮಾರ್
author img

By

Published : Apr 14, 2022, 3:30 PM IST

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಇನ್ನು 100 ವರ್ಷಗಳ ನಂತರವೂ ಬಾಬಾ ಸಾಹೇಬರ ವಿಚಾರಗಳು ದೇಶಕ್ಕೆ ಬೇಕಾಗಿವೆ. ಸ್ಕೂಲ್ ಬೆಲ್ ಬಾರಿಸುವ ವ್ಯಕ್ತಿಯನ್ನು ಅಂಬೇಡ್ಕರ್​ ಅವರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಎರಡು ಬಾರಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್​ರ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆಯೇ ಇಲ್ಲ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕಿಸಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಡಾ‌ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರು ಅನುಭವಿಸಿದ ಶೋಷಣೆ, ಕಷ್ಟ, ಅವಮಾನವನ್ನು ಬೇರೆ ಯಾರು ಅನುಭವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಮಾತಿಗೆ ಗೌರವ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು, ನಿಷ್ಕ್ರಿಯರಾಗುವುದನ್ನು ನಾವು ಕಾಣುತ್ತೇವೆ. ಆದರೆ, ಅಂಬೇಡ್ಕರ್ ಅದಕ್ಕೆ ವಿರುದ್ಧವಾಗಿದ್ದರು ಎಂದರು.

ಶಿಕ್ಷಣ, ಸಂಘಟನೆ ಇಲ್ಲದೆ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂಬ ಚಿಂತನೆ ಅವರದಾಗಿತ್ತು. ಭಾರತ ಮುಂದೆ ಬರಲು ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ವಿಚಾರಧಾರೆಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು. ಅಂಬೇಡ್ಕರ್​ರ ಶವಸಂಸ್ಕಾರಕ್ಕೆ ಜಾಗವನ್ನೂ ದೆಹಲಿಯಲ್ಲಿ ನೀಡಲಿಲ್ಲ. ಭಾರತರತ್ನವನ್ನು ಕಾಂಗ್ರೆಸ್ ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ವಾಜಪೇಯಿ ಅವರ ಸಲಹೆ ಮೇರೆಗೆ ವಿ.ಪಿ.ಸಿಂಗ್ ಸರ್ಕಾರ ಭಾರತ ರತ್ನ ಗೌರವ ಅವರಿಗೆ ನೀಡಿತು ಎಂದು ತಿಳಿಸಿದರು.

ಪಕ್ಷದ ರಾಜ್ಯ ವಕ್ತಾರ ಡಾ.ಗಿರಿಧರ್ ಉಪಾಧ್ಯಾಯ ಮಾತನಾಡಿ, ಅಂಬೇಡ್ಕರ್ ಅವರ ಬ್ಯಾಡ್ಜ್ ಹಾಕಿಕೊಂಡು ಸತತ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ಅವರು ಇದ್ದಾಗ ಮತ್ತು ಮರಣಾನಂತರ ಅವಮಾನ ಮಾಡುತ್ತಾ ಹೋಗಿತ್ತು ಎಂದು ತಿಳಿಸಿದರು. ಈ ಅವಮಾನವನ್ನು ಸರಿಪಡಿಸುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದರು.

ಇದನ್ನೂ ಓದಿ: ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.