ETV Bharat / city

ನಮಗೂ ಸಭಾಪತಿ ಸ್ಥಾನ ಕೊಡಬೇಕು, ನಾವೇನು ಸನ್ಯಾಸಿಗಳಲ್ಲ: ಬಸವರಾಜ್ ಹೊರಟ್ಟಿ

ಹೊರಟ್ಟಿ ಅವರು ಸಭಾಪತಿ ಆಗಬೇಕು ಅಂತಾ ಹೆಚ್.ಡಿ. ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆ ಇದೆ. ಸಭಾಪತಿ ಸ್ಥಾನ ಜೆಡಿಎಸ್​ಗೆ ಸಿಗಲಿದೆ. ಈಗಾಗಲೇ ಹೆಚ್.ಡಿ. ದೇವೇಗೌಡರು ನನ್ನನ್ನು ಸಭಾಪತಿ ಮಾಡೋ ತೀರ್ಮಾನ ಮಾಡಿದ್ದಾರೆ. ಈ ವಿಚಾರ ನನ್ನ ಬಳಿ ಚರ್ಚೆ ಮಾಡಿಯೇ ತೀರ್ಮಾನ ಆಗಬೇಕಿದೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

author img

By

Published : Jan 20, 2021, 12:49 PM IST

am-also-aspirant-for-the-speaker-post-basavaraj-horatti
ವಿಧಾನ ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ಬೆಂಗಳೂರು: ನಮಗೂ ಸಭಾಪತಿ ಸ್ಥಾನ ಕೊಡಬೇಕು. ನಾವೇನೂ‌ ಸನ್ಯಾಸಿಗಳಲ್ಲ ಎಂದು ವಿಧಾನ ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ನಮಗೂ ಸಭಾಪತಿ ಸ್ಥಾನ ಕೊಡಬೇಕು, ನಾವೇನು ಸನ್ಯಾಸಿಗಳಲ್ಲ: ಬಸವರಾಜ್ ಹೊರಟ್ಟಿ

ವಿಧಾನಸೌಧದಲ್ಲಿ ವಿಧಾನಪರಿಷತ್​ನಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇಟ್ಟುಕೊಂಡಿದ್ದೇವೆ. ವರಿಷ್ಠರು ಹೇಳಿದ ತಕ್ಷಣ ವಿಧಾನಪರಿಷತ್ ಕಾರ್ಯದರ್ಶಿಗೆ ಕೊಡುತ್ತೇವೆ. ಹೊರಟ್ಟಿ ಅವರು ಸಭಾಪತಿ ಆಗಬೇಕು ಅಂತಾ ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ, ವಿಧಾಸಭೆಯ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆ ಇದೆ. ಸಭಾಪತಿ ಸ್ಥಾನ ಜೆಡಿಎಸ್​ಗೆ ಸಿಗಲಿದೆ. ಈಗಾಗಲೇ ಹೆಚ್.ಡಿ. ದೇವೇಗೌಡರು ನನ್ನನ್ನು ಸಭಾಪತಿ ಮಾಡೋ ತೀರ್ಮಾನ ಮಾಡಿದ್ದಾರೆ. ಈ ವಿಚಾರ ನನ್ನ ಬಳಿ ಚರ್ಚೆ ಮಾಡಿಯೇ ತೀರ್ಮಾನ ಆಗಬೇಕಿದೆ ಎಂದರು.

ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಸಭಾಪತಿ ವಿಚಾರವನ್ನ ದೇವೇಗೌಡ, ಕುಮಾರಸ್ವಾಮಿ ಅವರು ತೀರ್ಮಾನ ಮಾಡ್ತಾರೆ. ಜೆಡಿಎಸ್​ನಲ್ಲಿ 13 ಸದಸ್ಯರಿದ್ದಾರೆ ಎಂದರು.

ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ: ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ. ಮಧು ಬಂಗಾರಪ್ಪ ಮನವೊಲಿಕೆ ಮಾಡ್ತೇವೆ. ಅದೇ ರೀತಿ ಜಿ.ಟಿ. ದೇವೇಗೌಡರನ್ನೂ ಭೇಟಿ ಮಾಡ್ತೇವೆ. ಗುಬ್ಬಿ ಶ್ರೀನಿವಾಸ್ ಸೇರಿ ಯಾರ್ಯಾರು ಅಸಮಧಾನಿತರಿದ್ದಾರೋ ಅವರೆಲ್ಲರ ಮನವೊಲಿಸುತ್ತೇವೆ ಎಂದು ಹೊರಟ್ಟಿ ಹೇಳಿದರು.

ನಮ್ಮಲ್ಲಿ ಕಮ್ಯುನಿಕೇಶನ್ ಸಮಸ್ಯೆ ಆಗಿದೆ. ಯಾರು ಏನೇ ಹೇಳಿದ್ರೂ ಅದನ್ನ ನಂಬಿ ಬಿಡ್ತಾರೆ. ಬಿಹಾರ ಮಾದರಿಯಲ್ಲಿ ಜನತಾ ಪರಿವಾರ ಒಗ್ಗೂಡಿಸ್ತೇವೆ. ಜನತಾ ಪರಿವಾರದಿಂದ ಬೇರೆ ಪಕ್ಷಗಳಿಗೆ ಹೋದವರು ಸೋಲನ್ನ ಕಂಡಿದ್ದಾರೆ. ಇಬ್ರಾಹಿಂರನ್ನು ರಾಜ್ಯಾಧ್ಯಕ್ಷ ಮಾಡೋ ತೀರ್ಮಾನವನ್ನು ದೇವೇಗೌಡ್ರು ತಗೋತಾರೆ. 2023ಕ್ಕೆ ಜನತಾ ಪರಿವಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ಕರ್ನಾಟಕ ಸೇರಿ ಎಲ್ಲಾ ಕಡೆ ಪ್ರಾದೇಶಿಕ ಪಕ್ಷಗಳ ಯುಗ ಪ್ರಾರಂಭವಾಗಿದೆ. ಎಲ್ಲಾದನ್ನೂ ಪಕ್ಷದಲ್ಲಿ ಉಳಿಸಿಕೊಳ್ಳೋ ತೀರ್ಮಾನ ಮಾಡುತ್ತಿದ್ದೇವೆ ಎಂದರು.

ಓದಿ: ಬಿಜೆಪಿ ಸರ್ಕಾರ ರೈತರ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ: ಡಿಕೆಶಿ ಗಂಭೀರ ಆರೋಪ

ಜೆಡಿಎಸ್​ನಿಂದ ಹೊರ ಹೋದವರು ಬಹಳ ಜನ ಇದ್ದಾರೆ. ಮತ್ತೆ ಎಲ್ಲರನ್ನೂ ಕರೆಯೋ ಪ್ರಯತ್ನ ಮಾಡ್ತೀವಿ. ಪಕ್ಷ ಬಿಟ್ಟು ಹೋಗಬೇಡಿ ಅಂತ ಮನವೊಲಿಸುತ್ತೇವೆ. ಜೆಡಿಎಸ್ ಬಿಟ್ಟು ಹೋದವರಿಗೆ ಬೇರೆ ಪಕ್ಷಗಳು ಹೊಂದಲ್ಲ ಎಂದು ಜೆಡಿಎಸ್ ನಾಯಕ ಕೋನರೆಡ್ಡಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.